Jharkhand Assembly Polls 2024: ಜಾರ್ಖಂಡ್‌ನಲ್ಲಿ ಕಠಿಣ ಆದ್ರೂ ಬಿಜೆಪಿಗೇ ಗೆಲುವು: ಹಿಮಂತ ಬಿಸ್ವಾ ಭವಿಷ್ಯ
Jharkhand Assembly Elections 2024: ಈಗಾಗಲೇ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇದೀಗ ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳ ನಾಯಕರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳನ್ನು ಮಾಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಅದರಲ್ಲೂ, ರಾಜ್ಯದಲ್ಲಿ ಜೆಜೆಎಂ, ಕಾಂಗ್ರೆಸ್ ಬಿಜೆಪಿಗೆ ಪ್ರತಿಸ್ಪರ್ಧಿಯಾಗಿವೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದೃಷ್ಟಿಯಿಂದ ಜಾರ್ಖಂಡ್ ಕಠಿಣ ರಾಜ್ಯವಾಗಿದೆ. ಆದರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಭರವಸೆಯನ್ನು ಪಕ್ಷ ಹೊಂದಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡುವ ಮೂಲಕ ಗಮನ ಸೆಳೆದರು.

ಮಾಧ್ಯಮದವರೊಂರಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಗಾಗಿ ನಾನು ಕಾರ್ಖಂಡ್‌ನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ. ನವೆಂಬರ್ 13ರಂದು ಅಸ್ಸಾಂನಲ್ಲಿ ನಡೆಯಲಿರುವ ಉಪಚುನಾವಣೆಗಳ ಕಡೆಗೆ ಗಮನಹರಿಸಲು ಸಾಧ್ಯ ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಬಿಜೆಪಿ ದೃಷ್ಟಿಯಿಂದ ಜಾರ್ಖಂಡ್ ಕಠಿಣ ರಾಜ್ಯವಾಗಿದೆ. ಆದರೆ, ಉತ್ತಮ ಫಲಿತಾಂಶ ಸಿಗುವ ಭರವಸೆ ಇದೆ ಎಂದು ಹೇಳಿದರು.
ಇನ್ನೂ ಈಗಾಗಲೇ ಜಾರ್ಖಂಡ್‌ನಲ್ಲಿ ನಡೆಸಿದ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, 1.5 ಲಕ್ಷ ಉದ್ಯೋಗ ಸೃಷ್ಟಿಸುವುಸಾದಾಗಿ ಹಿಮಂತ ಬಿಸ್ವ ಅವರು ಭರವಸೆ ನೀಡಿದ್ದಾರೆ.
ಬಿಜೆಪಿ ವಿರುದ್ಧ ಆಕ್ರೋಶ: ಮತ್ತೊಂದೆಡೆ ಇಲ್ಲಿನ ಮುಖ್ಯಮಂತ್ರಿ ಅವರ ಎದರು ಸ್ಪರ್ಧೆ ಮಾಡಲು ಬಿಜೆಪಿಯಲ್ಲಿ ಅಭ್ಯರ್ಥಿಗಳೇ ಇಲ್ಲ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಮನೋಜ್ ಪಾಂಡೆ ಹೇಳಿದರು. ಸಿಎಂ ಸೊರೇನ್ ಕ್ಷೇತ್ರ ಆಗಿರುವ ಬರ್ಹೈತ್‌ನಲ್ಲಿ ಅಭ್ಯರ್ಥಿಗಳೇ ಇಲ್ಲದ ಹಿನ್ನೆಲೆ ಬಿಜೆಪಿಯು ಜೆಜೆಎಂ ನಾಯಕರಿಗೆ 5,00,00,000 ರೂಪಾಯಿ ಆಮಿಷ ಒಡುತ್ತಿದೆ ಎಂದು ಆರೋಪ ಮಾಡಿದರು.
