ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ, ಜವಾನ ಸೇರಿ 5 ಸಾವು

Posted By:
Subscribe to Oneindia Kannada

ಸೋನಮಾರ್ಗ್ (ಜಮ್ಮು ಮತ್ತು ಕಾಶ್ಮೀರ), ಜನವರಿ 25 : ಜಮ್ಮು ಮತ್ತು ಕಾಶ್ಮೀರದ ಸೋನಮಾರ್ಗ್ ಎಂಬಲ್ಲಿ ಭಾರತೀಯ ಸೇನೆಯ ಕ್ಯಾಂಪ್ ಮೇಲೆ ಭಾರೀ ಹಿಮಪಾತ ಆಗಿದ್ದು, ಓರ್ವ ಜವಾನ ಸತ್ತಿದ್ದಾರೆಂದು ತಿಳಿದುಬಂದಿದೆ. [ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ]

ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ. ಹಿಮಪಾತದಲ್ಲಿ ಸಿಲುಕಿರುವ ಯೋಧರನ್ನು ರಕ್ಷಿಸುವ ಕಾರ್ಯ ಸಾಗಿದ್ದು, ಇಲ್ಲಿಯವರೆಗೆ 8 ಯೋಧರನ್ನು ರಕ್ಷಿಸಲಾಗಿದೆ. ಈ ಹಿಮಪಾತದಲ್ಲಿ ಇನ್ನೂ ನಾಲ್ವರು ಸಾವಿಗೀಡಾಗಿದ್ದಾರೆ. [ಹಿಮಪಾತಕ್ಕೆ ಎಚ್.ಡಿ.ಕೋಟೆಯ ಯೋಧ ಮಹೇಶ್ ಬಲಿ]

Avalanche hits army camp in Sonamarg in Jammu and Kashmir

ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಹಿಮ ಸುರಿಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆಯ ವಿಜ್ಞಾನಿ ಚರಣ್ ಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕೆಲ ದಿನಗಳಿಂದ ಹಿಮ ಸುರಿಯುತ್ತಿದ್ದ ಜನಜೀವನ ಅಸ್ತವ್ಯಸ್ತವಾಗಿದೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಶ್ರೀನಗರದಲ್ಲಿ ಅಧಿಕವಾಗಿ ಹಿಮ ಸುರಿಯುತ್ತಿರುವುದರಿಂದ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Avalanche hits army camp in Sonamarg (Jammu & Kashmir), body of a jawan has been recovered. Army sources say death toll could rise.
Please Wait while comments are loading...