Tour Package: ಬೆಂಗಳೂರು-ಲಕ್ಷದ್ವೀಪ ಟೂರ್ ಪ್ಯಾಕೇಜ್! ನೇರ ವಿಮಾನ ಸೇವೆ, ದರ ಎಷ್ಟು? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

ಬೆಂಗಳೂರು: ಬೆಂಗಳೂರು ಮೂಲಕ ನೀಲಿ ಸಮುದ್ರ, ಹವಳದ ದಿಬ್ಬಗಳು ಮತ್ತು ನಿಸರ್ಗ ಸೌಂದರ್ಯಕ್ಕೆ ಹೆಸರಾದ ಲಕ್ಷದ್ವೀಪಕ್ಕೆ ಪ್ರವಾಸ ತೆರಳುವವರಿಗೆ ಇಲ್ಲೊಂದು ಗುಡ್‌ನ್ಯುಸ್ ಸಿಕ್ಕಿದೆ. ಪ್ರಮುಖ ಆನ್‌ಲೈನ್ ಟ್ರಾವೆಲ್ ಸಂಸ್ಥೆ 'ಮೇಕ್‌ಮೈಟ್ರಿಪ್' ಪ್ರಾದೇಶಿಕ ವಿಮಾನಯಾನ ಸಂಸ್ಥೆ 'ಫ್ಲೈ91' ಜೊತೆ ಕೈಜೋಡಿಸಿದೆ. ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸೇವೆ ಆರಂಭವಾಗಲಿದ್ದು, ಸಂಸ್ಥೆಯು ವಿಶೇಷ ಹಾಲಿಡೇ ಟೂರ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ.

ವಿಮಾನ ಸೇವೆ ಯಾವಾಗ ಆರಂಭ?

ಈ ವಿಶೇಷ ವಿಮಾನ ಸೇವೆಯು 2026ರ ನವೆಂಬರ್ 12 ರಿಂದ ಆರಂಭವಾಗಲಿದೆ. 2027ರ ಜನವರಿ ಮಧ್ಯದವರೆಗೆ ಇದರ ಸೇವೆ ಪಡೆಯಬಹುದು. ಲಕ್ಷದ್ವೀಪಕ್ಕೆ ಭೇಟಿ ನೀಡಲು ನವೆಂಬರ್‌ನಿಂದ ಜನವರಿ ಅತ್ಯಂತ ಪ್ರಶಸ್ತವಾದ ಸಮಯ ಆಗಿರುವುದರಿಂದ, ಪ್ರತಿ ನಾಲ್ಕು ದಿನಗಳಿಗೊಮ್ಮೆ ಬೆಂಗಳೂರಿನಿಂದ ಲಕ್ಷದ್ವೀಪದ 'ಅಗತ್ತಿ' ದ್ವೀಪಕ್ಕೆ ವಿಮಾನಗಳು ಹಾರಾಟ ನಡೆಸಲಿವೆ.

Bengaluru to Lakshadweep

ಬೆಂಗಳೂರು ನಗರವು ದೇಶದ ಇತರೆ ಪ್ರಮುಖ ನಗರಗಳೊಂದಿಗೆ ಅತ್ಯುತ್ತಮ ಸಂಪರ್ಕ ಹೊಂದಿರುವುದರಿಂದ, ಕೇವಲ ದಕ್ಷಿಣ ಭಾರತೀಯರಿಗೆ ಮಾತ್ರವಲ್ಲದೆ ಇಡೀ ದೇಶದ ಪ್ರವಾಸಿಗರಿಗೆ ಲಕ್ಷದ್ವೀಪ ತಲುಪಲು ಬೆಂಗಳೂರು ಮುಖ್ಯ ಹೆಬ್ಬಾಗಿಲಾಗಲಿದೆ. ಬೆಂಗಳೂರು ಮೂಲಕ ತೆರಳುವ ಪ್ರವಾಸಿಗರು ಲಕ್ಷದ್ವೀಪ ನೋಡಲು ಇದೊಂದು ಸರಿಯಾದ ಸಮಯ ಎನ್ನಲಾಗಿದೆ.

ಲಕ್ಷದ್ವೀಪ ವಿಮಾನ ಟೂರ್ ಪ್ಯಾಕೇಜ್ ದರ, ವೈಶಿಷ್ಟ್ಯವೇನು?

