ಜಾರ್ಖಂಡ್ ವಿಧಾನಸಭೆ ಚುನಾವಣೆ 2024: ಅಂತಿಮ ಹಂತದ ಮತದಾನ ಆರಂಭ-ಕಣದಲ್ಲಿರುವ ಅಭ್ಯರ್ಥಿಗಳೆಷ್ಟು?
Jharkhand Election 2024: ಜಾರ್ಖಂಡ್‌ನಲ್ಲಿ ಈಗಾಗಲೇ ನವೆಂಬರ್ 13ರಂದು ಮೊದಲ ಹಂತದಲ್ಲಿ 43 ವಿಧಾನಸಭಾ ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಇನ್ನು ಇಂದು (ನವೆಂಬರ್ 20) 38 ಸ್ಥಾನಗಳಿಗೆ ಎರಡನೇ ಹಂತದಲ್ಲಿ ಮತದಾನ ಆರಂಭವಾಗಿದೆ. ಹಾಗಾದರೆ ಒಟ್ಟು ಎಷ್ಟು ಅಭ್ಯರ್ಥಿಗಳು ಇದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜಾರ್ಖಂಡ್‌ನಲ್ಲಿ ಒಟ್ಟು 81 ವಿಧಾನಸಭಾ ಕ್ಷೇತ್ರಗಳಲ್ಲಿ 38 ಸ್ಥಾನಗಳಿಗೆ ಇಂದು ಅಂತಿಮ ಹಂತದ ಮತದಾನ ಆರಂಭವಾಗಿದೆ. ಇದರಲ್ಲಿ ಜೆಎಂಎಂ ಅಭ್ಯರ್ಥಿ ಮತ್ತು ಸಿಎಂ ಹೇಮಂತ್ ಸೊರೆನ್, ಅವರ ಪತ್ನಿ ಕಲ್ಪನಾ ಸೊರೆನ್ ಮತ್ತು ವಿಪಕ್ಷದ ನಾಯಕ ಮತ್ತು ಬಿಜೆಪಿ ಅಭ್ಯರ್ಥಿ ಅಮರ್ ಕುಮಾರ್ ಬೌರಿ ಸೇರಿ 528 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ನಿರ್ಧಾರ ಆಗಲಿದೆ.

ರಾಜ್ಯದಲ್ಲಿ ಆಡಳಿತಾರೂಢ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇನ್ನು ಇಂದು ಎಷ್ಟು ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇಂದು 14,218 ಮತಗಟ್ಟೆಗಳಲ್ಲಿ ಎರಡನೇ ಹಂತದ ಮತದಾನ ಆರಂಭ ಆಗಿದ್ದು, ಸಂಜೆ 5ರವರೆಗೆ ನಡೆಯಲಿದೆ. ಈ ಪೈಕಿ 31 ಮತಗಟ್ಟೆಗಳಲ್ಲಿ ಸಂಜೆ 4 ಗಂಟೆಗೆ ಮತದಾನ ಮುಕ್ತಾಯ ಆಗಲಿದೆ. 60.79 ಲಕ್ಷ ಮಹಿಳೆಯರು ಸೇರಿದಂತೆ ಒಟ್ಟು 1.23 ಕೋಟಿ ಮತದಾರರು ಇಂದು ಮತದಾನ ಮಾಡಲಿದ್ದಾರೆ. 472 ಪುರುಷರು, 55 ಮಹಿಳೆಯರು ಮತ್ತು ಒಬ್ಬರು ತೃತಿಯಲಿಂಗಿ ಕಣದಲ್ಲಿದ್ದಾರೆ.
ಮಹರಾಷ್ಟರದಲ್ಲಿ ಎಷ್ಟು ಸ್ಥಾನಗಳಿಗೆ ಮತದಾನ?: ಇಂದಿನ ಚುನಾವಣೆಯಲ್ಲಿ ಆಡಳಿತಾರೂಢ ಎಂವಿಎ ಭಾಗ ಆಗಿರುವ ಬಿಜೆಪಿ 149 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 81 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 59 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಎಂವಿಎ ಒಳಗೊಂಡಿರುವ ಕಾಂಗ್ರೆಸ್ 101 ಸ್ಥಾನ, ಶಿವಸೇನೆ 95 ಮತ್ತು ಎನ್‌ಸಿಪಿ 86 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಬಹುಜನ ಸಮಾಜ ಪಕ್ಷ ಮತ್ತು ಎಐಎಂಐಎಂ ಸೇರಿದಂತೆ ಸಣ್ಣ ಪಕ್ಷಗಳು ಸಹ ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ. ಬಿಎಸ್‌ಪಿ 237 ಮತ್ತು ಎಐಎಂಐಎಂ 17 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಇನ್ನು ಈ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ನವೆಂಬರ್ 23ರಂದು ಹೊರಬೀಳಲಿದೆ.











Click it and Unblock the Notifications