'ಸಚಿನ್ ಗೆ ಭಾರತ ರತ್ನ ದೊಡ್ಡ ಜೋಕು'

ನವದೆಹಲಿ, ನ.18: ಕ್ರಿಕೆಟ್ ಕ್ಷೇತ್ರದ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರಿಗೆ 'ಭಾರತ ರತ್ನ' ಸಿಕ್ಕಿರುವುದು ದೊಡ್ಡ ಜೋಕ್ ಎಂದು ಹಿರಿಯ ಜೆಡಿಯು(ಯುನೈಟೆಡ್) ನಾಯಕ ಶಿವಾನಂದ ತಿವಾರಿ ಸೋಮವಾರ ಹೇಳಿದ್ದಾರೆ.

ಕ್ರಿಕೆಟ್ ಆಡುವುದರ ಮೂಲಕ ಅಭಿಮಾನಿಗಳ ಜತೆಗೆ ಕೋಟಿಗಟ್ಟಲೆ ದುಡ್ಡು ಮಾಡಿರುವ ಸಚಿನ್ ಅವರು ತೆರಿಗೆ ಕಟ್ಟುವುದನ್ನು ಬಿಟ್ಟು ಮತ್ತೇನು ಮಹತ್ವದ ಕಾರ್ಯ ಎಸಗಿಲ್ಲ. ಸಚಿನ್ ಗಿಂತ ಶ್ರೇಷ್ಠ ವ್ಯಕ್ತಿಗಳು, ಕ್ರೀಡಾಪಟುಗಳನ್ನು ಭಾರತ ಹೊಂದಿರುವಾಗ ಎಲ್ಲರನ್ನು ಬಿಟ್ಟು ಸಚಿನ್ ಅವರಿಗೆ ಮೊದಲಿಗೆ ಭಾರತದ ಸರ್ವೋಚ್ಚ ನಾಗರಿಕ ಪುರಸ್ಕಾರ ನೀಡಲು ಮುಂದಾಗಿರುವುದು ಹಾಸ್ಯಾಸ್ಪದ ವಿಷಯವಾಗಿದೆ ಎಂದು ತಿವಾರಿ ಹೇಳಿದ್ದಾರೆ.

ಭಾರತದ ಪರ ಕ್ರಿಕೆಟ್ ಆಡಿದರೂ ಆಟವಾಡಲು ಯಾವುದೇ ಖರ್ಚು ವೆಚ್ಚ ಸಚಿನ್ ಮಾಡಿಲ್ಲ. ಹೂಡಿಕೆಗಿಂತ ಹೆಚ್ಚಿನ ಲಾಭ ಗಳಿಸಿದ್ದೇ ಹೆಚ್ಚು. ಉಚಿತವಾಗಿ ಕ್ರಿಕೆಟ್ ಆಡಿ ಕೋಟಿಗಟ್ಟಲೆ ದುಡ್ಡು ಮಾಡಿರುವ ಸಚಿನ್ ಭಾರತದ ಪರ ಪ್ರಚಾರಕ್ಕೆ ಇಳಿದಿದ್ದೇ ಕಮ್ಮಿ ಎಂದು ತಿವಾರಿ ಹೇಳಿದ್ದಾರೆ.

ಕಳೆದ ವರ್ಷ ಕ್ರೀಡಾ ಸಚಿವಾಲಯ ಹಾಕಿ ಮಾಂತ್ರಿಕ ಧ್ಯಾನ್ ಚಂದ್, ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ಪರ್ವತಾರೋಹಿ ತೇನ್ ಸಿಂಗ್ ನೊರ್ಗೆ ಅವರ ಹೆಸರನ್ನು ಗೃಹ ಸಚಿವಾಲಯ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕಳಿಸಿತ್ತು. ಆಗ ಬಿಸಿಸಿಐ ಸಚಿನ್ ತೆಂಡೂಲ್ಕರ್ ಹೆಸರನ್ನು ಶಿಫಾರಸ್ಸು ಮಾಡಿರಲಿಲ್ಲ ಎಂಬುದು ಗಮನಾರ್ಹ.

