ಬಿಹಾರದಲ್ಲಿ ದಿಢೀರನೇ ಬೀಸಿದ ಬಿರುಗಾಳಿಗೆ 15 ಮಂದಿ ಬಲಿ

ಪಾಟ್ನಾ, ಮೇ 09 : ಬಿಹಾರದ ಹಲವು ಕಡೆಗಳಲ್ಲಿ ದಿಢೀರನೇ ಬೀಸಿದ ಬಿರುಗಾಳಿ ಭಾರೀ ಅನಾಹುತಗಳನ್ನು ಸೃಷ್ಟಿಸಿದೆ. ಬಿರುಗಾಳಿಯಿಂದಾಗಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು ನೂರಾರು ಕುಟುಂಬಗಳು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಬಿಹಾರದ ಹಲವು ಕಡೆ ಮಂಗಳವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಮಳೆಯಿಂದಾಗಿ 11 ಜಿಲ್ಲೆಗಳಲ್ಲಿ ಬೆಳೆ ನಾಶವಾಗಿವೆ ಮತ್ತು ಹಲವು ಮನೆಗಳು ಕುಸಿದು ಬಿದ್ದಿದ್ದು ಮರಗಳು ಧರೆಗುರುಳಿವೆ. ಇದರಿಂದ ಬಿಹಾರದ ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.

At least 15 persons were killed in squall in Bihar

ಲಖಿಸರಾಯಿ, ಔರಂಗಬಾದ್, ಮಧುಬನಿ ಮತ್ತು ಬೆಗುಸರಾಯಿ ಜಿಲ್ಲೆಯಲ್ಲಿ ತಲಾ ಇಬ್ಬರು ಹಾಗೂ ಪಾಟ್ನಾ ನಲಂದಾ, ಪುರ್ಣೆಯಿ, ದರ್ಬಾಂಗ್, ಸುಪೌಲ್, ಅರರಿಯಾ ಮತ್ತು ಮುಂಗೆರ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣೆ ಇಲಾಖೆ ಪ್ರಧಾನ ಕಾರ್ಯದರ್ಶಿಪ್ರತ್ಯಯ್ ಅಮೃತ್ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರುಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಅಮೃತ್ ಹೇಳಿದ್ದಾರೆ. ಅಲ್ಲದೆ ಮಳೆಯಿಂದಾದ ಹಾನಿ ಬಗ್ಗೆ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+