Bihar Election 2025: ಬಿಹಾರದಲ್ಲಿ ಮತದಾನ ನಿಧಾನ, ಈವರೆಗೂ ಆಗಿರುವ ವೋಟಿಂಗ್ ಎಷ್ಟು?
ಬಿಹಾರ ವಿಧಾನಸಭೆ ಚುನಾವಣೆ ಕನ್ಯಾಕುಮಾರಿ ಟು ಕಾಶ್ಮೀರ ದೊಡ್ಡ ಸೌಂಡ್ ಮಾಡಿತ್ತು, ಅತ್ತ ಬಿಜೆಪಿ & ಜೆಡಿಯು ನೇತೃತ್ವದಲ್ಲಿ ಎನ್‌ಡಿಎ ಮತ್ತೆ ಸರ್ಕಾರ ರಚಿಸಲು ಎಲ್ಲಾ ರೀತಿಯ ಪ್ಲಾನಿಂಗ್ ಮಾಡಿದೆ. ಮತ್ತೊಂದು ಕಡೆ ಕಾಂಗ್ರೆಸ್ & ಆರ್‌ಜೆಡಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರ ಹಿಡಿಯಲು ಎಲ್ಲಾ ರೀತಿಯ ತಂತ್ರ ಹೆಣೆಯುತ್ತಿದೆ. ಹೀಗಿದ್ದಾಗ ಬಿಹಾರ ವಿಧಾನಸಭೆ ಚುನಾವಣೆ ಕಾವು ದೇಶದ ಮೂಲೆ ಮೂಲೆಗೂ ಹಬ್ಬಿದೆ. ಇಷ್ಟೆಲ್ಲಾ ಇದ್ದರೂ ಬಿಹಾರದಲ್ಲಿ ಮತದಾನ ನಿಧಾನ?
2 ಹಂತಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈಗ 18 ಜಿಲ್ಲೆಗಳ 121 ಕ್ಷೇತ್ರಗಳ ಮತದಾರರು ಮೊದಲ ಹಂತದಲ್ಲಿ ಹಕ್ಕು ಚಲಾಯಿಸಿದ್ದಾರೆ. ಹೀಗಾಗಿ ಬಿಹಾರದಲ್ಲಿ ಮತದಾನವು ನಡೆದ ಪ್ರದೇಶದಲ್ಲಿ ಭಾರಿ ಭದ್ರತೆ ಒದಗಿಸಲಾಗಿತ್ತು. ಇಷ್ಟೆಲ್ಲಾ ಮಾಡಿದರೂ ಮತದಾನ ಮಾತ್ರ ನಿಧಾನಗತಿಯಲ್ಲಿ ಸಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಹಾಗಾದರೆ ಈವರೆಗೂ ಬಿಹಾರ ರಾಜ್ಯದ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ವೋಟಿಂಗ್ ಪರ್ಸಂಟೇಜ್ ಎಷ್ಟು? ಬನ್ನಿ ತಿಳಿಯೋಣ.

ಬಿಹಾರ ಚುನಾವಣೆಯಲ್ಲಿ ಎಷ್ಟು ಮತದಾನ?
ಅಂದಹಾಗೆ ಬಿಹಾರ ವಿಧಾನಸಭೆ ಚುನಾವಣೆ ಮೊದಲ ಹಂತದ ಮತದಾನದಲ್ಲಿ ಬೆಳಗ್ಗೆಯಿಂದಲೇ ಅಂದುಕೊಂಡ ಮಟ್ಟಿಗೆ ಮತದಾನ ನಡೆಯಲೇ ಇಲ್ಲ. ಬೆಳಗ್ಗೆ 11 ಗಂಟೆಯ ತನಕ ಶೇ. 27.65 ರಷ್ಟು ಪ್ರಮಾಣದಲ್ಲಿ ಮತದಾನವಾಗಿತ್ತು ಅಷ್ಟೇ. ಆ ನಂತರ ಕೂಡ ದೊಡ್ಡ ಮಟ್ಟದ ಚೇತರಿಕೆ ಏನು ಕಂಡುಬರಲೇ ಇಲ್ಲ, ಇತ್ತೀಚಿನ ವರದಿಗಳು ಬಂದಾಗ ಮಧ್ಯಾಹ್ನ 3 ಗಂಟೆ ತನಕವೂ ಶೇ. 53.77 ರಷ್ಟು ಮಾತ್ರ ಮತದಾನವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ಈ ಮೂಲಕ ಬಾಕಿ ಉಳಿದಿರುವ ಕೆಲವೇ ನಿಮಿಷಗಳಲ್ಲಿ ಎಷ್ಟು ಪರ್ಸಂಟೇಜ್ ವೋಟಿಂಗ್ ಆಗಲಿದೆ? ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications