ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓವರ್ ಲೋಡ್ ಆಗಿ ಲಿಫ್ಟ್ ನಲ್ಲಿ ಸಿಕ್ಕಿಕೊಂಡಿದ್ದ ಅಮಿತ್ ಶಾ!

|
Google Oneindia Kannada News

ಪಾಟ್ನಾ, ಆಗಸ್ಟ್. 21: ಪಾಟ್ನಾದಲ್ಲಿ ಪ್ರವಾಸಿ ಗೃಹದ ಲಿಫ್ಟ್ ನೊಳಗೆ 40 ನಿಮಿಷ ಕಾಲ ಸಿಕ್ಕಿಹಾಕಿಕೊಂಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ರಕ್ಷಣೆ ಮಾಡಲಾಗಿದೆ. ಆದರೆ ಇದೇ ಪ್ರಕರಣ ಪರ ವಿರೋಧದ ಹೇಳಿಕೆಗೆ ಕಾರಣವಾಗಿದೆ.

ಘಟನೆಯ ನಂತರ ಮಾಹಿತಿ ಮತ್ತು ಸಾರ್ವಜನಿಕ ಸಂಬಂಧ ಇಲಾಖೆ ಕಾರ್ಯದರ್ಶಿ ಪ್ರತ್ಯಯ್ ಅಮ್ರಿತ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಓವರ್‌ಲೋಡ್ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.[ಬೆಂಗಳೂರಲ್ಲಿ ಅಮಿತ್ ಶಾ]

bjp

ಪಾಟ್ನಾದ ಅತಿಥಿ ಗೃಹದ ಲಿಫ್ಟ್‌ನ ಸಾಮರ್ಥ್ಯ 340 ಕೆ.ಜಿ.ಇದೆ. ಆದರೆ ಅಮಿತ್ ಶಾ ಅವರೊಂದಿಗೆ ಐದಕ್ಕಿಂತ ಹೆಚ್ಚು ಜನ ಆಗಮಿಸಿದ್ದಾರೆ. ಹೀಗಾಗಿ ಲಿಫ್ಟ್ ಜಾಮ್ ಆಗಿದೆ ಎಂದು ಸಿನ್ಹಾ ತಿಳಿಸಿದ್ದಾರೆ.

ಬಿಹಾರದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್ ಶಾ ಪಾಟ್ನಾಗೆ ಭೇಟಿ ನೀಡಿದ್ದರು. ಪಾಟ್ನದ ರಾಜಭವನ ಬಳಿ ಇರುವ ಸರ್ಕಾರಿ ಅತಿಥಿ ಗೃಹದಲ್ಲಿ ನೆಲೆಸಿದ್ದರು. ಮೊದಲ ಮಹಡಿಯಿಂದ ಕೆಳ ಮಹಡಿಗೆ ತೆರಳಲು ಲಿಫ್ಟ್ ಬಳಸಿದ್ದರು. ಅಮಿತ್ ಶಾ ಜೊತೆ ಭುಪೇಂದರ್ ಯಾದವ್, ನರೇಂದ್ರ ಜೀ ಹಾಗೂ ಸೌದನ್ ಸಿಂಗ್ ಸಹ ಇದ್ದರು. ಲಿಫ್ಟ್ ಬಾಗಿಲು ಮುಚ್ಚಿ ಕೆಳ ಮಹಡಿಗೆ ಹೋಗುವ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಜಾಮ್ ಆದ ಪರಿಣಾಮ ಅಮಿತ್ ಶಾ ಹಾಗೂ ಜೊತೆಗಿದ್ದವರೆಲ್ಲರೂ ಲಿಫ್ಟ್ ನಲ್ಲಿ ಸಿಲುಕಿದ್ದರು.

ಮಾಹಿತಿ ತಿಳಿದು ನಂತರ ಅಮಿತ್ ಶಾಗೆ ನೀಡಿದ್ದ ಝಡ್ ಪ್ಲಸ್ ಭದ್ರತಾ ಪಡೆ ರಕ್ಷಣೆಗೆ ಮುಂದಾಗಿದೆ. ಆದರೆ, ಲಿಫ್ಟ್ ಬಾಗಿಲನ್ನು ತೆರೆಯುವುದಕ್ಕೆ ಸಾಧ್ಯವಾಗದಿದ್ದಾರೆ. ಬಾಗಿಲನ್ನು ಕತ್ತರಿಸಿ ಅಮಿತ್ ಶಾ ಅವರನ್ನು ರಕ್ಷಿಸಲಾಗಿದೆ. ಇದರ ಹಿಂದೆ ಸರ್ಕಾರದ ಷಡ್ಯಂತ್ರವಿದೆ. ಬಿಹಾರ ಸರ್ಕಾರ ಸುರಕ್ಷಾ ಕ್ರಮಗಳನ್ನು ಬೇಕೆಂತಲೇ ತೆಗೆದುಕೊಂಡಿಲ್ಲ ಎಂದು ಬಿಹಾರ ಬಿಜೆಪಿ ಆರೋಪಿಸಿದೆ.

English summary
BJP President Amit Shah was reportedly stuck in a lift of a government guest house in Patna on Thursday, Aug 20. The incident took place at around 11.15 pm. Shah was stuck in the lift for about 30 minutes alongwith other BJP leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X