ಈ ಪ್ರವಾಸವು 4 ದಿನ ಮತ್ತು 3 ರಾತ್ರಿಗಳ ಒಳಗೊಂಡ ಪ್ಯಾಕೇಜ್‌ ಆಗಿದ್ದು, ತಲಾ ಒಬ್ಬರಿಗೆ ದರ 84,898 ರೂಪಾಯಿಯಿಂದ ಆರಂಭವಾಗುತ್ತದೆ. ಇದರಲ್ಲಿ ಬೆಂಗಳೂರಿನಿಂದ ಹೋಗಿ-ಬರುವ ನೇರ ವಿಮಾನ ಟಿಕೆಟ್, ಲಕ್ಷದ್ವೀಪ ಪ್ರವೇಶಕ್ಕೆ ಅಗತ್ಯವಿರುವ ಪರ್ಮಿಟ್ (ಅನುಮತಿ ಪತ್ರ), ಉತ್ತಮ ವಸತಿ, ಊಟೋಪಚಾರ, ಸ್ಥಳೀಯ ಚಟುವಟಿಕೆಗಳು ಹಾಗೂ ಪ್ರವಾಸಿಗರ ನೆರವಿಗೆ ಜತೆಯಲ್ಲೇ ಒಬ್ಬ ಟೂರ್ ಗೈಡ್ ಸಹ ಇರಲಿದ್ದಾರೆ.

ವಿಶೇಷವೆಂದರೆ ಲಕ್ಷದ್ವೀಪ ಪ್ರವಾಸಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಒಂದೇ ಬುಕಿಂಗ್ ಅಡಿಯಲ್ಲಿ ಕಲ್ಪಿಸಲಾಗಿದೆ. ಇದು ಪ್ರವಾಸಿಗರಿಗೆ ಅತ್ಯಂತ ಅನುಕೂಲಕರವಾಗಿದೆ. ಪ್ಯಾಕೇಜ್‌ನಲ್ಲಿರುವ ಸಾಮಾನ್ಯ ಚಟುವಟಿಕೆಗಳ ಜೊತೆಗೆ, ಪ್ರವಾಸಿಗರು ಹೆಚ್ಚುವರಿ ಶುಲ್ಕ ನೀಡಿ ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್, ಆಮೆಗಳ ವೀಕ್ಷಣೆ, ಕಯಾಕಿಂಗ್, ಗ್ಲಾಸ್-ಬಾಟಮ್ ಬೋಟ್ ರೈಡ್ ಹಾಗೂ ಯೋಗ-ಧ್ಯಾನದಂತಹ ಚಟುವಟಿಕೆಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದು.

ಲಕ್ಷದ್ವೀಪ ಸಂಪರ್ಕ ಸಮಸ್ಯೆಗೆ ಮುಕ್ತಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಕ್‌ಮೈಟ್ರಿಪ್‌ನ ಚೀಫ್ ಬಿಸಿನೆಸ್ ಆಫೀಸರ್ ಜಸ್ಮೀತ್ ಸಿಂಗ್ ಅವರು, "ಲಕ್ಷದ್ವೀಪಕ್ಕೆ ಭೇಟಿ ನೀಡಲು ಜನರಿಗೆ ಅಪಾರ ಆಸಕ್ತಿಯಿತ್ತು, ಆದರೆ ನೇರ ಮತ್ತು ಸುಲಭ ಪ್ರಯಾಣದ ಕೊರತೆ ಇದೆ. ಈ ಪಾಲುದಾರಿಕೆಯು ಆ ಕೊರತೆಯನ್ನು ನೀಗಿಸಲಿದೆ' ಎಂದು ಅವರು ತಿಳಿಸಿದ್ದಾರೆ.

ಫ್ಲೈ91ಸಂಸ್ಥೆಯ ಎಂಡಿ ಮತ್ತು ಸಿಇಒ ಮನೋಜ್ ಚಾಕೋ ಮಾತನಾಡಿ, "ಅಗತ್ತಿ ಭಾರತದ ಅತ್ಯಂತ ಸುಂದರ ಹಾಗೂ ನೈಸರ್ಗಿಕ ತಾಣಗಳಲ್ಲಿ ಒಂದಾಗಿದೆ. ಪ್ರಯಾಣಿಕರಿಗೆ ಕೇವಲ ವಿಮಾನಯಾನ ಮಾತ್ರವಲ್ಲದೆ, ನೆನಪಿನಲ್ಲಿ ಉಳಿಯುವಂತಹ ಅದ್ಭುತ ರಜಾದಿನಗಳ ಅನುಭವವನ್ನು ನೀಡುವುದು ನಮ್ಮ ಉದ್ದೇಶ," ಎಂದು ಹೇಳಿದ್ದಾರೆ.

ಈ ಆಕರ್ಷಕ ಲಕ್ಷದ್ವೀಪ ಹಾಲಿಡೇ ಪ್ಯಾಕೇಜ್‌ಗಳನ್ನು ಮೇಕ್‌ಮೈಟ್ರಿಪ್‌ನ ಆ್ಯಪ್, ಅಧಿಕೃತ ವೆಬ್‌ಸೈಟ್ ಅಥವಾ ಅದರ ಫ್ರಾಂಚೈಸಿ ಕೇಂದ್ರಗಳ ಮೂಲಕ ಸುಲಭವಾಗಿ ಬುಕ್ ಮಾಡಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+