Get Updates
Get notified of breaking news, exclusive insights, and must-see stories!

Bihar Assembly Election 2025: ಮತ ಚಲಾಯಿಸಿದ 111 ವರ್ಷದ ವೃದ್ಧೆ

Bihar Assembly Election 2025: ಬಿಹಾರ ವಿಧಾಸಭೆಯ 122 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯುತ್ತಿದೆ. ಛಟಾಪುರ ವಿಧಾನಸಭಾ ಕ್ಷೇತ್ರದಲ್ಲಿ 111 ವರ್ಷದ ವೃದ್ಧೆ ಮಹಿಳೆಯೊಬ್ಬರು ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿ ಗಮನ ಸೆಳೆದಿದ್ದಾರೆ. ಈ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ.

ಈಗಾಗಲೇ ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ 121 ಕ್ಷೇತ್ರಗಳಿಗೆ ನವೆಂಬರ್ 6ರಂದು ನಡೆದಿದ್ದು, ಇಂದು (ನವೆಂ11) 122 ಕ್ಷೇತ್ರಗಳಿಗೆ ಎರಡನೇ ಹಾಗೂ ಕೊನೇ ಹಂತದ ಮತದಾನ ನಡೆಯುತ್ತಿವೆ. ಇನ್ನೂ ಇಂದು 111 ವರ್ಷದ ನಸೀಮಾ ಖತುನ್ ಎಂಬ ವೃದ್ಧೆ ಮಹಿಳೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ಘಟನೆ ಛಟಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.

Bihar Assembly Election 2025 111-Year-Old Woman Casts Her Vote in Chhatapur

111 ವರ್ಷದ ವೃದ್ಧೆ ಹೇಳಿದ್ದೇನು?: ಬಿಹಾರ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದ್ದು, ಛಾತಾಪುರ ಕ್ಷೇತ್ರದಲ್ಲಿ 111 ವರ್ಷದ ನಸೀಮಾ ಖತುನ್ ಎಂಬ ವೃದ್ಧೆ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು "ನಾನು ನನ್ನ ಮತ ಚಲಾಯಿಸಿ ನನ್ನ ಕರ್ತವ್ಯವನ್ನು ಪೂರೈಸಿದ್ದೇನೆ," ಎಂದು ಹೇಳಿದರು.

ದೆಹಲಿ ಸ್ಫೋಟ ಪರಿಣಾಮ ಬೀರಬಹುದು: ಸೋಮವಾರ ನಡೆದ ದೆಹಲಿ ಸ್ಫೋಟ ಬಿಹಾರ ಚುನಾವಣೆ ಮೇಲೆ ಪರಿಣಾಮ ಬೀರಬಹುದು. ಅದೂ ಸಹ ಬಿಜೆಪಿ ವಿರುದ್ಧವಾಗಿ ಪರಿಣಾಮ ಬೀರಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಭದ್ರತಾ ವೈಫಲ್ಯ ಆಗಿದ್ದು, ಇದಕ್ಕೆ ಕೇಂದ್ರವೇ ತನಿಖೆ ನಡೆಸಿ ಉತ್ತರಿಸಲಿ‌. ಬಾಂಬ್ ಬ್ಲಾಸ್ಟ್​ಗಳು ಆಗಬಾರದು. ಇದರಿಂದ ಆಗುವ ಅಮಾಯಕರ ಜೀವಹಾನಿ ಆಗುವುದು ತುಂಬಾ ಬೇಸರದ ಸಂಗತಿ ಎಂದು ಹೇಳಿದರು.

