Bank Strike: ಸೆ.28ರಿಂದ 30 ರವರೆಗೆ ಬ್ಯಾಂಕ್ ಮುಷ್ಕರ: 5 ದಿನ ಬ್ಯಾಂಕ್ ಬಂದ್, ಯಾವ ಸೇವೆ ಇರಲಿದೆ - ಇಲ್ಲ, SBI ಹೇಳಿದ್ದೇನು

Bank Strike: ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಹೀಗಾಗಿ, ಸುದೀರ್ಘ 5 ದಿನ ಬ್ಯಾಂಕ್ ಬಂದ್ ಇರಲಿದೆವೇ ಎನ್ನುವ ಆತಂಕ ವ್ಯಕ್ತವಾಗುತ್ತಿದೆ. ಈ ನಡುವೆ ಎಸ್‌ಬಿಐ ಸಹ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಬ್ಯಾಂಕ್ ಸೇವೆಗಳಲ್ಲಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) (ಭಾರತದ ಬ್ಯಾಂಕಿಂಗ್ ಉದ್ಯೋಗಿಗಳ ವಿವಿಧ ಪ್ರಮುಖ ಕಾರ್ಮಿಕ ಸಂಘಟನೆಗಳ ಒಕ್ಕೂಟ) ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದ ಬ್ಯಾಂಕ್ ಶಾಖೆಗಳ ಕಾರ್ಯಾಚರಣೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ವಾರಾಂತ್ಯವೂ ಇರುವುದರಿಂದ ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

Bank Strike 5 Day Bank Closure From September 26 30 Check Available Services SBIs Key Advisory

ಇನ್ನು ಸೆಪ್ಟೆಂಬರ್‌ 26ರಂದು ತಿಂಗಳ ಎರಡನೇ ಶನಿವಾರವಾದ ಕಾರಣ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಅಲ್ಲದೆ ಸೆಪ್ಟೆಂಬರ್ 27 ಭಾನುವಾರವೂ ಬ್ಯಾಂಕ್ ಗಳು ಬಂದ್‌ ಇರಲಿವೆ. ಹೀಗಾಗಿ ಮುಷ್ಕರ ನಡೆದರೆ, ಸೆಪ್ಟೆಂಬರ್‌ 26ರಿಂದ 30ರವರೆಗೆ ಸತತ 5 ದಿನ ಬ್ಯಾಂಕ್‌ಗಳು ಮುಚ್ಚಿರುವ ಸಾಧ್ಯತೆ ಇದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್‌ಗಳು ಗ್ರಾಹಕರು ಮುಷ್ಕರ ಆರಂಭವಾಗುವ ಮೊದಲು ತಮ್ಮ ಬ್ಯಾಂಕ್‌ ಸಂಬಂಧಿತ ಕೆಲಸಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿವೆ. ಹೀಗಾಗಿ, ಈ ಬಾರಿಯ ಬ್ಯಾಂಕ್ ಮುಷ್ಕರ ಸುದೀರ್ಘ ಅವಧಿಯೊಂದಿಗೆ ಸಾರ್ವಜನಿಕರ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಎಸ್‌ಬಿಐ ತನ್ನ ಸಿಬ್ಬಂದಿ ಹಾಗೂ ಬ್ಯಾಂಕ್‌ನ ಖಾತೆದಾರರಿಗೆ ಹೇಳಿದ್ದೇನು ಎನ್ನುವುದನ್ನು ಮುಂದೆ ನೋಡೋಣ.

Bank Strike: SBIನಿಂದ ಮಹತ್ವದ ಸೂಚನೆ

ಇನ್ನು ಸೆಪ್ಟೆಂಬರ್ 28 ರಿಂದ 30ರ ವರೆಗೆ ಮೂರು ದಿನಗಳ ದೇಶಾದ್ಯಂತ ಬ್ಯಾಂಕ್ ಮುಷ್ಕರ ಪ್ರಾರಂಭವಾಗುವುದಕ್ಕೂ ಮುಂಚೆಯೇ ಬ್ಯಾಂಕಿಂಗ್ ವಹಿವಾಟುಗಳನ್ನು ಪೂರ್ಣಗೊಳಿಸಲು ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಲಹೆ ನೀಡಿದೆ.

