ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಎನ್‌ಡಿಎ ಗುದ್ದುದೆ ಏರಲಿದೆ ಎನ್ನುವ ಎಕ್ಸಿಟ್ ಪೋಲ್‌ಗಳ ಭವಿಷ್ಯ ನಿಜವಾಗಲಿದ್ಯಾ?
Bihar Assembly Election Results 2025: ಬಿಹಾರ ವಿಧಾನಸಭೆ ಚುನಾವಣೆಗೆ ನವೆಂಬರ್ 6 ಹಾಗೂ ನವೆಂಬರ್ 11ರಂದು ಎರಡು ಹಂತದಲ್ಲಿ 243 ಮತದಾನ ನಡೆದಿತ್ತು. ಇದೀಗ ಇಂದು (ನವೆಂಬರ್ 14) ಮತ ಎಣಿಕೆ ಕಾರ್ಯ ಆರಂಭವಾಗಿದೆ. ಇಂದೇ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.
ಬಿಹಾರದ 38 ಜಿಲ್ಲೆಗಳ ಎಲ್ಲಾ 243 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ ಆಗಲಿದೆ. ಎನ್‌ಡಿಎ ನೇತೃತ್ವದ ಜೆಡಿಯು ನಿತೀಶ್ ಕುಮಾರ್ ಅವರು ದಾಖಲೆಯ ಅವಧಿಗೆ ಗೆಲ್ಲುತ್ತಾರೋ ಅಥವಾ ತೇಜಸ್ವಿ ಯಾದವ್ ವಿಪಕ್ಷವನ್ನು ಮತ್ತೆ ಅಧಿಕಾರಕ್ಕೆ ಬರೆಲಿದ್ದಾರೆಯೋ ಎಂಬುದು ಇಂದು ನಿರ್ಧಾರವಾಗಲಿದೆ.

ನವೆಂಬರ್ 6 ಮತ್ತು 11 ರಂದು ಎರಡು ಹಂತದಗಳಲ್ಲಿ 243 ಬಲದ ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಎರಡು ಹಂತದ ಚುನಾವಣೆಯಲ್ಲಿ ಬಿಹಾರವು ಐತಿಹಾಸಿಕ 67.13% ಮತದಾನ ದಾಖಲಿಸಿದೆ. ಈ ಬಾರಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಮಹಿಳೆಯರ ಮತದಾನ ಪ್ರಮಾಣ 71.78% ಇದ್ದರೆ, ಪುರುಷರ ಮತದಾನ ಪ್ರಮಾಣ 62.98% ರಷ್ಟಿದೆ.
ಚುನಾವಣಾ ಆಯೋಗವು 38 ಜಿಲ್ಲೆಗಳಲ್ಲಿ 46 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಿದೆ. ಅಲ್ಲಿ ಮತಪತ್ರಗಳು 2,616 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತವೆ. ಮತದಾನದ ಮೊದಲು ಪರಿಶೀಲನೆಗೊಳಗಾದ ಮತದಾರರ ಪಟ್ಟಿಯ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ ಬಳಿಕ ಈ ಸಮೀಕ್ಷೆಗಳು ನಡೆದವು.
ಇನ್ನು ನವೆಂಬರ್ 11ರಂದು ವಿವಿಧ ಸುದ್ದಿ ಸಂಸ್ಥೆಗಳು ನಡೆಸಿದ ಎಕ್ಸಿಟ್ ಪೋಲ್‌ಗಳ ಫಲಿತಾಂಶ ಹೊರಬಿದ್ದಿದ್ದು, ಈ ವೇಳೆ ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದ್ದವು. ಆದರೆ, ಚುನಾವಣೆ ಆಯೋಗವು ಇಂದು (ನವೆಂಬರ್ 14) ಮತದಾನ ಪ್ರಕ್ರಿಯೆ ಆರಂಭಿಸಿದ್ದು, ಇಂದೇ ಅಧಿಕೃತ ಫಲಿತಾಂಶ ಹೊರಬೀಳಲಿದೆ. ಇದರಲ್ಲಿ ಎಕ್ಸಿಟ್ ಪೋಲ್‌ಗಳ ಭವಿಷ್ಯ ನಿಜವಾಗಲಿದ್ಯಾ ಅಥವಾ ಉಲ್ಟಾ ಹೊಡೆಯಲಿದ್ಯಾ ಎಂದು ಕಾದುನೋಡಬೇಕಿದೆ.












Click it and Unblock the Notifications