ಏಕಾಂಗಿಯಾಗಿ ನದಿ ಸ್ವಚ್ಛಗೊಳಿಸಿ ವಿಶ್ವದ ಗಮನ ಸೆಳೆದ ಯುವಕನಿಗೆ ವಿದೇಶಿ ಕಂಪನಿಯಿಂದ ಬಂತು ಬಂಪರ್ ಆಫರ್

Inspiring Story: ಈಗಿನ ಕಾಲದ ಬಹುತೇಕ ಮಂದಿ ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್, ಕಮೆಂಟ್‌ಗಳ ಬೆನ್ನತ್ತಿ ಓಡುತ್ತಿದ್ದಾರೆ. ಆದರೆ ಈ ನಡುವೆಯೇ ಯುವಕನೊಬ್ಬ ಕಸದಿಂದ ತುಂಬಿ ಕೊಳಕು ವಾಸನೆಯಿಂದ ಕೂಡಿದ್ದ ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸಿ ವಿಶ್ವದ ಗಮನ ಸೆಳೆದಿದ್ದು, ಅಪಾರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಈತನಿಗೆ ದೊಡ್ಡ ಕಂಪನಿಯಿಂದ ಆಫರ್ ಕೂಡ ಬಂದಿದೆ ಎಂದು ತಿಳಿದುಬಂದಿದೆ.

ಮಧ್ಯಪ್ರದೇಶದ 20 ವರ್ಷದ ಬಿ.ಎಸ್ಸಿ ವಿದ್ಯಾರ್ಥಿಯೊಬ್ಬ ಸಮಾಜಕ್ಕೆ ಮಾದರಿಯಾಗುವಂತಹ ಕ್ರಾಂತಿಯನ್ನೇ ಸೃಷ್ಟಿಸಿದ್ದಾನೆ. ಹುಚ್ಚ ಎಂದವರ ಎದುರಲ್ಲೇ, ಕೊಳಕು ನಾರುತ್ತಿದ್ದ ನದಿಯೊಂದನ್ನು ಸ್ವಂತ ಹಣ ಹಾಗೂ ಪರಿಶ್ರಮದಿಂದ ಸ್ವಚ್ಛಗೊಳಿಸಿ ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿಪತಾಕೆಯನ್ನು ಹಾರಿಸಿದ್ದಾನೆ. ಆತನ ಈ ನಿಸ್ವಾರ್ಥ ಸಾಧನೆಗೆ ದೇಶದ ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಮಾತ್ರವಲ್ಲದೆ, ವಿದೇಶಗಳ ದೊಡ್ಡ ದೊಡ್ಡ ಸಂಸ್ಥೆಗಳಿಂಗಳು ಶಹಬ್ಬಾಸ್‌ ಎಂದಿವೆ.

Bittu Tabahi Madhya Pradesh Youth Cleans Polluted River Gets Global Job Offer Know details

ದೇಶಾದ್ಯಂತ ಮೆಚ್ಚುಗೆಗಳ ಸುರಿಮಳೆ

ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬಿಯಾವೋರಾ ಮೂಲದ 20 ವರ್ಷದ ಬಿ.ಎಸ್ಸಿ ವಿದ್ಯಾರ್ಥಿ ಸುರೇಂದ್ರ ಸಿಂಗ್ ಚೌಧರಿ (ಸಾಮಾಜಿಕ ಜಾಲತಾಣಗಳಲ್ಲಿ 'ಬಿಟ್ಟು ತಬಾಹಿ' ಎಂದೇ ಚಿರಪರಿಚಿತ) 'ಅಜ್ನಾರ್ ನದಿ'ಯನ್ನು ಸ್ವಂತ ಖರ್ಚಿನಲ್ಲಿ ಹಾಗೂ ಏಕಾಂಗಿಯಾಗಿ ಸ್ವಚ್ಛಗೊಳಿಸಿ ದೇಶಾದ್ಯಂತ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯಾರು ಈ ಬಿಟ್ಟು ತಬಾಹಿ?