ಸಂಭಾವ್ಯ ಅಡಚಣೆಗಳನ್ನು ತಪ್ಪಿಸುವ ಉದ್ದೇಶದಿಂದ ಗ್ರಾಹಕರು ಮುಷ್ಕರದ ಅವಧಿಗೆ ಮುಂಚಿತವಾಗಿ ಬ್ಯಾಂಕ್‌ಗೆ ಸಂಬಂಧಿಸಿದ ವಹಿವಾಟುಗಳನ್ನು ಪ್ಲ್ಯಾನ್ ಮಾಡಿಕೊಳ್ಳುವಂತೆ SBI ಹೇಳಿದೆ. ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಮುಷ್ಕರದಲ್ಲಿ ಭಾಗವಹಿಸಿದರೆ ಬ್ಯಾಂಕ್ ಬ್ರ್ಯಾಂಚ್‌ಗಳಿಗೆ ಭೇಟಿ, ಸಿಬ್ಬಂದಿ ನೆರವು, ದಾಖಲೆ ಪರಿಶೀಲನೆ ಅಥವಾ ಇತರ ವೈಯಕ್ತಿಕ ಪ್ರಕ್ರಿಯೆಗಳ ಅಗತ್ಯವಿರುವ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದೂ ಎಸ್‌ಬಿಐ ಹೇಳಿದೆ. ಹೀಗಾಗಿ, ಈ ಮುಷ್ಕರ ಪ್ರಾರಂಭವಾಗುವುದಕ್ಕೂ ಮುಂಚೆಯೇ ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸಗಳನ್ನು ಮುಗಿಸಿಕೊಳ್ಳುವಂತೆ ತಿಳಿಸಲಾಗಿದೆ.

ಯಾವ ಪ್ರಮುಖ ಸೇವೆಗಳು ಇರುವುದಿಲ್ಲ

ನೇರವಾಗಿ ಬ್ಯಾಂಕ್‌ ಕಚೇರಿ ಮತ್ತು ಬ್ರ್ಯಾಂಚ್‌ಗಳಿಗೆ ಭೇಟಿ ನೀಡುವುದಕ್ಕೆ ಸಂಬಂಧಿಸಿದ ಕೆಲವು ನಿರ್ದಿಷ್ಟ ಸೇವೆಗಳು ಲಭ್ಯವಿರಲ್ಲ. ಭೌತಿಕ ದಾಖಲೆಗಳು ಅಥವಾ ಸಿಬ್ಬಂದಿ ಸಹಾಯದ ಅಗತ್ಯವಿರುವ ಸೇವೆಗಳು ಸಿಗುವುದಿಲ್ಲ. ಅಲ್ಲದೆ ಮುಷ್ಕರದ ಸಮಯದಲ್ಲಿ ಚೆಕ್-ಸಂಬಂಧಿತ ಪ್ರಕ್ರಿಯೆಗಳು ಮತ್ತು ಇತರ ಶಾಖೆ-ಅವಲಂಬಿತ ಸೇವೆಗಳು ಸಿಗದೇ ಇರಬಹುದು ಅಥವಾ ವಿಳಂಬವಾಗುವ ಸಾಧ್ಯತೆ ಇದೆ.

ಬ್ಯಾಂಕ್‌ ಮುಷ್ಕರದ ಅವಧಿಯಲ್ಲಿ ಯಾವ ಸೇವೆಗಳು ಲಭ್ಯವಿರಲಿದೆ ?

ಇನ್ನು ಬ್ಯಾಂಕ್ ಮುಷ್ಕರದ ಅವಧಿಯಲ್ಲಿ ಕೆಲವೊಂದು ಪ್ರಮುಖ ಸೇವೆಗಳು ಲಭ್ಯವಿರಲಿವೆ.

ಬ್ಯಾಂಕ್‌ ಮುಷ್ಕರದ ಸಮಯದಲ್ಲಿ ಎಂಟಿಎಂ ಸೇವೆ ಇರಲಿದೆ.

ಆಯ್ದ ಬ್ಯಾಂಕಿಂಗ್ ಸೇವೆಗಳಿಗೆ ಗ್ರಾಹಕ ಸೇವಾ ಕೇಂದ್ರಗಳು ಲಭ್ಯವಿರಲಿವೆ.

ದಿನನಿತ್ಯದ ವಹಿವಾಟಿಗಾಗಿ ಡಿಜಿಟಲ್ ಬ್ಯಾಂಕಿಂಗ್ ಸೇವೆ ಇರಲಿದೆ.

ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, YONO ಹಾಗೂ UPI ಸೇವೆಗಳು ಇರಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+