ಮಗಳ ಅತ್ಯಾಚಾರದ ಆರೋಪಿಯಿಂದ ಕೋರ್ಟ್‌ನಲ್ಲೇ ಪತ್ನಿ ಕೊಲೆ

ಗುವಾಹಟಿ, ಜೂನ್ 16: ಮಗಳ ಮೇಲೆ ಅತ್ಯಾಚಾರ ಎಸೆದ ಆರೋಪ ಎದುರಿಸುತ್ತಿರುವ ತಂದೆ, ತನ್ನ ಪತ್ನಿಯನ್ನು ನ್ಯಾಯಾಲಯದ ಆವರಣದಲ್ಲಿಯೇ ಕತ್ತು ಸೀಳಿ ಕೊಲೆ ಮಾಡಿದ ಭೀಕರ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.

ದಿಬ್ರುಗಡ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣದೊಳಗೆ ಶುಕ್ರವಾರ ಈ ಘಟನೆ ನಡೆದಿದ್ದು, ಆರೋಪಿ ಪೂರ್ಣ ನಹಾರ್ ಡೆಕಾನನ್ನು ಕೂಡಲೇ ಸೆರೆಹಿಡಿದ ಸಾರ್ವಜನಿಕರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ತನ್ನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಆರೋಪದಡಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಪೂರ್ಣ ನಹಾರ್, ನ್ಯಾಯಾಲಯದ ಕಾರಿಡಾರ್‌ನಲ್ಲಿಯೇ ಪತ್ನಿ ರೀಟಾ ನಹಾರ್ ಡೆಕಾ ಅವರ ಕತ್ತು ಸೀಳಿದ್ದಾನೆ ಎಂದು ದಿಬ್ರುಗಡ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಸೈಕಿಯಾ ತಿಳಿಸಿದ್ದಾರೆ.

assam: rape accused father kills wife in court

ಆರೋಪಿಯು ಮಗಳನ್ನು ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಒಂಬತ್ತು ತಿಂಗಳು ಜೈಲಿನಲ್ಲಿದ್ದ. ಕೆಲವು ದಿನಗಳ ಹಿಂದಷ್ಟೇ ಜಾಮೀನು ಪಡೆದು ಹೊರಗೆ ಬಂದಿದ್ದ.

ಶುಕ್ರವಾರ ಪ್ರಕರಣದ ವಿಚಾರಣೆ ಇತ್ತು. ಮಗಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ದೂರುದಾರರಾಗಿದ್ದ ಆತನ ಪತ್ನಿ ಕೂಡ ನ್ಯಾಯಾಲಯಕ್ಕೆ ಬಂದಿದ್ದರು.

ಕಾರಿಡಾರ್‌ನಲ್ಲಿ ಆತ ಇದ್ದಕ್ಕಿದ್ದಂತೆ ತನ್ನ ಜೇಬಿನಿಂದ ಚಾಕು ತೆರೆದು ಆಕೆಯ ಕತ್ತನ್ನು ಸೀಳಿದ. ರೀಟಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದರು ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ಮಾಡುವ ಮುನ್ನ ಆತ ಪತ್ನಿಯೊಂದಿಗೆ ಮಾತನಾಡುತ್ತಿದ್ದ. ಈ ಸಂದರ್ಭದಲ್ಲಿ ಆತನ ಅತ್ತೆ-ಮಾವ ಕೂಡ ನ್ಯಾಯಾಲಯದಲ್ಲಿದ್ದರು ಎಂದು ವರದಿಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+