ಉತ್ತರ ಪ್ರದೇಶದಲ್ಲಿ ಕಳ್ಳಭಟ್ಟಿ ದುರಂತ, ಸಾವಿನ ಸಂಖ್ಯೆ 21ಕ್ಕೆ ಏರಿಕೆ

ಲಕ್ನೊ, ಜುಲೈ 9: ಕಳ್ಳಭಟ್ಟಿ ಸಾರಾಯಿ ಸೇವಿಸಿ ಉತ್ತರ ಪ್ರದೇಶದ ಅಝಂಗರ್ ನಲ್ಲಿ 21 ಜನ ಅಸುನೀಗಿದ್ದಾರೆ. ಇನ್ನೂ 10 ಕ್ಕೂ ಹೆಚ್ಚು ಜನ ವಿವಿಧ ಆಸ್ಪತ್ರೆಗಳಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಆದರೆ ಅಝಂಗರ್ ಜಿಲ್ಲಾಡಳಿತ ಮಾತ್ರ 12 ಜನ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದು ಉಳಿದವರು ಬೇರೆ ಕಾರಣಗಳಿಗಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

Azamgarh illicit liquor incident: Toll rises to 18, DM orders magisterial enquiry

ಇನ್ನು ಈ ದುರಂತದ ಕುರಿತು ನ್ಯಾಯಾಂಗ ತನಿಖೆಗೆ ಅಝಂಗರ್ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಕಳ್ಳಭಟ್ಟಿ ತಯಾರಿಯಲ್ಲಿ ತೊಡಗಿದ್ದಾರೆ ಎನ್ನಲಾದ 30 ಜನರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇವರಲ್ಲಿ 5 ಜನ ಸ್ಪಿರಿಟ್ ಮತ್ತು ಕಳ್ಳಭಟ್ಟಿ ತಯಾರಿಗೆ ಬೇಕಾದ ವಸ್ತುಗಳನ್ನು ಪೂರೈಸಿದವರು ಎನ್ನಲಾಗಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸರಕಾರ ಅಬಕಾರಿ ಇನ್ಸ್ ಪೆಕ್ಟರ್ ಸೇರಿ 6 ಜನರನ್ನು ಅಮಾನತುಗೊಳಿಸಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು ಶನಿವಾರದ ವೇಳೆಗೆ 21 ಜನ ಅಸುನೀಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+