ಜೊತೆಗೆ ದೆಹಲಿ ಭೇಟಿ ಹಾಗೂ ನಿನ್ನೆ ಮೈಸೂರಿನಲ್ಲಿ ಸತತ 10 ಗಂಟೆಗಳ ಕಾಲ ನಡೆದ ಕೆಡಿಪಿ ಸಭೆಯ ಪ್ರಮುಖ ವಿಚಾರಗ ಬಗ್ಗೆ ವಿವರಣೆ ನೀಡಿದರು. ಪೊಲೀಸ್ ಅಧಿಕಾರಿಗಳಿಗೆ ಗೊತ್ತಿಲ್ಲದೆ, ಸಂಘಟಿತ ಅಪರಾಧಗಳು ನಡೆಯಲು ಸಾಧ್ಯ ಇಲ್ಲ. ಆದ್ದರಿಂದ ಅಪರಾಧ ಪ್ರಮಾಣಗಳು ಹೆಚ್ಚಳ ಆದ್ರೆ, ಪೊಲೀಸ್ ಅಧಿಕಾರಿಗಳೇ ಹೊಣೆ ಆಗುತ್ತಾರೆ. ಮೈಸೂರು ಜಿಲ್ಲೆಯನ್ನು ಡ್ರಗ್ಸ್​ ಮುಕ್ತ ಜಿಲ್ಲೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.

ಕೋಮುಗಲಭೆ ಪೀಡಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿದ ತಕ್ಷಣ ಇಡೀ‌ ಜಿಲ್ಲೆಯಲ್ಲಿ ಇದೀಗ ಅನಾಗರಿಕ ಘಟನೆಗಳು ಬಂದ್ ಆಗಿವೆ. ಅಲ್ಲಿ ಇಬ್ಬರು ಅಧಿಕಾರಿಗಳಿಂದ ಇಷ್ಟೆಲ್ಲಾ ಸಾಧ್ಯವಾಗುತ್ತದೆ ಎನ್ನುವುದಾದರೆ ಉಳಿದ ಕಡೆಗಳಲ್ಲೂ ಸಾಧ್ಯ ಇದೆ. ಪೊಲೀಸ್ ಅಧಿಕಾರಿಗಳು ಮನಸ್ಸು ಮಾಡಿ, ವೃತ್ತಿಪರವಾಗಿ ನಡೆದುಕೊಂಡರೆ ಸಾಕು ಎನ್ನುವ ಸೂಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.

ಡಿಸಿ, ಎಸಿ, ತಹಶಿಲ್ದಾರ್ ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಸೂಚನೆ ನೀಡಿದ್ದೇನೆ. ಮೈಸೂರು ಜಿಲ್ಲೆಯಲ್ಲಿ ಕಳೆದ ಎರಡೂ ವರ್ಷಗಳಲ್ಲಿ ಇದ್ದ 8 ಸಾವಿರ ಪ್ರಕರಣಗಳಲ್ಲಿ ಈಗಾಗಲೇ 7,540ರಷ್ಟು ಪ್ರಕಣಗಳು ಇತ್ಯರ್ಥ ಆಗಿವೆ. ಉಳಿದವೂ ಬೇಗ ಇತ್ಯರ್ಥ ಆಗಬೇಕು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸ್ಟೆಲ್​ಗಳಿಗೆ ದಿಢೀರ್ ಭೇಟಿ ನೀಡಿ ಊಟ ಮತ್ತು ಹಾಸ್ಟೆಲ್ ಗುಣಮಟ್ಟ ಪರಿಶೀಲಿಸಲು ಸೂಚನೆ ನೀಡಲಾಗಿದೆ ಎಂದರು.

ನಾನು ಮೈಸೂರು ಜಿಲ್ಲೆಯವನೇ ಆಗಿರುವುದರಿಂದ ನಾನೇ ಕೆಡಿಪಿ ಸಭೆ ನಡೆಸುತ್ತೇನೆ. ಪೊಲೀಸ್ ಅಧಿಕಾರಿಗಳು‌ ಘಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಪರಾಧಿಗಳು, ರಿಯಲ್ ಎಸ್ಟೇಟ್, ರೌಡಿಗಳನ್ನು ಹೊರತುಪಡಿಸಿ ಪೊಲೀಸರು ಸಾರ್ವಜನಿಕರ ಜೊತೆ ಉತ್ತಮ‌ವಾಗಿ ವರ್ತಿಸುವಂತೆ ಹೇಳಲಾಗಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+