ಬಿಯಾವೋರಾದ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಎಸ್ಸಿ ಓದುತ್ತಿರುವ ಸುರೇಂದ್ರ ಸಿಂಗ್, ಪ್ರತಿದಿನ ನದಿಯ ಬದಿಯಲ್ಲಿ ಹಾದುಹೋಗುವಾಗ ಕಸ, ಪ್ಲಾಸ್ಟಿಕ್ ಹಾಗೂ ಪಾಚಿಯಿಂದ ಕೂಡಿದ್ದ ನದಿಯ ಸ್ಥಿತಿ ಕಂಡು ಮರುಗುತ್ತಿದ್ದರು. ಜನವರಿ 26ರ ಗಣರಾಜ್ಯೋತ್ಸವದಂದು ದೇಶಕ್ಕಾಗಿ ಏನಾದರೂ ಅರ್ಥಪೂರ್ಣ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ, ಯಾವುದೇ ಸರ್ಕಾರಿ ಸಹಾಯ ಅಥವಾ ಯಂತ್ರೋಪಕರಣಗಳ ನಿರೀಕ್ಷೆಯಿಲ್ಲದೆ ತಾವೇ ನೇರವಾಗಿ ನದಿಗಿಳಿದು ಕಸ ತೆಗೆಯಲು ಆರಂಭಿಸಿದರು.

ಸವಾಲುಗಳು, ಟೀಕೆಗಳನ್ನ ಮೆಟ್ಟಿ ನಿಂತ ಯುವಕ

ಸುರೇಂದ್ರ ಅವರ ಈ ಕೆಲಸಕ್ಕೆ ಆರಂಭದಲ್ಲಿ ಹಲವು ಅಡೆತಡೆಗಳು ಎದುರಾದವು. ಕಲುಷಿತ ನೀರಿನಲ್ಲಿ ನಿರಂತರವಾಗಿ ಕೆಲಸ ಮಾಡಿದ್ದರಿಂದ ಅವರ ಕೈ-ಕಾಲುಗಳ ಚರ್ಮ ಸುಲಿದು ತೀವ್ರ ಸೋಂಕು ಉಂಟಾಯಿತು. ಕಸ ತೆರವುಗೊಳಿಸುವ ವೇಳೆ ಹಾವಿನಿಂದ ಅಪಾಯಕಾರಿ ಸನ್ನಿವೇಶವೂ ಎದುರಾಗಿತ್ತು.

ಕೆಲ ಸ್ಥಳೀಯರು ಅವರನ್ನು 'ಹುಚ್ಚ' ಎಂದು ಕರೆದಿದ್ದರು. ಅಷ್ಟೇ ಅಲ್ಲದೆ ಕೇವಲ ಸಾಮಾಜಿಕ ಜಾಲಯಾಣದಲ್ಲಿ ಲೈಕ್ಸ್, ಕಾಮೆಂಟ್‌ಗಳಿಗಾಗಿ ನಾಟಕ ಮಾಡುತ್ತಿದ್ದಾನೆ ಎಂದೂ ಗೇಲಿ ಮಾಡಿದರು. ಕೆಲವರು ಅವರ ವಿಡಿಯೋಗಳು ಮತ್ತು 'Before-After' ಎಂಬ ಪೋಸ್ಟರ್‌ಗಳು ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಿದ್ದೆಂದು ಆರೋಪಿಸಿದರು. ಆದರೆ, ಇವೆಲ್ಲವನ್ನೂ ಮೆಟ್ಟಿ ನಿಂತ ಸುರೇಂದ್ರ, ಸುಮಾರು ₹30,000 ಸ್ವಂತ ಹಣ ಹಾಗೂ ಗೆಳೆಯರಿಂದ ಸಂಗ್ರಹಿಸಿದ ಹಣ ಬಳಸಿ ಕಸದ ಬುಟ್ಟಿಗಳು ಮತ್ತು ಸ್ವಚ್ಛತಾ ಉಪಕರಣಗಳನ್ನು ಖರೀದಿಸಿ ಕಾರ್ಯ ಮುಂದುವರಿಸಿದರು. ಆರಂಭದಲ್ಲಿ ಕುಟುಂಬದವರಿಗೂ ಈ ವಿಷಯ ತಿಳಿದಿರಲಿಲ್ಲ.