Bharat Ratna to Sachin Tendulkar is a joke: JD(U) leader Shivanand Tiwari

ಅಲ್ಲದೆ, ಕಲೆ, ಸಾಹಿತ್ಯ, ವಿಜ್ಞಾನ, ಸಾಮಾಜಿಕ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಮಾತ್ರ ಭಾರತ ರತ್ನ ಸಂದಿದ್ದು, ಕ್ರೀಡೆ ಅದರಲ್ಲೂ ಕ್ರಿಕೆಟ್ ಲಿಸ್ಟ್ ನಲ್ಲೇ ಇರಲಿಲ್ಲ. ಸಚಿನ್ ಗೆ ಭಾರತ ರತ್ನ ಸಿಗಲಿ ಎಂಬ ಉದ್ದೇಶದಿಂದ ಕ್ರಿಕೆಟ್ ವಿಭಾಗವನ್ನು ಸೇರಿಸಲಾಗಿದೆ. ಈ ಮೂಲಕ ಭಾರತ ರತ್ನ ಪಡೆಯುವ ಮೊಟ್ಟ ಮೊದಲ ಕ್ರೀಡಾಪಟು ಎಂಬ ಕೀರ್ತಿಗೆ ಸಚಿನ್ ಪಾತ್ರರಾಗಲಿದ್ದಾರೆ.

ಮಾರ್ಕಂಡೇಯ ಕಾಟ್ಜು ವಿರೋಧ: ಕ್ರಿಕೆಟಿಗರಿಗೆ ಹಾಗೂ ಚಿತ್ರತಾರೆ ಯರಿಗೆ ಭಾರತರತ್ನ ಪ್ರಶಸ್ತಿ ನೀಡುವುದನ್ನು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ವಿರೋಧಿಸಿದ್ದಾರೆ. ಯಾವುದೇ ಸಾಮಾಜಿಕ ಪ್ರಸ್ತುತತೆ ಇಲ್ಲದ ಕ್ರಿಕೆಟಿಗರಿಗೆ ಹಾಗೂ ಸಿನೆಮಾ ತಾರೆಯರಿಗೆ ದೇಶದ ಈ ಸರ್ವೋನ್ನತ ನಾಗರಿಕ ಪುರಸ್ಕಾರವನ್ನು ನೀಡುವುದರಿಂದ ಆ ಪ್ರಶಸ್ತಿಯನ್ನು ಅಣಕಿಸಿದಂತಾಗುತ್ತದೆ ಎಂದಿದ್ದಾರೆ.

ಕ್ರಿಕೆಟಿಗರಿಗೆ ಹಾಗೂ ಚಿತ್ರತಾರೆಯರಿಗೆ ಭಾರತರತ್ನ ನೀಡುವ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ನಮ್ಮ ಸುಸಂಸ್ಕೃತತೆಯ ಮಟ್ಟವು ಪಾತಾಳಕ್ಕೆ ಕುಸಿದಿರುವುದಕ್ಕೆ ಇದು ಸಾಕ್ಷಿಯಾಗಿದೆ. ನಾವು ನಮ್ಮ ನಿಜವಾದ ಹೀರೋಗಳನ್ನು ನಿರ್ಲಕ್ಷಿಸುತ್ತಿದ್ದೇವೆ ಹಾಗೂ ಅತಿರಂಜಿತಗೊಳಿಸಲ್ಪಟ್ಟ ಕೆಲ ವರನ್ನು ಪುರಸ್ಕರಿಸುತ್ತಿದ್ದೇವೆ'' ಎಂದು ಕಾಟ್ಜು ಪ್ರತಿಪಾದಿಸಿದ್ದಾರೆ.

ನಮ್ಮ ದೇಶವು ಕವಲು ದಾರಿಯಲ್ಲಿ ನಿಂತಿದೆ. ದೇಶಕ್ಕೆ ಮಾರ್ಗದರ್ಶನ ನೀಡುವ ಹಾಗೂ ಅದನ್ನು ಮುನ್ನಡೆಸುವಂತಹ ವ್ಯಕ್ತಿಗಳ ಅಗತ್ಯ ನಮಗಿದೆ. ಅಂತಹ ವ್ಯಕ್ತಿಗಳಿಗೆ, ಒಂದು ವೇಳೆ ಮೃತಪಟ್ಟಿದ್ದರೂ ಸಹ ಭಾರತರತ್ನವನ್ನು ನೀಡಬೇಕಾಗಿದೆ' ಎಂದು ಕಾಟ್ಜು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಖ್ಯಾತ ಉರ್ದುಕವಿ ಮಿರ್ಝಾ ಗಾಲಿಬ್ ಹಾಗೂ ಬಂಗಾಳಿ ಸಾಹಿತಿ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರಿಗೆ ಭಾರತರತ್ನ ಪುರಸ್ಕಾರ ಘೋಷಿಸ ಬೇಕೆಂದು ಆಗ್ರಹಿಸಿದುದ್ದಕ್ಕಾಗಿ, ನನ್ನನ್ನು ಟೀಕಿಸಲಾಗಿತ್ತೆಂದು ಕಾಟ್ಜು ಸ್ಮರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+