Bank Holiday: ಆಗಸ್ಟ್ 17ರ ವರೆಗೆ ಮೂರು ದಿನ ಬ್ಯಾಂಕ್‌ಗಳಿಗೆ ರಜೆ
Bank Holiday: ದೇಶದಲ್ಲಿ 2025ರ ವರ್ಷದ ಆರಂಭದಿಂದಲೂ ಇಲ್ಲಿವರೆಗೂ ಬ್ಯಾಂಕ್‌ಗಳಿಗೆ ಸಾಲು ರಜೆಗಳೇ ಸಿಕ್ಕಿವೆ. ಇದೀಗ ಮತ್ತೆ ಮುಂದಿನ ಮೂರು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹಾಗಾದ್ರೆ, ಕಾರಣ ಏನು ಹಾಗೂ ಯಾವ್ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ದೇಶದ ಹಲವೆಡೆ ಕಾರಣಾಂತರಗಳಿಂದ ಬ್ಯಾಂಕ್‌ಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಹಾಗೆಯೇ ಇದೀಗ ಮುಂದಿನ ಮೂರು ದಿನಗಳ ಕಾಲ ರಜೆ ಸಿಗಲಿದ್ದು, ಇದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ. ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಆಗಸ್ಟ್ 15ರಂದ ಇದು ರಾಷ್ಟ್ರೀಯ ರಜಾದಿ ಆಗಿದೆ. ಈ ದಿನ ದೇಶಾದ್ಯಂತ ಸ್ವಾಂತ್ರ್ಯ ದಿನಾಚರಣೆಯನ್ನು ಸಂಭ್ರಾಮಾಚರಣೆ ಮಾಡಲಾಗುತ್ತದೆ. ಈ ದಿನ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡಲಿವೆ. ಇನ್ನು ಪಾರ್ಸಿ ಹೊಸ ವರ್ಷ ಹಾಗೂ ಜನ್ಮಾಷ್ಟಮಿಯಂತಹ ವಿಶೇಷ ಹಬ್ಬಗಳನ್ನು ಸಹ ಇದೇ ದಿನ ಆಚರಣೆ ಮಾಡುವ ಹಿನ್ನೆಲೆ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡಲಿವೆ.
ಕೃಷ್ಣ ಜಯಂತಿ ಆಚರಣೆ ಹಿನ್ನೆಲೆ ಆಗಸ್ಟ್ 16 ರಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಮೊಸರು ಕುಡಿಕೆ ಕೃಷ್ಣ ಜಯಂತಿ ಹಬ್ಬವನ್ನು ಸಂಭ್ರಾಮಾಚರಣೆ ಮಾಡಲಾಗುತ್ತದೆ. ಈ ದಿನ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಬ್ಯಾಂಕ್ ಮುಚ್ಚಲ್ಪಡಲಿದ್ದು, ಉಳಿದ ಭಾಗಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುವುದಿಲ್ಲ.
ಆಗಸ್ಟ್ 17 ಭಾನುವಾರ ಆದ್ದರಿಂದ ಈ ದಿನ ಸಾಮಾನ್ಯವಾಗು ದೇಶದ ಎಲ್ಲಾ ಬ್ಯಾಂಕುಗಳಿಗೆ ಪೂರ್ವನಿಯೋಜಿತ ರಜಾದಿನ ಆಗಿರುತ್ತದೆ. ಸರ್ಕಾರಿ ರಜೆಗಳು ಹಾಗೂ ಸ್ಥಳೀಯ ಹಬ್ಬಗಳ ರಜೆಗಳನ್ನು ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿನ ಬ್ಯಾಂಕ್‌ಗಳಿಗೆ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ರಜೆ ಇರಲಿದೆ.