"ಬಿಜೆಪಿಯವರಿಗೆ ಇಲ್ಲಿಯವರೆಗೂ ಸೂಕ್ತ ಅಭ್ಯರ್ಥಿ ಸಿಕ್ಕಿಲ್ಲ. ಆದ್ದರಿಂದ ಹುಡುಕಾಟ ಮುಂದುವರೆಸಿದ್ದಾರೆ. ಪ್ಯಾಕೇಜ್ ಘೋಷಸಿ ನಮ್ಮ ಪಕ್ಷದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂಬ ಮಾಹಿತಿ ಸಿಕ್ಕಿದೆ. ರಾಜಕೀಯವಾಗಿ ಬಲಿಯಾಗಲು ಯಾರು ಬಯಸುತ್ತಾರೆ? ಎಂದು ಪ್ರಶ್ನಿಸುವ ಮೂಲಕ ಮುಗುಳ್ನಕ್ಕಿದ್ದಾರೆ.
ತಮ್ಮ ಪಕ್ಷಕ್ಕೆ 100-150 ಮತಗಳೂ ಬರುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಆದ್ದರಿಂದ ಬಿಜೆಪಿಯ ಯಾವ ಅಭ್ಯರ್ಥಿಯೂ ಸಿಎಂ ಸೊರೇನ್ ವಿರುದ್ಧ ಸರ್ಧೆಗೊಳಿಯಲು ಮುಂದಾಗಿತ್ತಿಲ್ಲ ಎಂದರು. ಇನ್ನು ಒಂದು ವೇಳೆ ಬಿಜೆಪಿಯ ಅಭ್ಯರ್ಥಿ ಕೇವಲ 250 ಮತಗಳನ್ನು ಪಡೆದರೆ, ಎಷ್ಟು ಅವಮಾನ ಆಗಬಹುದು. ಆದ್ದರಿಂದ ಅವರು ಈ ಕ್ಷೇತ್ರದಿಂದ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆಯೋ ಕಾದುನೋಡಬೇಕಿದೆ ಎಂದಿ ಹೇಳಿದರು.
ಸೊರೇನ್ ಅವರು ಬರ್ಹೈತ್‌ನಲ್ಲಿ ಮತ್ತು ಅವರ ಪತ್ನಿ, ಶಾಸಕಿ ಕಲ್ಪನಾ ಅವರು ಗಾಂಡೇಯ್‌ನಲ್ಲಿ ಅಕ್ಟೋಬರ್ 24ರಂದು ನಾಮಪತ್ರ ಸಲ್ಲಿಸಿದ್ದಾರೆ. ಬರ್ಹೈತ್ ಕ್ಷೇತ್ರಗಳನ್ನೊಳಗೊಂಡ ಸಂಥಲ್ ಪತರಗಣ ಪ್ರದೇಶವು ಜೆಎಂಎಂ ಪಕ್ಷದ ಭದ್ರಕೋಟೆಯಾಗಿದೆ ಎಂದು ಹಳಿದರು.
2019ರ ಚುನಾವಣೆಯಲ್ಲಿ ಬರ್ಹೈತ್ ಹಾಗೂ ದುಮ್ಕಾ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದ ಸೊರೇನ್, ಎರಡೂ ಕಡೆಯೂ ಗೆಲುವು ಸಾಧಿಸಿದ್ದರು. ಬರ್ಹೈತ್‌ನಲ್ಲಿ ಬಿಜೆಪಿಯ ಸಿಮೊನ್ ಮೆಲ್ತೊ ಅವರನ್ನು 25,740 ಮತಗಳಿಂದ ಹಾಗೂ ದುಮ್ಕಾದಲ್ಲಿಯೂ ಅದೇ ಪಕ್ಷದ ಲಾಯಿಸ್ ಮರಂಡಿ ಅವರನ್ನು 13,188 ಮತಗಳಿಂದ ಸೋಲಿಸಿದ್ದರು.
ಇನ್ನು ಜಾರ್ಖಂಡ್ 81 ವಿಧಾನಸಭೆ ಸ್ಥಾನಗಳಿಗೆ ನವೆಂಬರ್ 13 & 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications