Cyclone Alert: ಅ.26ಕ್ಕೆ ಚಂಡಮಾರುತ ಸೃಷ್ಟಿ, ಭಾರೀ ಮಳೆ ಎಚ್ಚರಿಕೆ! ಕೂನೂರು ಹೈವೇಯಲ್ಲಿ ಭೂಕುಸಿತ, ಸಾವು
ಕೂನೂರು: ಹಲವು ದಿನಗಳಿಂದ ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪ್ರದೇಶ, ವಾಯುಭಾರ ಕುಸಿತವು ಮತ್ತಷ್ಟು ತೀವ್ರಗೊಳ್ಳಲಿದೆ. ಇದೇ ಅಕ್ಟೋಬರ್ 26ರಂದು ಈ ವೈಪರೀತ್ಯವು ಇನ್ನಷ್ಟು ಚಂಡಮಾರುತವಾಗುವ ಸಾಧ್ಯತೆ ಇದೆ. ಈ ವೇಳೆ ದಕ್ಷಿಣ ಭಾರತದ ಕರಾವಳಿ ರಾಜ್ಯಗಳಿಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗಲಿದೆ ಎಂದು ಐಎಂಡಿ ತಿಳಿಸಿದೆ. ಶುಕ್ರವಾರ ಸುರಿದ ಮಳೇಗೆ ಕೂನೂರು-ಮೆಟ್ಟುಪಾಳ್ಯಂ ಹೆದ್ದಾರಿಯಲ್ಲಿ ಭೂಕುಸಿತವಾಗಿದೆ. ಬಸ್ ಚಾಲಕರೊಬ್ಬರ ದುರಂತ ಸಾವಾಗಿದೆ.
ಮೊದಲಿಗೆ ಉಲ್ಭಣಿಸಲಿರುವ ಚಂಡಮಾರುತ ಬಗ್ಗೆ ತಿಳಿಯುವುದಾದರೆ, ಬಂಗಾಳಕೊಲ್ಲಿ ಆಗ್ನೇಯ ಭಾಗದಲ್ಲಿ ಬಿರುಗಾಳಿ, ಟ್ರಫ್ ಉಂಟಾಗಿತ್ತು. ಪೂರ್ವ-ಮಧ್ಯ ಮತ್ತು ಪಕ್ಕದ ಆಗ್ನೆಯ ಬಂಗಾಳ ಕೊಲ್ಲಿಯ ಮೇಲೆ ಉತ್ತಮವಾಗಿ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶವು ಇಂದು ಶನಿವಾರ (ಅಕ್ಟೋಬರ್ 24) ತೀವ್ರಗೊಂಡ ಸ್ಥಿತಿಯಲ್ಲೇ ಇದೆ. ಸಂಬಂಧಿತ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ವಿಸ್ತರಿಸಿದೆ.

ಬೃಹತ್ ಚಂಡಮಾರುತ ಸೃಷ್ಟಿ
ಈ ಮೇಲಿನ ವೈಪರೀತ್ಯ ಪಶ್ಚಿಮ-ವಾಯುವ್ಯ ಕಡೆಗೆ ಚಲಿಸುವ ಸಾಧ್ಯತೆಯಿದೆ ಮತ್ತು ಅಕ್ಟೋಬರ್ 25 ರಂದು ಆಳವಾದ ಕಡಿಮೆ ಒತ್ತಡದ ಪ್ರದೇಶವು ಮತ್ತು ಅಕ್ಟೋಬರ್ 26 ರಂದು ಬೆಳಿಗ್ಗೆ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯ ಮೇಲೆ ಬೃಹತ್ ಚಂಡಮಾರುತವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸಲಿದೆ. ಅದು ಮತ್ತಷ್ಟು ತೀವ್ರಗೊಂಡು ಅಕ್ಟೋಬರ್ 28ರ ಬೆಳಗ್ಗೆ ಆಂಧ್ರಪ್ರದೇಶ ಕರಾವಳಿಯ ಬಳಿಯ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯನ್ನು ತಲುಪುತ್ತದೆ. ಆಗ್ನೆಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಲಕ್ಷದ್ವೀಪ ಪ್ರದೇಶದ ಮೇಲೆ ಕಡಿಮೆ ಒತ್ತಡದ ಪ್ರದೇಶವಾಗಿ ಮುಂದುವರಿಯಲಿದೆ. ಸಂಬಂಧಿತ ಚಂಡಮಾರುತದ ಪರಿಚಲನೆಯು ಈಗ ಸರಾಸರಿ ಸಮುದ್ರ ಮಟ್ಟಕ್ಕಿಂತ 7.6 ಕಿ.ಮೀ ವರೆಗೆ ವಿಸ್ತರಣೆ ಆಗಿದೆ.
