ಐಸಿಸ್ ಉಗ್ರನ ಜತೆ ಅಜಂಘರ್ ವಿದ್ಯಾರ್ಥಿನಿಗೆ ಫೋನಲ್ಲೇ ಮದುವೆ!

ಅಜಂಘರ್, ಮೇ 30: ಉತ್ತರ ಪ್ರದೇಶದ ಅಜಂಘರ್ ನ ವೈದ್ಯ ವಿದ್ಯಾರ್ಥಿನಿಯೋರ್ವಳು ಐಸಿಸ್ ಉಗ್ರನ ಜತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂದು ಹೇಳಲಾಗಿದೆ. ಜತೆಗೆ ಆಕೆ ಆತನ ಜತೆಗೆ ಫೋನಿನಲ್ಲೇ ಮದುವೆಯಾಗಿದ್ದಾಳೆ ಎನ್ನಲಾಗಿದೆ.

ರಾಜಸ್ಥಾನದ ಚುರು ಮೂಲದ ಅಮ್ಜದ್ ಮತ್ತು ಈ ವೈದ್ಯ ವಿದ್ಯಾರ್ಥಿನಿ ಅನ್ಯೋನ್ಯವಾಗಿದ್ದರು. ಇದೀಗ ಅವರಿಬ್ಬರು ಮದುವೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

Azamgarh girl marries ISIS operative over phone

ಅಮ್ಜದ್ ಮೇಲೆ ಗುಪ್ತಚರ ಇಲಾಖೆ ಈ ಹಿಂದಿನಿಂದಲೂ ಕಣ್ಣಿಟ್ಟಿತ್ತು. ಆತ ಐಸಿಸ್ ಗೆ ಸೇರಿದ ಶಫಿ ಅರ್ಮರ್ ಎಂಬ ಸಂಘಟನೆಯವನಾಗಿದ್ದ. ಯುವಕರನ್ನು ಸಂಘಟನೆಯತ್ತ ಸೆಳೆಯುವುದು, ನೇಮಕ ಮಾಡಿಕೊಳ್ಳುವ ಕೆಲಸಗಳನ್ನು ಆತ ಮಾಡುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ವಿಚಾರಣೆಗಾಗಿ ಅಮ್ಜದ್ ನನ್ನು ಪೊಲೀಸರು ಕರೆದೊಯ್ದಿದ್ದರು.

ಅಮ್ಜದ್ ಜತೆ ಯುವತಿ ಎರಡು ವರ್ಷಗಳಿಂದ ಸಂಪರ್ಕದಲ್ಲಿದ್ದಾಳೆ. ಅವರಿಬ್ಬರು ಪ್ರೀತಿಯಲ್ಲಿ ಬೀಳುವ ಮೊದಲು ಇಂಟರ್ನೆಟ್ ನಲ್ಲಿ ಗಂಟೆಗಟ್ಟಲೆ ಸಂಭಾಷಣೆ ಮಾಡಿದ್ದಾರೆ. ಇತ್ತೀಚೆಗೆ ಅವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಯಾವಾಗ ತಾವು ಭೇಟಿಯಾಗುವುದು ಸಾಧ್ಯವಿಲ್ಲ ಅನ್ನಿಸಿತೋ ಆಗ ಇಬ್ಬರೂ ಪೋನಿನಲ್ಲೇ ಮದುವೆಯಾಗಲು ನಿರ್ಧರಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಇವರಿಬ್ಬರ ಮದುವೆ ಬಗ್ಗೆ ಪೋಷಕರಿಗೆ ಮಾಹಿತಿ ಇದೆಯಾ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಯುವತಿ ಮೇಲೆಯೂ ಕಣ್ಣಿಟ್ಟಿದ್ದು ಆಕೆಗೆ ಈತನ ಹಿನ್ನಲೆಗಳು ಗೊತ್ತಿದೆಯೇ ಇಲ್ಲವೇ ಎಂಬುದನ್ನು ಗಮನಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+