2025ರ ಬ್ಯಾಂಕ್ ರಜಾ ದಿನಗಳ ಪಟ್ಟಿ
* 1 ಜನವರಿ 2025: ಹೊಸ ವರ್ಷ
* 6 ಜನವರಿ 2025: ಗುರು ಗೋಬಿಂದ್ ಸಿಂಗ್ ಜಯಂತಿ
* 12 ಜನವರಿ 2025: ಸ್ವಾಮಿ ವಿವೇಕಾನಂದ ಜಯಂತಿ
* 14 ಜನವರಿ 2025: ಮಕರ ಸಂಕ್ರಾಂತಿ, ಪೊಂಗಲ್
* 23 ಜನವರಿ 2025: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ- ತ್ರಿಪುರಾ, ಒಡಿಶಾ, ಪಂಜಾಬ್, ಸಿಕ್ಕಿಂ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ನವದೆಹಲಿ
* 26 ಜನವರಿ 2025: ಗಣರಾಜ್ಯೋತ್ಸವ
* 3 ಫೆಬ್ರವರಿ 2025: ವಸಂತ್ ಪಂಚಮಿ
* 12 ಫೆಬ್ರವರಿ 2025: ಗುರು ರವಿದಾಸ್ ಜಿ ಜಯಂತಿ
* 26 ಫೆಬ್ರವರಿ 2025: ಮಹಾಶಿವರಾತ್ರಿ
* 14 ಮಾರ್ಚ್ 2025: ಹೋಳಿ
* ಮಾರ್ಚ್ 30: ಯುಗಾದಿ
* 1 ಏಪ್ರಿಲ್ 2025: ಬ್ಯಾಂಕ್ ಖಾತೆಗಳ ವಾರ್ಷಿಕ ಮುಚ್ಚುವಿಕೆ
* 5 ಏಪ್ರಿಲ್ 2025: ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ
* 10 ಏಪ್ರಿಲ್ 2025: ಮಹಾವೀರ ಜಯಂತಿ
* 14 ಏಪ್ರಿಲ್ 2025: ತಮಿಳು ಹೊಸ ವರ್ಷ
* 7 ಮೇ 2025: ಗುರು ರವೀಂದ್ರನಾಥ ಠಾಕೂರರ ಜನ್ಮದಿನ
* 7 ಜೂನ್ 2025: ಈದ್-ಉಲ್-ಜುಹಾ (ಬಕ್ರೀದ್)
* 12 ಮೇ 2025: ಬುದ್ಧ ಪೂರ್ಣಿಮೆ
* 10 ಜೂನ್ 2025: ಶ್ರೀ ಗುರು ಅರ್ಜುನ್ ದೇವ್ ಜಿಯವರ ಹುತಾತ್ಮ ದಿನ * 27 ಜೂನ್ 2025: ರಥಯಾತ್ರೆ
* 6 ಜುಲೈ 2025: ಮೊಹರಂ
* 9 ಆಗಸ್ಟ್ 2025: ರಕ್ಷಾ ಬಂಧನ
* 15 ಆಗಸ್ಟ್ 2025: ಸ್ವಾತಂತ್ರ್ಯ ದಿನಾಚರಣೆ
* 25 ಆಗಸ್ಟ್ 2025: ಶ್ರೀಮಂತ ಶಂಕರದೇವ ತಿಥಿ
* 26 ಆಗಸ್ಟ್ 2025: ವಿನಾಯಕ ಚತುರ್ಥಿ
* 5 ಸೆಪ್ಟೆಂಬರ್ 2025: ತಿರುವೋಣಂ
* 1 ಅಕ್ಟೋಬರ್ 2025: ಬ್ಯಾಂಕ್ ಖಾತೆಗಳ ಅರ್ಧ-ವಾರ್ಷಿಕ ಮುಚ್ಚುವಿಕೆ
* 2 ಅಕ್ಟೋಬರ್ 2025: ಗಾಂಧಿಜಯಂತಿ, ದಸರಾ
* 20 ಅಕ್ಟೋಬರ್ 2025: ದೀಪಾವಳಿ
* 22 ಅಕ್ಟೋಬರ್ 2025: ಗೋವರ್ಧನ ಪೂಜೆ
* 28 ಅಕ್ಟೋಬರ್ 2025: ಛತ್ ಪೂಜೆ
* 5 ನವೆಂಬರ್ 2025: ಗುರುನಾನಕ್ ಜಯಂತಿ
* 25 ಡಿಸೆಂಬರ್ 2025 ಕ್ರಿಸ್ಮಸ್ ದಿನ












Click it and Unblock the Notifications