ರಾಹುಲ್‌ ಸವಾಲಿಗೆ ಅವರ ಸರ್ಕಾರದಲ್ಲೇ ಕಿಮ್ಮತ್ತಿಲ್ಲ!: ಬಿಜೆಪಿ ಲೇವಡಿ

Recommended Video

      ರಾಹುಲ್ ಗಾಂಧಿಗೆ ಕರ್ನಾಟಕ ಬಜೆಟ್ ನ ಬಳಸಿ ಬಿಜೆಪಿಯಿಂದ ಲೇವಡಿ | Oneindia Kannada

      ನವದೆಹಲಿ, ಜುಲೈ 5: ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು 1 ರೂಪಾಯಿ ಹೆಚ್ಚಳ ಮಾಡಿರುವುದನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧದ ಟೀಕೆಗೆ ಬಿಜೆಪಿ ಬಳಸಿಕೊಂಡಿದೆ.

      ಇತ್ತೀಚೆಗೆ ಪ್ರಧಾನಿ ಮೋದಿ ಅವರಿಗೆ ರಾಹುಲ್ ಗಾಂಧಿ ನೀಡಿದ್ದ ತೈಲ ಬೆಲೆ ಇಳಿಕೆಯ 'ಫಿಟ್ನೆಸ್ ಚಾಲೆಂಜ್'ಅನ್ನು ಬಿಜೆಪಿ ತಿರುಗುಬಾಣವನ್ನಾಗಿ ಬಳಸಿಕೊಂಡಿದೆ.

      ರೈತರ ಸಾಲ ಮನ್ನಾ ಮಾಡುವುದಕ್ಕಾಗಿ 34,000 ಕೋಟಿ ರೂಪಾಯಿಯನ್ನು ರಾಜ್ಯ ಸಮ್ಮಿಶ್ರ ಸರ್ಕಾರ ತನ್ನ ಚೊಚ್ಚಲ ಬಜೆಟ್‌ನಲ್ಲಿ ಮೀಸಲಿರಿಸಿದೆ.

      bjp criticised Rahul gandhi over tax on petrol and diesel in karnataka budget

      ಇದಕ್ಕೆ ಆದಾಯ ಸಂಗ್ರಹಕ್ಕಾಗಿ ಅದು ವಿದ್ಯುತ್ ದರ, ತೈಲ ಮತ್ತು ಮದ್ಯದ ಮೇಲಿನ ಸುಂಕಗಳನ್ನು ಹೆಚ್ಚಿಸಿದೆ. ಮುಖ್ಯವಾಗಿ ತೈಲ ಬೆಲೆಯ ಮೇಲೆ ವಿಧಿಸಲಾದ ತೆರಿಗೆಯನ್ನು ಬಿಜೆಪಿ ಲೇವಡಿ ಮಾಡಿದೆ.

      ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಚಾಲೆಂಜ್ಅನ್ನು ಸ್ವೀಕರಿಸಿದ್ದ ಪ್ರಧಾನಿ ಮೋದಿ ಅವರಿಗೆ ರಾಹುಲ್ ಗಾಂಧಿ, ತೈಲ ಬೆಲೆಯನ್ನು ಕಡಿಮೆ ಮಾಡಿ. ಇಲ್ಲದಿದ್ದರೆ ದೇಶದಾದ್ಯಂತ ಪ್ರತಿಭಟನೆ ನಡೆಸಿ ಒತ್ತಡ ಹೇರಲಾಗುವುದು. ನಿಮ್ಮಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತೇನೆ ಎಂದು ರಾಹುಲ್ ಗಾಂಧಿ ತಮ್ಮ ಸವಾಲನ್ನು ಮೋದಿ ಅವರಿಗೆ ಹಾಕಿದ್ದರು.

      ಆ ಟ್ವೀಟ್‌ಅನ್ನು ಬಳಸಿಕೊಂಡಿರುವ ಬಿಜೆಪಿ, 'ರಾಹುಲ್ ಗಾಂಧಿ ಅವರ #ಫ್ಯೂಯೆಲ್‌ಚಾಲೆಂಜ್‌ ಅನ್ನು ಸ್ವೀಕರಿಸುವವರೇ ಇಲ್ಲ, ಅವರದೇ ಸರ್ಕಾರ ಕೂಡ! ನಿಮಗೆ ಯಾವುದೇ ಜ್ಞಾನ ಇಲ್ಲದಿದ್ದಾಗ ಗೊತ್ತಿರುವಂತೆ ನಟಿಸುವ ಮತ್ತು ಉಪದೇಶ ಮಾಡಲು ಹೋದಾಗ ಈ ರೀತಿ ಆಗುತ್ತದೆ' ಎಂದು ಟ್ವೀಟ್ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+