ಪ್ರಯಾಗ್‌ರಾಜ್ ಕುಂಭಮೇಳದ ಭಕ್ತಾದಿಗಳ ಸ್ವಾಗತಕ್ಕೆ ಅಯೋಧ್ಯೆ ಸಜ್ಜು
ಉತ್ತರ ಪ್ರದೇಶ, ಡಿಸೆಂಬರ್ 14: ಅಯೋಧ್ಯೆಯಲ್ಲಿ ರಾಮ ಮಂದಿರದ ಸ್ಥಾಪನೆಗೆ ಪ್ರಯಾಜ್‌ರಾಜ್‌ನ ಕುಂಭಮೇಳ ಕಾರ್ಯಕ್ರಮ ಅತ್ಯಂತ ಮಹತ್ವ ಹಾಗೂ ಪ್ರಮುಖ ಪಾತ್ರವಹಿಸಿದೆ. ಕುಂಭ ಮೇಳಕ್ಕೆ ಬಂದ ಕೋಟ್ಯಾಂತರ ಭಕ್ತರು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಮರ್ಯಾದೆ ಪುರುಷೋತ್ತಮ ಶ್ರೀರಾಮನ ದರ್ಶನ ಪಡೆದೇ ಪಡೆಯುತ್ತಾರೆ. ಹೀಗಾಗಿ 2025 ಜನವರಿ 25ರಿಂದ ಆರಂಭಗೊಳ್ಳುವ ಕುಂಭಮೇಳಕ್ಕೆ ಅಯೋಧ್ಯೆಯಲ್ಲಿಯೂ ಅಷ್ಟೇ ಉತ್ಸಾಹದಿಂದ ಬಲು ತಯಾರಿ ನಡೆಯುತ್ತಿದೆ.
ಕುಂಭಮೇಳಕ್ಕೆ ಬಂದ ಭಕ್ತಾಧಿಗಳು ಅಯೋಧ್ಯೆಯ ರಾಮನ ದರ್ಶನ ಪಡಯುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿಯೂ ಭಕ್ತರ ಸ್ವಾಗತಕ್ಕೆ ಅತ್ಯಂತ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಅಯೋಧ್ಯೆಯಲ್ಲಿ ಪ್ರಯಾಗ್‌ರಾಜ್ ಕುಂಭ ಮೇಳದ ಭಕ್ತಾದಿಗಳಿಗೆ ಆತಿಥ್ಯ ನೀಡಲು ವ್ಯವಸ್ಥೆ ಮಾಡಲಾಗಿದೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆಗಾಗಿ ಪ್ರಯಾಗ್‌ರಾಜ್‌ದಲ್ಲಿ ನಡೆದ ಎಲ್ಲಾ ಕುಂಭಮೇಳದ ಭಕ್ತಾದಿಗಳು ಹಾಗೂ ಸ್ಥಳೀಯರು ಅನೇಕ ರೀತಿಯ ಹೋರಾಟ ಒತ್ತಾಯ ಮಾಡಿದ್ದರು. ಒಂದು ಹಂತದಲ್ಲಿ ಅಯೋಧ್ಯೆಯ ರಾಮಮಂದಿರ ಸ್ಥಾಪನೆಗೆ ಹೋರಾಟದ ಕಿಚ್ಚು ಹಚ್ಚಿದವರು ಕುಂಭಮೇಳದ ಭಕ್ತರು ಎನ್ನಬಹುದು.
ಪ್ರಯಾಗರಾಜ್‌ನಲ್ಲಿ ಲಕ್ಷಾಂತರ ಜನರು ಕುಂಭಮೇಳಕ್ಕೆ ಸೇರುವಾಗ ಈ ವಿಷಯವನ್ನು ಹೇರಳವಾಗಿ ಒತ್ತಾಯ ಮಾಡಿದ್ದು ಈಗ ಇತಿಹಾಸ. ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದರೂ, ಆರ್‌ಎಸ್‌ಎಸ್ ಮತ್ತು ವಿಎಚ್‌ಪಿ ಸೇರಿದಂತೆ ಹಲವಾರು ಸಂಘಟನೆಗಳ ಬಾಬರಿ ಮಸೀದಿ ಇದ್ದ ವಿವಾದಿತ ಸ್ಥಳದಲ್ಲಿ ಭವ್ಯ ಮಂದಿರವನ್ನು ಶೀಘ್ರವಾಗಿ ನಿರ್ಮಿಸಲು ಕಾನೂನನ್ನು ಜಾರಿಗೆ ತರಲು ಮೋದಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದವರಲ್ಲಿ ಕುಂಭಮೇಳ ಭಕ್ತರು ಸಹ ಪ್ರಮುಖರಾಗಿದ್ದರು.

ರಾಮಮಂದಿರಕ್ಕೆ ಸುಗ್ರೀವಾಜ್ಞೆ ತರಲು ಬಿಜೆಪಿ ನಿರಾಕರಿಸಿದ್ದನ್ನು ಉಲ್ಲೇಖಿಸಿ ಘೋಷಣೆಗಳು ಆದಾಗ ಇದೇ ಪ್ರಯಾಗ್ ರಾಜ್ ಕುಂಭಮೇಳದ ಭಕ್ತರು ಹೋರಾಟಕ್ಕೆ ಇಳಿಯಲು ಮುಂದಾಗಿದ್ದರು. ಅಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರ ಸುಗ್ರೀವಾಜ್ಞೆ ಮಾರ್ಗವನ್ನು ತೆಗೆದುಕೊಳ್ಳುವ ಯಾವುದೇ ಮನಸ್ಥಿತಿಯಲ್ಲಿಲ್ಲ ಮತ್ತು ನ್ಯಾಯಾಂಗ ಪ್ರಕ್ರಿಯೆ ಮುಗಿದ ನಂತರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಎನ್ನುವ ಹೇಳಿಕೆಗೆ ಸಹ ಕುಂಭಮೇಳದ ಭಕ್ತರು ಸಮಮತ ವ್ಯಕ್ತಪಡಿಸಿದ್ದರು.
ವಿಶೇಷವೆಂದರೆ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಯಾಗರಾಜ್‌ನಲ್ಲಿ ಧರ್ಮ ಸಂಸದ್ ನಡೆಸುವುದಾಗಿ ಘೋಷಿಸಿತ್ತು. ಅಲ್ಲಿ ಸಾಧುಗಳು ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯದ ಬಾಕಿ ಇರುವ ಹಿನ್ನೆಲೆಯಲ್ಲಿ ತಮ್ಮ ಮುಂದಿನ ಕ್ರಮದ ಬಗ್ಗೆ ಚರ್ಚಿಸಿದ್ದು ಈಗ ಇತಿಹಾಸದ ಮೈಲುಗಲ್ಲು. ಹೀಗಾಗಿ ಅಯೋಧ್ಯೆಯ ರಾಮಮಂದಿರ ಹಾಗೂ ಪ್ರಯಾಗರಾಜ್‌ನ ಕುಂಭ ಮೇಳಕ್ಕೂ ಬಹಳ ನಂಟಿದೆ.












Click it and Unblock the Notifications