Bihar Exit Polls: ದೈನಿಕ್ ಭಾಸ್ಕರ್ ಸಮೀಕ್ಷೆ ಪ್ರಕಾರ ಬಿಹಾರದಲ್ಲಿ ಎನ್‌ಡಿಎ ಗೆಲುವು!
Bihar Exit Polls: ಬಿಹಾರ ವಿಧಾನಸಭೆ ಚುನಾವಣೆ 2025 ಮತದಾನ ಮುಕ್ತಾಯವಾಗಿದೆ. ಇದೀಗ ಎಲ್ಲರ ಚಿತ್ತ ಸುದ್ದಿ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳತ್ತ ನೆಟ್ಟಿದೆ. ದೈನಿಕ್ ಭಾಸ್ಕರ್ ಎನ್‌ಡಿಎ ಪಕ್ಷ ಅಧಿಕಾರದ ಗದ್ದುಗೆ ಏರುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ.
ಬಿಹಾರ ವಿಧಾನಸಭೆ ಚುನಾವಣೆ ಮೊದಲ ಹಂತ ಚುನಾವಣೆ ಮತದಾನ 121 ಕ್ಷೇತ್ರಗಳಿಗೆ ನವೆಂಬರ್ 6ರಂದು ನಡೆದಿದ್ದರೆ, ನವೆಂಬರ್ 11ರಂದು 122 ಕ್ಷೇತ್ರಗಳಿಗೆ ಎರಡನೇ ಹಾಗೂ ಕೊನೆ ಹಂತದ ಮತದಾನ ನಡೆದಿದೆ. ಚುನಾವಣಾ ಆಯೋಗವು ನವೆಂಬರ್ 14ರಂದು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟ ಮಾಡಲಿದೆ. ಇದಕ್ಕೂ ಮುಂಚೆ ಇದೀಗ ಸುದ್ದಿ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ.

ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದ್ದು, ದೈನಿಕ್ ಭಾಸ್ಕರ್ ನಡೆಸಿದ ಸಮೀಕ್ಷೆ ಪ್ರಕಾರ, NDA 145-160, MGB (ಮಹಾಘಟ್‌ಬಂಧನ್) 73-91, JSP 0, ಪಕ್ಷೇತರ 5-10 ಸ್ಥಾನಗಳು ಬರಲಿವೆ. ಈ ಮೂಲಕ ಬಹುತೇಕ ಎನ್‌ಡಿಎ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ತಿಳಿಸಿದೆ.
ಬಿಹಾರ ವಿಧಾನಸಭೆ ಚುವಾಣೆಯ 243 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆದಿದೆ. ಇಂದು ಮತದಾನ ಮುಕ್ತಾಯವಾಗಿದ್ದು, ಎನ್‌ಡಿಎ ಅಧಿಕಾಕ್ಕೆ ಬರಲಿದೆ. ಆರ್‌ಜೆಡಿ ನೇತೃತ್ವದ ಮಹಾಘಟ್‌ಬಂಧನ ಎರಡನೇ ಸ್ಥಾನದಲ್ಲಿ ಬರಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಭಾರತ ಚುನಾವಣಾ ಆಯೋಗದ ಪ್ರಕಾರ, ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಯಾರೂ ಊಹಿಸಲಾರದ ದಾಖಲೆಯ ಶೇಕಡ 65.8ರಷ್ಟು ಮತದಾನ ನಡೆದಿತ್ತು. ಇದೀಗ ಎರಡನೇ ಹಂತದಲ್ಲಿ 67.14ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ಎರಡನೇ ಹಾಗೂ ಕೊನೇ ಹಂತದಲ್ಲಿ ಮಂಗಳವಾರ 20 ಜಿಲ್ಲೆಗಳ 122 ಸ್ಥಾನಗಳಿಗೆ ಮತದಾನ ನಡೆಯಿತು. ನವೆಂಬರ್ 6ರಂದು 121 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿದ್ದು, ಇದು ರಾಜ್ಯದ ಇತಿಹಾಸದಲ್ಲೇ ದಾಖಲೆಯ ಮತದಾನ ಆಗಿತ್ತು. ಇನ್ನೂ ಚುನಾವಣಾ ಆಯೋಗದ ಪ್ರಕಾರ, ಎರಡು ಹಂತದ ಮತದಾನದ ಎಣಿಕೆ ಅಧಿಕೃತವಾಗಿ ನವೆಂಬರ್ 14ರಂದು ನಡೆಯಲಿದ್ದು, ಅವತ್ತೇ ಫಲಿತಾಂಶ ಹೊರಬೀಳಲಿದೆ.
ದೈನಿಕ್ ಭಾಸ್ಕರ್ ಸಮೀಕ್ಷೆಯು 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಮತ್ತು ಎನ್‌ಡಿಎ/ಮಹಾ ಮೈತ್ರಿಕೂಟ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಇದು ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ.
ಇನ್ನೂ ನವೆಂಬರ್ 7, 2020ರಂದು ಅಂತಿಮ ಹಂತದ ಮತದಾನದ ನಂತರ ಎಕ್ಸಿಟ್ ಪೋಲ್ ಬಿಡುಗಡೆ ಮಾಡಿದಾಗ, ಹೆಚ್ಚಿನವು ತೇಜಸ್ವಿ ಯಾದವ್ ನೇತೃತ್ವದ ಮಹಾ ಮೈತ್ರಿಕೂಟಕ್ಕೆ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ಚುನಾವಣೆ ಆಯೋಗದ ಫಲಿತಾಂಶ ಹೊರಬಿದ್ದಾಗ, ಇದು ವಿರುದ್ಧ ಆಗಿತ್ತು. ಈ ಮೂಲಕ 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಎಕ್ಸಿಟ್ ಪೋಲ್ಗಳ ಭವಿಷ್ಯ ತಲೆ ಕೆಳಗಾಗಿದ್ದವು. ಇದೀಗ 2025ರ ವಿಧಾನಸಭೆ ಚುನಾವಣೆಯ ಅಧಿಕೃತ ಫಲಿತಾಂಶ ನವೆಂಬರ್ 14ರಂದು ಹೊರಬೀಳಲಿದ್ದು, ಅಂದು ಅಭ್ಯರ್ಥಿಗಳ ನಿಜ ಭವಿಷ್ಯ ಏನಾಗಲಿದೆ ಎಂದು ಕಾದುನೋಡಬೇಕಿದೆ.












Click it and Unblock the Notifications