ಮತ್ತೊಂದು ಕಡಿಮೆ ಒತ್ತಡದ ಪ್ರದೇಶ ಲಕ್ಷದ್ವೀಪದಲ್ಲಿ ನಿರ್ಮಾಣವಾಗಿದೆ. ಸಂಬಂಧಿಸಿದ ಚಂಡಮಾರುತದ ಪರಿಚಲನೆಯಿಂದ ಕೇರಳದಾದ್ಯಂತ ಉತ್ತರ ಕರಾವಳಿ ತಮಿಳುನಾಡಿನವರೆಗೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ವರೆಗೆ ವಿಸ್ತರಿಸಿದೆ. ಸೊಮಾಲಿಯಾ ಕರಾವಳಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ವರೆಗೆ ವಿಸ್ತರಿಸಿರುವ ಮೇಲ್ಬಾಗದ ವಾಯು ಚಂಡಮಾರುತದ ಪರಿಚಲನೆ ತಕ್ಕ ಮಟ್ಟಿಗೆ ಕಡಿಮೆ ಆಗಿದೆ.
ಕರಾವಳಿ ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ
ಚಂಡಮಾರುತ ಕಾರಣದಿಂದಾಗಿ ಅ.25ರಿಂದ ಕರ್ನಾಟಕದ ಒಳನಾಡು, ಕೇರಳ, ಪುದುಚೇರಿ, ಅಂಡಮಾನ್ ನಿಕೋಬಾರ್, ತಮಿಳುನಾಡು, ಆಂಧ್ರ ಪ್ರದೇಶ, ಓಡಿಶಾದ ಕೆಲವು ಸ್ಥಳಗಳಲ್ಲೂ ಗುಡುಗು ಸಹಿತ ಭಾರೀ ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಮಳೆ
ಶುಕ್ರವಾರ ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಮಳೆ ಆಗಿದೆ. ಆಂಧ್ರಪ್ರದೇಶದಲ್ಲೂ ಧಾರಾಕಾರ ಮಳೆ ಆಗುತ್ತಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಭಾರೀ ಮಳೆಯಿಂದಾಗಿ ಪರ್ವತ ಮಾರ್ಗಗಳಲ್ಲಿ ಹಲವು ಕಡೆ ಭೂಕುಸಿತಗಳು ಸಂಭವಿಸಿವೆ. ಇದರಿಂದ ದೈನಂದಿನ ಜೀವನ ಮತ್ತು ಸಾರಿಗೆ ವ್ಯವಸ್ಥೆಗೆ ತೀವ್ರ ಅಡಚಣೆ ಉಂಟಾಗಿದೆ.
ಕೂನೂರು-ಮೆಟ್ಟುಪಾಳ್ಯಂ ರಾಷ್ಟ್ರೀಯ ಹೆದ್ದಾರಿಯಲ್ಲಿ (ಬರ್ಲಿಯಾರ್) ಭೂಕುಸಿತ ದುರಂತ ಸಂಭವಿಸಿದೆ. ಹೆದ್ದಾರಿ ಮೇಲೆ ಮಣ್ಣು, ಕಲ್ಲು ಬಂಡೆಗಳು ಮತ್ತು ಅವಶೇಷಗಳು ಉರಳಿ ಬಿದ್ದಿದ್ದು, ಈ ವೇಳೆ ತಮಿಳುನಾಡು ರಾಜ್ಯ ಸಾರಿಗೆ ನಿಗಮದ (TNSTC) ಸರ್ಕಾರಿ ಬಸ್ ಒಂದು ಮಣ್ಣಿನಡಿ ಸಿಲುಕೊಂಡಿತ್ತು. ಕೂಡಲೇ ಸ್ಥಳಕ್ಕೆ ಎನ್‌ಡಿಆರ್ ಎಫ್ ಸಿಬ್ಬಂದಿ ಬಂದು ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ.
ರಕ್ಷಿಸಿದರೂ ಬದುಕದ ಬಡಜೀವ
ಮೂಲಗಳ ಪ್ರಕಾರ, ಒಟ್ಟು ವಾಹನದಲ್ಲಿ ಏಳು ಮಂದಿ ಇದ್ದು, ಭೂಕುಸಿತದಲ್ಲಿ ಸಿಲುಕಿದ್ದರು ಎನ್ನಲಾಗಿದೆ. ಅವಶೇಷಗಳ ಅಡಿಯಿಂದ ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಜನಗರಾಜ್ ಅವರನ್ನು ಮೆಟ್ಟುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದರಲ್ಲಿ ಒಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರು.
ಕೊಯಮತ್ತೂರು ಜಿಲ್ಲೆ ವ್ಯಾಪ್ತಿಯಲ್ಲಿ 25 ಸೆಂ.ಮೀ ಮಳೆ ಆಗಿದೆ. ಜಿಲ್ಲಾಧಿಕಾರಿ, ಸಚಿವರಾದ ಕಮಲಿ ಮತ್ತು ಸಂಪತ್, ಹಾಗೂ ಮೆಟ್ಟುಪಾಳ್ಯಂ ಶಾಸಕ ಸುನಿಲ್ ಆನಂದ್ ಸೇರಿದಂತೆ ಜಿಲ್ಲಾ ಅಧಿಕಾರಿಗಳು ಮತ್ತು ಪ್ರಮುಖ ನಾಯಕರು ಸ್ಥಳಕ್ಕೆ ಭೇಟಿ ನೀಡಿದರು. ಪರಿಹಾರ ಕಾರ್ಯ, ಚಿಕಿತ್ಸೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


Click it and Unblock the Notifications
