ವಿಮಾನದಲ್ಲಿ ಸೊಳ್ಳೆ ಎಂದು ದೂರು ನೀಡಿದ ಡಾಕ್ಟರ್‌, ಮುಂದೇನಾಯ್ತು?

Posted By: Nayana
Subscribe to Oneindia Kannada

ಲಕ್ನೋ: ಬೆಂಗಳೂರು ಮೂಲದ ಹೃದ್ರೋಗ ತಜ್ಞ ಡಾ. ಸೌರಭ್ ರೈ ಇಂಡಿಗೋ ವಿಮಾನದ ಒಳಗಡೆ ಸೊಳ್ಳೆ ಇದೆ ಎಂದು ದೂರು ನೀಡಿದ್ದಕ್ಕೆ ವಿಮಾನದಿಂದ ಇಳಿಸಿರುವ ಘಟನೆ ನಡೆದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ವಿಮಾನದಲ್ಲಿ ಸೊಳ್ಳೆ ಸಾಕಷ್ಟಿದೆ, ಯಾಕೆ ಸ್ವಚ್ಛ ಮಾಡಿಲ್ಲ ಎಂದು ದೂರು ನೀಡಿದ್ದಷ್ಟೇ ಅಲ್ಲದೆ ವಿಮಾನದ ಸಿಬ್ಬಂದಿ ಜತೆ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ ಹೈಜಾಕ್ ನಂಥ ಪದಗಳನ್ನು ಬಳಸಿದ್ದರು., ವಿಮಾನದ ಸುರಕ್ಷಿತಾ ನಿಯಮಗಳ ಪ್ರಕಾರ ಅವರನ್ನು ವಿಮಾನದಿಂದ ಹೊರಗೆ ಕಳುಹಿಸಲಾಯಿತು' ಎಂದು ಇಂಡಿಗೋ ಹೇಳಿದೆ.

Bengaluru dr Sourabh Rai mistreated in Indigo Flight

ಡಾ. ರೈ ಸೋಮವಾರ ಬೆಳಗ್ಗೆ 6 ಗಂಟೆಗೆ ವಿಮಾನ ಹತ್ತಿದರು. ಹತ್ತಿದ ತಕ್ಷಣವೇ ಅವರು ವಿಮಾನದಲ್ಲಿ ಸೊಳ್ಳೆ ಇದೆ ಎಂದು ಸಿಬ್ಬಂದಿ ಬಳಿ ಹೇಳಿ, ಈ ಕುರಿತು ಪ್ರಯಾಣಿಕರಿಗೆ ತಿಳಿಸುವಂತೆ ವಿಮಾನ ಸಿಬ್ಬಂದಿಯವರ ಬಳಿ ಹೇಳುತ್ತಾರೆ , ಆಗ ಸಿಬ್ಬಂದಿ ಅವರನ್ನು ಸುಮ್ಮನೆ ಕೂರುವಂತೆ ಹೇಳಿದ್ದಾರೆ. ನಂತರ ಅವರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indigo flight from Lucknow to Bengaluru was full of mosquitoes, when Dr.Sourabh Rai raised objection, He was manhandled by the crew and offloaded from the aircraft, he was even threatened.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