ಬದರಿನಾಥ ಧಾಮ: ವೇದ ಘೋಷಗಳ ಮಧ್ಯೆ ಭಕ್ತರಿಗಾಗಿ ತೆರೆದ ಪುರಾತನ ಯಾತ್ರಾಸ್ಥಳ
ಬದರಿನಾಥ ಧಾಮ ಮೇ 8: ಉತ್ತರಾಖಂಡದ ಬದರಿನಾಥ ಧಾಮ ಆರು ತಿಂಗಳ ನಂತರ ಇಂದು ತೆರೆದಿದೆ. ಧಾರ್ಮಿಕ ವಿಧಿಗಳು ಮತ್ತು ಪಠಣಗಳೊಂದಿಗೆ ಭಕ್ತರಿಗೆ ಬದರಿನಾಥ ಬಾಗಿಲನ್ನು ತೆರೆಯಲಾಗಿದೆ. ಈ ವೇಳೆ ಬದರಿನಾಥ ಧಾಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದು ದೇವಾಲಯವನ್ನು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಲಾಗಿದೆ.
ಅಲಕನಂದಾ ನದಿಯ ದಡದಲ್ಲಿ ಚಮೋಲಿ ಜಿಲ್ಲೆಯ ಗರ್ವಾಲ್ ಬೆಟ್ಟದ ಹಳಿಗಳಲ್ಲಿ ನೆಲೆಗೊಂಡಿರುವ ಬದರಿನಾಥ ದೇವಾಲಯವು ವಿಷ್ಣುವಿಗೆ ಸಮರ್ಪಿತವಾಗಿದೆ. ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥಗಳನ್ನು ಒಳಗೊಂಡಿರುವ 'ಚಾರ್ ಧಾಮ್' ಎಂದು ಕರೆಯಲ್ಪಡುವ ನಾಲ್ಕು ಪುರಾತನ ಯಾತ್ರಾ ಸ್ಥಳಗಳಲ್ಲಿ ಈ ದೇವಾಲಯವು ಒಂದಾಗಿದೆ. ಇದು ಉತ್ತರಾಖಂಡದ ಬದರಿನಾಥ ಪಟ್ಟಣದಲ್ಲಿದೆ. ಇದು ಪ್ರತಿ ವರ್ಷ ಆರು ತಿಂಗಳವರೆಗೆ ತೆರೆದಿರುತ್ತದೆ (ಏಪ್ರಿಲ್ ಅಂತ್ಯ ಮತ್ತು ನವೆಂಬರ್ ಆರಂಭದ ನಡುವೆ).
#WATCH | Uttarakhand: The doors of Badrinath Dham opened for devotees with rituals and chanting and the tunes of army band with a large number of devotees present in Badrinath Dham. pic.twitter.com/LiCTexcbJu
— ANI UP/Uttarakhand (@ANINewsUP) May 8, 2022

ಶುಕ್ರವಾರ ಬೆಳಗ್ಗೆ ಕೇದಾರನಾಥ ದೇವಾಲಯವು ಯಾತ್ರಾರ್ಥಿಗಳಿಗಾಗಿ ತನ್ನ ಬಾಗಿಲು ತೆರೆಯಿತು. ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ತೆರೆಯುವುದರೊಂದಿಗೆ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಮೇ 3 ರಂದು ವಾರ್ಷಿಕ ಚಾರ್ಧಾಮ್ ಯಾತ್ರೆ ಪ್ರಾರಂಭವಾಯಿತು. ಬದರಿನಾಥ ದೇವಾಲಯವನ್ನು ಇಂದು (ಮೇ 8) ತೆರೆಯಲಾಗಿದೆ.
#WATCH Devotees sing and dance as the portals of Shri Badrinath Dham, Uttarakhand open today pic.twitter.com/E3eBLsCYUE
— ANI UP/Uttarakhand (@ANINewsUP) May 8, 2022

ಈ ತಿಂಗಳ ಆರಂಭದಲ್ಲಿ ರಾಜ್ಯ ಸರ್ಕಾರವು ಚಾರ್ ಧಾಮ್‌ಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಿದೆ. ಪ್ರತಿದಿನ ಒಟ್ಟು 15,000 ಯಾತ್ರಾರ್ಥಿಗಳಿಗೆ ಬದರಿನಾಥ, 12,000 ಕೇದಾರನಾಥ, 7,000 ಗಂಗೋತ್ರಿ ಮತ್ತು 4,000 ಯಮುನೋತ್ರಿಯಲ್ಲಿ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. 45 ದಿನಗಳ ಕಾಲ ಈ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಯಾತ್ರಾರ್ಥಿಗಳು COVID-19 ಪರೀಕ್ಷಾ ವರದಿ ಅಥವಾ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಲ್ಲ. ಚಾರ್ ಧಾಮ್‌ಗಳು ದೇಶ ಮತ್ತು ವಿದೇಶಗಳಿಂದ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತರನ್ನು ಸೆಳೆಯುತ್ತವೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications