Bank Holiday: ಬುಧವಾರ ಫೆ.12 ರಂದು ಬ್ಯಾಂಕ್ ರಜೆ, ಕಾರಣವೇನು? RBI ರಜೆ ಪಟ್ಟಿ
Bank Holiday: ಪ್ರತಿ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಸಾಮಾನ್ಯವಾಗಿ ಬ್ಯಾಂಕ್‌ಗಳು ರಜೆ ಇರುತ್ತವೆ. ಜೊತೆಗೆ ಹಬ್ಬ ಹರಿದಿನಗಳೂ, ಆಚರಣೆಗಳು ಸಂದರ್ಭದಲ್ಲಿ ಬ್ಯಾಂಕ್‌ಗೆ ರಜೆ ಘೋಷಿಸಿರಲಾಗುತ್ತದೆ. ಇದನ್ನು ಆರ್‌ಬಿಐ ಗಡ್‌ಲೈನ್ಸ್ ಮುಖಾಂತರವೇ ರಜೆ ನೀಡಲಾಗಿರುತ್ತದೆ. ಅದರಂತೆ ನಾಳೆ ಬುಧವಾರ ಫೆಬ್ರವರಿ 12ರಂದು ಈ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದ್ದು, ಸಾರ್ವಜನಿಕರು ಗಮನಿಸಿಬೇಕು.
ಗುರು ರವಿದಾಸ ಜಯಂತಿ ಪ್ರಯುಕ್ತ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದೆ. ಗುರು ರವಿದಾಸರ ಜಯಂತಿಯನ್ನು ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ. ಹೀಗಾಗಿ ಭಾಗದಲ್ಲಿ ಎಲ್ಲೆಲ್ಲಿ ಆಚರಣೆ ಮಾಡುತ್ತಾರೋ ಅಲ್ಲಲ್ಲಿ ಫೆಬ್ರವರಿ 12 ರ ಬುಧವಾರ ಬ್ಯಾಂಕ್ ರಜೆ ಇದೆ. ಹಿಮಾಚಲ ಪ್ರದೇಶದಲ್ಲಿ ಬುಧವಾರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದರೊಂದಿಗೆ RBI ನೀಡಿರುವ ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಫೆಬ್ರವರಿ ರಜಾ ಪಟ್ಟಿಯು ಇಲ್ಲಿದೆ.

ಹಿಮಾಚಲ ಪ್ರದೇಶ ಬಿಟ್ಟು ಉಳಿದೆಲ್ಲಡೆ ಫೆಬ್ರವರಿ 12 ಬುಧವಾರ ಬ್ಯಾಂಕ್‌ಗಳು ಎಂದಿನಂತೆ ತೆರೆದಿರುತ್ತವೆ.
ಸಂತ ಗುರು ರವಿದಾಸರ ಬೋಧನೆಗಳು ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆ ಗೌರವಿಸಲು ಸಮರ್ಪಿಸಲಾಗಿದೆ. ಹೀಗಾಗಿ ಫೆ.12ರಂದು ಅವರಿಗೆ ಗೌರವಸೂಚಕವಾಗಿ ಬ್ಯಾಂಕ್ ಒಂದು ದಿನ ಸ್ಥಗಿತಗೊಳಿಸಲಾಗುತ್ತದೆ.
ಫೆಬ್ರವರಿ 2025: ರಾಜ್ಯವಾರು ಬ್ಯಾಂಕ್ ರಜಾದಿನಗಳ ಪಟ್ಟಿ
ಪ್ರತಿ ಮಾಸಿಕದಲ್ಲೂ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸ್ಥಳೀಯ ಹಬ್ಬಗಳು, ವಾರ್ಷಿಕೋತ್ಸವ, ಭಾನುವಾರ ಹಾಗೂ ನಿಗದಿತ ಎರಡು ಶನಿವಾರದ ದಿನಗಳು ಕಾರ್ಯ ನಿರ್ವಹಿಸುವುದಿಲ್ಲ. ಮೊದಲು ಹಾಗೂ ಮೂರನೇ ಶನಿವಾರ ಎಲ್ಲ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ಚಟುವಟಿಕೆ ನಡೆಸುತ್ತವೆ. ಈ ಫೆಬ್ರವರಿಯಲ್ಲಿ 14 ದಿನಗಳ ಕಾಲ ಬ್ಯಾಂಕ್ ಮುಚ್ಚಲ್ಪಡುತ್ತವೆ.