ಜಾಗತಿಕ ಮಟ್ಟದ ಉದ್ಯಮಿಗಳಿಂದ ಮೆಚ್ಚುಗೆ

ಸುರೇಂದ್ರ ಅವರ ಈ ನಿಸ್ವಾರ್ಥ ಸೇವೆಯ 'Before ಮತ್ತು After' ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ದೇಶದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಕೂಡ ಟ್ವಿಟರ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. 'ಇವರು ನನ್ನ ಸೋಮವಾರದ ಪ್ರೇರಣೆ (#MondayMotivation),' ಎಂದು ಬರೆದುಕೊಂಡಿದ್ದರಿ. ಈ ಪೋಸ್ಟ್ ನಂತರ ಅವರ ಕುಟುಂಬಕ್ಕೂ ಈ ವಿಷಯ ತಿಳಿಯಿತು.

ಬಿಟ್ಟುಗೆ ದೊಡ್ಡ ಕಂಪನಿಯಿಂದ ಬಂತು ಆಫರ್

ಅಲ್ಲದೆ ನೆದರ್‌ಲ್ಯಾಂಡ್ಸ್ ಮೂಲದ ಜಾಗತಿಕ ಸಂಸ್ಥೆ 'ದಿ ಓಷನ್ ಕ್ಲೀನಪ್‌'ನ ಸಿಇಒ ಮತ್ತು ಸಂಸ್ಥಾಪಕ ಬೊಯಾನ್ ಸ್ಲಾಟ್ (Boyan Slat) ಸುರೇಂದ್ರ ಅವರ ಕೆಲಸವನ್ನು ನೋಡಿ 'ನಮ್ಮೊಂದಿಗೆ ಬಂದು ಕೆಲಸ ಮಾಡಿ' (Come work for us) ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ.

ಬಿಟ್ಟು ಬೆಂಬಲಕ್ಕೆ ನಿಂತ ಸರ್ಕಾರ

ಸುರೇಂದ್ರ ಅವರ ಸತತ 7-8 ತಿಂಗಳ ಪರಿಶ್ರಮದ ನಂತರ ಅಜ್ನಾರ್ ನದಿ ಸಂಪೂರ್ಣ ಸ್ವಚ್ಛವಾಯಿತು. ಇದನ್ನು ಗಮನಿಸಿದ ಮಧ್ಯಪ್ರದೇಶದ ಸ್ಥಳೀಯ ನಗರಸಭೆಯು ಬಳಿಕ ಜೆಸಿಬಿ ಯಂತ್ರಗಳನ್ನು ಕಳುಹಿಸಿ ಉಳಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಲು ನೆರವಾಯಿತು. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸುರೇಂದ್ರ ಅವರನ್ನು ಭೋಪಾಲ್‌ನ ತಮ್ಮ ಅಧಿಕೃತ ನಿವಾಸಕ್ಕೆ ಆಹ್ವಾನಿಸಿ ಗೌರವಿಸಿದರು. ಯಾವುದೇ ದೊಡ್ಡ ಸಂಘಟನೆ ಅಥವಾ ಯಂತ್ರಗಳಿಲ್ಲದೆ ಒಬ್ಬ ಸಾಮಾನ್ಯ ಯುವಕ ಮನಸ್ಸು ಮಾಡಿದರೆ ಪರಿಸರದಲ್ಲಿ ಎಂತಹ ಮಹತ್ತರ ಬದಲಾವಣೆ ತರಬಹುದು ಎಂಬುದಕ್ಕೆ 'ಬಿಟ್ಟು ತಬಾಹಿ' ಅವರ ಈ ಸಾಧನೆಯೇ ಪ್ರಮುಖ ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+