ಸೆ.2ರಂದು ಮೋದಿ ಸರ್ಕಾರದ ವಿರುದ್ಧ ಬ್ಯಾಂಕ್ ಮುಷ್ಕರ

Posted By:
Subscribe to Oneindia Kannada

ವಡೋದರಾ, ಆಗಸ್ಟ್ 18: ಭಾರತೀಯ ಬ್ಯಾಂಕ್ ಗಳ ಒಕ್ಕೂಟ ಹಾಗೂ ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟ ಮುಂದುವರೆದಿದ್ದು, ಸೆಪ್ಟೆಂಬರ್ 2ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಟ್ರೇಡ್ ಯೂನಿಯನ್ ಗಳು ಕರೆ ನೀಡಿವೆ.

ಮೋದಿ ಸರ್ಕಾರದ ಜನವಿರೋಧಿ ನೀತಿ ಅನುಸರಿಸುತ್ತಿದೆ, ಕಾರ್ಮಿಕ ವಿರೋಧಿ ಸರ್ಕಾರದ ವಿರುದ್ಧ ಸುಮಾರು 5 ಲಕ್ಷಕ್ಕೂ ಅಧಿಕ ಬ್ಯಾಂಕ್ ಯೂನಿಯನ್ ನೌಕರರು ಮುಷ್ಕರ ಹೂಡಲಿದ್ದಾರೆ.[ವಿಜಯ್ ಮಲ್ಯ ಜತೆಗೆ 5,600 ಮಂದಿ ಸುಸ್ತಿದಾರರು]

Bank unions decide to join national strike on Sep 2

ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ, ವೇತನ ಪರಿಷ್ಕರಣೆ, ಬ್ಯಾಂಕ್ ಗಳ ವಿಲೀನಗಳಲ್ಲಿ ಕಂಡು ಬಂದಿರುವ ಸಮಸ್ಯೆಗಳ ಜೊತೆಗೆ ಈ ಹಿಂದೆ ಒಕ್ಕೂಟ ನೀಡಿರುವ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಕಾರಣವನ್ನು ನೌಕರರ ಒಕ್ಕೂಟ ಹೇಳಿದೆ. [ಒಂದು ದಿನದ ಬ್ಯಾಂಕ್ ಮುಷ್ಕರದಿಂದಾದ ನಷ್ಟವೆಷ್ಟು?]

ಬೆಂಬಲ ಸೂಚಿಸಿದ ಒಕ್ಕೂಟಗಳು: ಯುಎಫ್ ಬಿಯು, ಎಐಬಿಇಎ, ಎಐಬಿಒಸಿ, ಎನ್ ಸಿಬಿಇ, ಎಐಬಿಒಎ, ಬಿಇಎಫ್ ಐ, ಐಎನ್ ಬಿಇಎಫ್, ಐಎನ್ ಬಿಒಸಿ, ಎನ್ ಒ ಬಿಡಬ್ಲ್ಯೂ, ಎನ್ ಒ ಬಿಒ ಮುಂತಾದ ಒಕ್ಕೂಟಗಳು.

ವಿವಿಧ ಬ್ಯಾಂಕುಗಳು ನಾಲ್ಕು ವರ್ಷಗಳ ಅವಧಿಗೆ 70 ಸಾವಿರ ಕೋಟಿ ರೂಪಾಯಿ ಪಡೆದುಕೊಳ್ಳಲಿವೆ. ಬ್ಯಾಂಕ್ ಗಳ ಮರುಬಂಡವಾಳೀಕರಣಕ್ಕೆ ಈ ಬಾರಿಯ ಹಣಕಾಸು ವರ್ಷದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ 25 ಸಾವಿರ ಕೋಟಿ ರೂಪಾಯಿ ಮೀಸಲಿಡುತ್ತೇನೆ ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nearly 5 lakh bank union workers and officers are set to join the strike called by trade unions on September 2 to protest against what they call anti-people policies of the Modi government and labour reforms.
Please Wait while comments are loading...