ಫೆಬ್ರವರಿ 11 ಮಂಗಳವಾರ ಥೈಪುಸಮ್: ಚೆನ್ನೈ ಬ್ಯಾಂಕ್‌ಗಲು ರಜೆ
ಫೆಬ್ರವರಿ 12 ಬುಧವಾರ: ಶಿಮ್ಲಾ, ಹಿಮಾಚಲ ಪ್ರದೇಶನಲ್ಲಿ ಸಂತ ರವಿದಾಸ್ ಜಯಂತಿ: ಬ್ಯಾಂಕ್ ರಜೆ
ಫೆಬ್ರವರಿ 15 ಶನಿವಾರ: ಇಂಫಾಲ್‌ನಲ್ಲಿ ಲೋಯಿ-ಂಗೈ-ನಿ ಸಂದರ್ಭದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಫೆಬ್ರವರಿ 19 ಬುಧವಾರ: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕ್ ರಜೆ
ಫೆಬ್ರವರಿ 20 ಗುರುವಾರ: ಐಜ್ವಾಲ್ ಮತ್ತು ಇಟಾನಗರದಲ್ಲಿ ಬ್ಯಾಂಕ್ ಬಂದ್
ಫೆಬ್ರವರಿ 26 ಬುಧವಾರ ರಂದು ಅಹಮದಾಬಾದ್, ಐಜ್ವಾಲ್, ಬೆಂಗಳೂರು, ಬೇಲಾಪುರ, ಭೋಪಾಲ್, ಜೈಪುರ, ಜಮ್ಮು, ಕಾನ್ಪುರ, ಕೊಚ್ಚಿ, ಭುವನೇಶ್ವರ, ಚಂಡೀಗಢ, ಡೆಹ್ರಾಡೂನ್, ಮುಂಬೈ, ನಾಗ್ಪುರ, ರಾಯ್ಪುರ, ರಾಂಚಿ, ಶಿಮ್ಲಾ, ಹೈದರಾಬಾದ್, ಲಕ್ನೋ, ತಿರುವನಂತಪುರಂ ಮತ್ತು ಶ್ರೀನಗರಗಳಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಬ್ಯಾಂಕ್ ರಜೆ.
ಬ್ಯಾಂಕ್ ವಾರಾಂತ್ಯದ ರಜಾದಿನ
ಫೆಬ್ರವರಿ 16 ಭಾನುವಾರ: ವಾರದ ರಜೆ, ಫೆಬ್ರವರಿ 22 ಮತ್ತು 23 ಶನಿವಾರ-ಭಾನುವಾರ: ನಾಲ್ಕನೇ ಶನಿವಾರ & ವಾರದ ರಜೆ.
RBI ರಜಾ ದಿನದ ಪಟ್ಟಿ
ಫೆಬ್ರವರಿ 11, 12, 15, 19, 20, 26, 28ರಂದು ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಇಂಫಾಲ್, ಇಟಾನಗರ, ಕಾನ್ಪುರ, ಕೊಚ್ಚಿ, ಕೋಲ್ಕತ್ತಾ, ಕೊಹಿಮಾ, ಗ್ಯಾಂಗ್ಟಾಕ್, ಗುವಾಹಟಿ, ಚಂಡೀಗಢ, ಚೆನ್ನೈ, ಜಮ್ಮು, ಜೈಪುರ, ತಿರುವನಂತಪುರಂ, ಡೆಹ್ರಾಡೂನ್, ನವ ದೆಹಲಿ, ನಾಗ್ಪುರ, ಪಾಟ್ನಾ, ಪಣಜಿ, ಬೆಂಗಳೂರು, ಬೇಲಾಪುರ, ಭವನೇಶ್ವರ, ಭೋಪಾಲ್, ಮುಂಬೈ, ರಾಂಚಿ, ರಾಯ್‌ಪುರ, ಶ್ರೀನಗರ, ಶಿಮ್ಲಾ, ಶಿಲ್ಲಾಂಗ್, ಹೈದರಾಬಾದ್ - ಆಂಧ್ರಪ್ರದೇಶ, ಹೈದರಾಬಾದ್, ತೆಲಂಗಾಣದಲ್ಲಿ ಬ್ಯಾಂಕ್ ರಜೆ ಇರಲಿವೆ.












Click it and Unblock the Notifications