ಬಿಹಾರದಲ್ಲಿ ಭೀಕರ ಅಪಘಾತ: ಟ್ರಕ್‌ಗೆ ಆಟೋರಿಕ್ಷಾ ಡಿಕ್ಕಿ- 7 ಪ್ರಯಾಣಿಕರು ಸಾವು

ಬಿಹಾರದ ಕತಿಹಾರ್‌ನಲ್ಲಿ ಪ್ರಯಾಣಿಕರು ತುಂಬಿದ್ದ ಟ್ರಕ್‌ಗೆ ಆಟೋರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಮಕ್ಕಳು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೋಧಾ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿ 81 ದಿಗ್ರಿ ಪೆಟ್ರೋಲ್ ಪಂಪ್ ಬಳಿ ಅಪಘಾತ ಸಂಭವಿಸಿದೆ.

ತಕ್ಷಣ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ವಾಹನದಿಂದ ಹೊರತೆಗೆದಿದ್ದಾರೆ. ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಆಟೋರಿಕ್ಷಾ ಖೇರಿಯಾ ಗ್ರಾಮದಿಂದ ಕತಿಹಾರ್ ಕಡೆಗೆ ತೆರಳತ್ತಿದ್ದ ವೇಲೆ ಈ ಅಪಘಾತ ಸಂಭವಿಸಿದೆ. ಮೃತರೆಲ್ಲರನ್ನ ಒಂದೇ ಕುಟುಂಬದವರು ಎಂದು ಗುರುತಿಸಲಾಗಿದೆ. ಅವರಲ್ಲಿ ನಾಲ್ವರು ಪುರುಷರು, ಇಬ್ಬರು ಮಹಿಳೆಯರು ಮತ್ತು ಒಬ್ಬ ಬಾಲಕಿ ಮೃತಪಟ್ಟಿದ್ದಾರೆ.

 Autorickshaw collides with truck in Bihars Katihar: 7 passengers including children killed

ಮೃತರ ಕುಟುಂಬ ಮಧ್ಯಪ್ರದೇಶದ ಇಟಾರ್ಸಿಗೆ ಹೋಗುತ್ತಿತ್ತು. ಕತಿಹಾರ್‌ನಿಂದ ರೈಲು ಸಂಚಾರ ಮಾಡಬೇಕಿತ್ತು. ಈ ಅಪಘಾತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಗ್ರಾಮಸ್ಥರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಮೃತರ ಕುಟುಂಬದವರು ಕೂಡ ಸ್ಥಳಕ್ಕೆ ಆಗಮಿಸಿ ಆಕ್ರೋಶ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+