ಬಿಜೆಪಿ ಸೇರಿದ ಬಹುಭಾಷಾ ನಟ ರವಿಕಿಶನ್
ಭೋಜ್ ಪುರಿ ಸ್ಟಾರ್, ಬಹುಭಾಷಾ ನಟ ರವಿಕಿಶನ್ ಅವರು ಭಾನುವಾರ(ಫೆಬ್ರವರಿ 19)ದಂದು ಭಾರತೀಯ ಜನತಾ ಪಕ್ಷ ಸೇರಿಕೊಂಡಿದ್ದಾರೆ. ಈ ಮುಂಚೆ ಕಾಂಗ್ರೆಸ್ ಪಕ್ಷದಲ್ಲಿದ್ದರು.
ನವದೆಹಲಿ, ಫೆಬ್ರವರಿ 19: ಭೋಜ್ ಪುರಿ ಸ್ಟಾರ್, ಬಹುಭಾಷಾ ನಟ ರವಿಕಿಶನ್ ಅವರು ಭಾನುವಾರ(ಫೆಬ್ರವರಿ 19)ದಂದು ಭಾರತೀಯ ಜನತಾ ಪಕ್ಷ ಸೇರಿಕೊಂಡಿದ್ದಾರೆ. ಈ ಮುಂಚೆ ಕಾಂಗ್ರೆಸ್ ಪಕ್ಷದಲ್ಲಿದ್ದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ರವಿ ಕಿಶನ್ ಅವರು ದೆಹಲಿಯಲ್ಲಿ ಬಿಜೆಪಿ ಸೇರಿದ್ದಾರೆ. ನಟ ಕಮ್ ಸಂಸದ ಮನೋಜ್ ತಿವಾರಿ ಅವರು ರವಿ ಕಿಶನ್ ಅವರು ಪಕ್ಷ ಸೇರುವ ಸುಳಿವು ನೀಡಿದ್ದರು.

2014ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆ ಸ್ಪರ್ಧಿಸಿದ್ದ ರವಿಕಿಶನ್ ಅವರು ನಂತರ ಕಾಂಗ್ರೆಸ್ ತೊರೆದಿದ್ದರು. ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದೆನಿಸಿರುವ ಸ್ವಚ್ಛಭಾರತ ಅಭಿಯಾನದಲ್ಲಿ ರವಿಕಿಶನ್ ತೊಡಗಿಕೊಂಡಿದ್ದರು.
ಈಗ ಬಿಜೆಪಿ ಸೇರಿದ ಬಳಿಕ ಮಾತನಾಡಿದ ರವಿಕಿಶನ್, ಬಡವರು ಹಾಗೂ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ. ಇನ್ನೊಬ್ಬರನ್ನು ಟೀಕಿಸುವುದು ನನ್ನ ಕೆಲಸವಲ್ಲ ಎಂದಿದ್ದಾರೆ. ಪಂಚರಾಜ್ಯಗಳ ಚುನಾವಣೆಯಲ್ಲಿ ರವಿಕಿಶನ್ ರನ್ನು ಪ್ರಚಾರಕ್ಕಾಗಿ ಬಳಸು ಬಿಜೆಪಿ ಚಿಂತಿಸಿದೆ.












Click it and Unblock the Notifications