TIF Research exit poll: ಟಿಐಎಫ್ ರೀಸರ್ಚ್ ಪ್ರಕಾರ ಬಿಹಾರದಲ್ಲಿ ಮತ್ತೆ ಎನ್‌ಡಿಎ ಸರ್ಕಾರ
ಎರಡು ಹಂತಗಳಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಗೆ ತೆರೆಬಿದ್ದಿದೆ. ಇಂದು ಎರಡನೇ ಹಂತದ ಚುನಾವಣೆ ಪೂರ್ಣಗೊಂಡಿದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ ಬಿಹಾರ ವಿಧಾನಸಭೆ ಚುನಾವಣೆ-2025 ರ ಎರಡನೇ ಹಂತದಲ್ಲಿ ಅಂದಾಜು 68.52% ಮತದಾನ ದಾಖಲಾಗಿದೆ. ಮತದಾನ ಮುಗಿದ ಬೆನ್ನಲ್ಲೇ ವಿವಿಧ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯ (ಎಕ್ಸಿಟ್ ಪೋಲ್) ಫಲಿತಾಂಶ ಪ್ರಕಟಿಸಿವೆ. ಟಿಐಎಫ್ ರೀಸರ್ಚ್ (TIF Research) ಸಂಸ್ಥೆಯ ಪ್ರಕಾರ ಈ ಚುನಾವಣೆಯಲ್ಲೂ ಎನ್‌ಡಿಎ ಒಕ್ಕೂಟವು ಭಾರೀ ಸ್ಥಾನಗಳನ್ನು ಪಡೆಯುವ ಮೂಲಕ ಸರ್ಕಾರ ರಚನೆ ಮಾಡಲಿದೆ ಎಂದು ಭವಿಷ್ಯ ನುಡಿದಿದೆ.
ಟಿಐಎಫ್ ರೀಸರ್ಚ್‌ನ ಎಕ್ಸಿಟ್ ಪೋಲ್ ವರದಿ ಹೇಳುವಂತೆ ಈ ಬಾರಿ ಎನ್‌ಡಿಎ ಒಕ್ಕೂಟಕ್ಕೆ 145-163 ಸ್ಥಾನಗಳು ಸಿಗಲಿವೆ. ಮಹಾಘಟಬಂಧನ್‌ಗೆ 76-95 ಸ್ಥಾನಗಳು ಸಿಗುವ ಮೂಲಕ ಎಂದಿನಂತೆ ವಿರೋಧ ಪಕ್ಷವಾಗಿ ಮುಂದುವರಿಯಲಿದೆ. ಇತರೆ ಪಕ್ಷಗಳು 3-6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಹೇಳಿದೆ.

243 ವಿಧಾನಸಭಾ ಸ್ಥಾನಗಳಲ್ಲಿ ಒಂದು ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚಿಸಲು ಕನಿಷ್ಠ 122 ಸ್ಥಾನಗಳನ್ನು ಗೆಲ್ಲಬೇಕಿದೆ. ಆದರೆ ಟಿಐಎಫ್ ರೀಸರ್ಚ್‌ನ ಎಕ್ಸಿಟ್ ಪೋಲ್ ಪ್ರಕಾರ ಎನ್‌ಡಿಎ ಒಕ್ಕೂಟಕ್ಕೆ 145-163 ಸ್ಥಾನಗಳು ಸಿಗುವ ಹಿನ್ನೆಲೆ ಪೂರ್ಣ ಬಹುಮತದೊಂದಿಗೆ ಮತ್ತೆ ಬಿಹಾರದಲ್ಲಿ ಅಧಿಕಾರಕ್ಕೇರಲಿದೆ ಎಂದು ಅಂದಾಜಿಸಲಾಗಿದೆ.
ಮಹಾಘಟಬಂಧನ್ ಸರ್ಕಾರ ರಚನೆ ಖಚಿತ
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಅವರು ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚನೆ ಖಚಿತ ಎಂದಿದ್ದಾರೆ. ನಾನು ಎಕ್ಸಿಟ್ ಪೋಲ್ ಬಗ್ಗೆ ಮಾತನಾಡುವುದಿಲ್ಲ. ಫಲಿತಾಂಶಗಳು ಹೊರಬಂದಾಗ ನಾವು ಅದರ ಬಗ್ಗೆ ಚರ್ಚಿಸುತ್ತೇವೆ. ಆದಾಗ್ಯೂ, ಬಿಹಾರದ ಮತದಾನದ ಹಕ್ಕನ್ನು ದುರುಪಯೋಗಪಡಿಸಿಕೊಂಡಿರುವುದರಿಂದ ಅದಕ್ಕೆ ಪಾಠ ಕಲಿಸುತ್ತದೆ. ಮಹಾಘಟಬಂಧನ್ ಸರ್ಕಾರ ರಚಿಸುತ್ತದೆ ಎಂದು ನನಗೆ ಖಚಿತವಾಗಿದೆ" ಎಂದು ಹೇಳಿದ್ದಾರೆ.
"ಚುನಾವಣೆಗಳು ನಡೆದ ರೀತಿ ನೋಡಿದರೆ, 2010ರ ದಾಖಲೆಯನ್ನು ಮುರಿಯಬಹುದು ಎಂದು ನಾನು ನಂಬುತ್ತೇನೆ. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುತ್ತಾರೆ. ಅವರ ನೇತೃತ್ವದಲ್ಲಿ ಚುನಾವಣೆಗಳು ನಡೆದವು ಮತ್ತು ಸರ್ಕಾರ ಅವರ ನೇತೃತ್ವದಲ್ಲಿ ನಡೆಯುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಅಜಯ್ ಅಲೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಮಹಾಘಟಬಂಧನ್ ಈಗಾಗಲೇ ಸೋಲನ್ನು ಒಪ್ಪಿಕೊಂಡಿದೆ ಎಂದು ಬಿಹಾರ ಚುನಾವಣೆಗಳ ಕುರಿತು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ. ಮಾಫಿಯಾ ದೀರ್ಘಕಾಲ ಬದುಕಲಿ ಎಂದು ಹೇಳುವವರಿಗೆ ಯಾರು ಮತ ಹಾಕುತ್ತಾರೆ? ನಮಗೆ ಮಹಿಳೆಯರಿಂದ ಬೆಂಬಲವಿದೆ. ದೊಡ್ಡ ಬದಲಾವಣೆಯಾಗಿದೆ. ಮಹಿಳೆಯರು ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ ಅವರನ್ನು ಬೆಂಬಲಿಸುತ್ತಾರೆ ಮತ್ತು ನಂಬುತ್ತಾರೆ ಎಂದಿದ್ದಾರೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications