• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೆಬ್ರುವರಿ 15ರ ನಂತರ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆ

|

ನವದೆಹಲಿ, ಫೆಬ್ರುವರಿ 10: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೆರಿ ವಿಧಾನ ಸಭೆ ಚುನಾವಣೆಗೆ ಫೆಬ್ರುವರಿ 15ರ ನಂತರ ದಿನಾಂಕ ಘೋಷಣೆ ಆಗಬಹುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಚುನಾವಣಾ ಆಯೋಗವು ದಕ್ಷಿಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರವಾಸ ಆರಂಭಿಸಿದ್ದು, ಚುನಾವಣಾ ಸಿದ್ಧತೆಯ ಕುರಿತು ಪರಿಶೀಲನೆ ನಡೆಸುತ್ತಿದೆ.

ಫೆಬ್ರುವರಿ 15ರಂದು ಪ್ರವಾಸ ಕೊನೆಯಾಗಲಿದ್ದು, ನಾಲ್ಕು ರಾಜ್ಯಗಳಿಗೆ ಹಾಗು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ನಂತರ ಚುನಾವಣೆ ದಿನಾಂಕ ಘೋಷಣೆ ಮಾಡಲಾಗುವುದು ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳ ಚುನಾವಣೆ; ಕೇಂದ್ರ ಪಡೆ ನಿಯೋಜನೆಗೆ ಬಿಜೆಪಿ ಒತ್ತಾಯ

ಫೆಬ್ರುವರಿ ತಿಂಗಳ ಕೊನೆಯಲ್ಲಿ ಹಾಗೂ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ದಿನಾಂಕ ಘೋಷಣೆಯಾಗಬಹುದು ಎಂದು ಚುನಾವಣಾ ಆಯೋಗದ ಚುನಾವಣಾ ಸಮಿತಿ ಮೂಲಗಳು ತಿಳಿಸಿವೆ. ತಮಿಳುನಾಡು, ಕೇರಳ ಹಾಗೂ ಪುದುಚೆರಿಯಲ್ಲಿ ಏಕ ಹಂತದ ಚುನಾವಣೆ ನಡೆಯುವುದಾಗಿ ಮಾಹಿತಿ ತಿಳಿದುಬಂದಿದೆ. ಪಶ್ಚಿಮ ಬಂಗಾಳದಲ್ಲಿ ಆರರಿಂದ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದದ್ದು, ಅಸ್ಸಾಂನಲ್ಲಿ ಎರಡರಿಂದ ಮೂರು ಹಂತಗಳ ಚುನಾವಣೆ ನಡೆಯಲಿರುವುದಾಗಿ ತಿಳಿದುಬಂದಿದೆ.

ಮೇ 1ರ ಒಳಗೆ ವಿಧಾನಸಭೆ ಚುನಾವಣೆ ಮುಗಿಸಲು ಚುನಾವಣಾ ಆಯೋಗ ಗುರಿಯಿಟ್ಟುಕೊಂಡಿದ್ದು, ಹತ್ತು ಹಾಗೂ ಹನ್ನೆರಡನೇ ತರಗತಿಯ ಸಿಬಿಎಸ್ ಇ ಪರೀಕ್ಷೆಗೆ ಮುನ್ನ ಚುನಾವಣೆ ಮುಗಿಸುವ ಯೋಜನೆ ಇದೆ ಎನ್ನಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ, ಚುನಾವಣಾ ಆಯುಕ್ತರಾದ ಸುಶಿಲ್ ಚಂದ್ರ ಹಾಗೂ ರಾಜೀವ್ ಕುಮಾರ್, ಹಿರಿಯ ಅಧಿಕಾರಿಗಳು ಫೆಬ್ರುವರಿ 10 ರಿಂದ 15ರವರೆಗೆ ತಮಿಳುನಾಡು, ಕೇರಳ ಹಾಗೂ ಪುದುಚೆರಿಗೆ ಭೇಟಿ ನಿಡಲಿದ್ದಾರೆ.

ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಈಗಾಗಲೇ ಚುನಾವಣಾ ಆಯೋಗವು ಸಿದ್ಧತೆ ನಡೆಸಿದೆ. ಇದೇ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೆರಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಚುನಾವಣಾ ಕಾರ್ಯ ಬಿರುಸು ಪಡೆಯಲಿದೆ.

English summary
The poll schedule for the four states and one union territory is likely to be announced after february 15,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X