ಬಿಹಾರದಲ್ಲಿ 600 ಸಮಾವೇಶ ನಡೆಸಲಿದೆ ಬಿಜೆಪಿ

ಪಾಟ್ನಾ, ಸೆಪ್ಟೆಂಬರ್ 25 : ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಕಾವು ನಿಧಾನವಾಗಿ ಏರತೊಡಗಿದೆ. ಬಿಹಾರದಲ್ಲಿ ಅಧಿಕಾರ ಹಿಡಿಯಲು ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿ ರಾಜ್ಯದಲ್ಲಿ 600 ಸಮಾವೇಶಗಳನ್ನು ಆಯೋಜನೆ ಮಾಡಲಿದೆ. 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಸಿದ್ಧಗೊಳಿಸಿದೆ.

ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ 5 ಹಂತದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ಚುನಾವಣಾ ಪ್ರಚಾರ ನಡೆಸಲು 600 ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದೆ. ಮೊದಲ ಹಂತದ ಚುನಾವಣೆ ಅಕ್ಟೋಬರ್ 12ರಂದು ನಡೆಯಲಿದ್ದು, ಅದಕ್ಕೂ ಮೊದಲೇ 200 ಸಮಾವೇಶ ನಡೆಸಲು ಯೋಜನೆ ರೂಪಿಸಿದೆ. [ಬಿಹಾರ ಸೀಟು ಹಂಚಿಕೆ ಲೆಕ್ಕಾಚಾರ]

bjp

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂತಾದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪಕ್ಷ ಸಿದ್ಧಗೊಳಿಸಿದ್ದು ಎಲ್ಲಾ ನಾಯಕರು ಬಿಡುವಿಲ್ಲದಂತೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರೇ 20ಕ್ಕೂ ಹೆಚ್ಚು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. [ಬಿಹಾರ ಚುನಾವಣಾ ವೇಳಾಪಟ್ಟಿ]

ತಂತ್ರಜ್ಞಾನದ ಬಳಕೆ : ಬಿಹಾರ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಜಿಪಿಎಸ್ ವ್ಯವಸ್ಥೆಯುಳ್ಳ ಪ್ರಚಾರ ರಥಗಳನ್ನು ಸಿದ್ಧಪಡಿಸಿದೆ. ಯಾವ ರಥ ಎಲ್ಲಿ ಪ್ರಚಾರ ನಡೆಸುತ್ತಿದೆ? ಎನ್ನುವ ಕ್ಷಣ-ಕ್ಷಣದ ಮಾಹಿತಿ ಪಾಟ್ನಾದಲ್ಲಿರುವ ನಿಯಂತ್ರಣ ಕೇಂದ್ರಕ್ಕೆ ದೊರೆಯುತ್ತಿರುತ್ತದೆ. [ಬಿಹಾರದಲ್ಲಿ ಮೋದಿ ಸೂಟ್-ಬೂಟ್ ಬಗ್ಗೆ ರಾಹುಲ್ ಮಾತು]

ಈ ಡಿಜಿಟಲ್ ರಥಗಳು ದೊಡ್ಡ ಸ್ಕ್ರೀನ್‌ಗಳನ್ನು ಹೊಂದಿದ್ದು ಪಕ್ಷದ ಸಾಧನೆಗಳನ್ನು ಆಡಿಯೋ ಮತ್ತು ವಿಡಿಯೋ ಮೂಲಕ ಜನರಿಗೆ ತಲುಪಿಸಲಾಗುತ್ತದೆ. ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಮಾಡುವ ಬದಲಾವಣೆಗಳ ಕುರಿತು ವಿಡಿಯೋವನ್ನು ಸಿದ್ಧಪಡಿಸಲಾಗಿದೆ.

ಅಂದಹಾಗೆ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಸೆ.15ರ ಮಂಗಳವಾರ ಚುನಾವಣಾ ಅಧಿಸೂಚನೆ ಪ್ರಕಟಗೊಂಡಿದ್ದು, ಒಟ್ಟು 5 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 8ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+