ಅಸಾರಾಂ ಮೇಲೆ ಸರಣಿ ದೂರು, ಜೈಲೇ ಗಟ್ಟಿ

ನವದೆಹಲಿ, ನ.7; ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು 16 ವರ್ಷದ ಬಾಲಕಿ ಮೇಲೆ 2 ತಿಂಗಳ ಕಾಲ ಸತತ ಅತ್ಯಾಚಾರ ಮಾಡಿದ್ದಾನೆ. ಅಸಾರಾಂ ಅವರ ದುಷ್ಕೃತ್ಯಗಳಿಗೆ ಅವರ ಪುತ್ರ ನಾರಾಯಣ ಸಾಯಿ ಸೇರಿದಂತೆ ಅನೇಕ ಮಂದಿ ಸಹಕರಿಸಿದ್ದಾರೆ ಎಂದು ಜೋಧಪುರ ಪೊಲೀಸರು ಕೋರ್ಟೀಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಬಾಪು ಮೇಲೆ ಸರಣಿ ದೂರುಗಳು ಕೇಳಿ ಬಂದ ಬೆನ್ನಲ್ಲೇ ಸರಣಿ ಚಾರ್ಚ್ ಶೀಟ್ ಹಾಕುವ ಸಾಧ್ಯತೆ ಹೆಚ್ಚಾಗಿದೆ ಹೀಗಾಗಿ ಅಸಾರಾಂ ಅವರಿಗೆ ಇನ್ನು ಮೇಲೆ ಜೈಲೇ ಗತಿ.

ಸುಮಾರು 1,011 ಪುಟಗಳಷ್ಟು ಆರೋಪಪಟ್ಟಿಯನ್ನು ಜೋಧಪುರದ ಕೋರ್ಟಿಗೆ ಸಲ್ಲಿಸಲಾಗಿದೆ. 121 ದಾಖಲೆ ಪತ್ರ, ಹೇಳಿಕೆಗಳು ಹಾಗೂ 58 ಸಾಕ್ಷಿಗಳ ಹೆಸರನ್ನು ಇದರಲ್ಲಿ ನಮೂದಿಸಲಾಗಿದೆ. ಅಸಾರಾಂ ಹಾಗೂ ಇತರೆ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 342,376(ಎಫ್), 376 (ಡಿ), 354(ಎ), 506 ಹಾಗೂ 109 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಇದಲ್ಲದೆ ಅಪ್ರಾಪ್ತರ ರಕ್ಷಣಾ ಕಾಯ್ದೆ ಹಾಗೂ Protection of Children from Sexual Offences (POCSO) ಕಾಯ್ದೆ ಅಡಿಯಲ್ಲೂ ಕೇಸ್ ಬುಕ್ಕಾಗಿದೆ. ಅಸರಾಂ ಹಾಗೂ ಇತರೆ ಅರೋಪಿಗಳ ಮೇಲಿನ ಆರೋಪಗಳನ್ನು ಗಮನಿಸಿದರೆ ಕನಿಷ್ಠ 10 ವರ್ಷದಿಂದ ಗರಿಷ್ಠ ಜೀವಾವಧಿ ಶಿಕ್ಷೆ ಸಿಗುವ ಸಾಧ್ಯತೆಯಿದೆ ಎಂದು ವಕೀಲ ಮನೀಶ್ ವ್ಯಾಸ್ ಹೇಳಿದ್ದಾರೆ.

Asaram case: Chargesheet or time for more trouble?

ಸುಮಾರು ಎರಡು ತಿಂಗಳುಗಳ ಕಾಲ ತೆಗೆದುಕೊಂಡು ತಡವಾಗಿ ಚಾರ್ಚ್ ಶೀಟ್ ಸಲ್ಲಿಸಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಪೊಲೀಸರು, ಅಸಾರಾಂ ಬಾಪು ಅವರ ಮೇಲಿನ ಸರಣಿ ಆರೋಪಗಳಿಗೂ 16 ವರ್ಷದ ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೂ ಒಂದಕ್ಕೊಂದು ಸಂಬಂಧವಿತ್ತು.

ಅಸಾರಾಂ ಜೊತೆಗೆ ಶಿಲ್ಪಿ, ಶಿವ, ಪ್ರಕಾಶ್ ಮತ್ತು ಶರದ್ ಚಂದ್ರ ಎಂಬುವರ ಮೇಲೂ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಹೀಗಾಗಿ ಎಲ್ಲವನ್ನು ತನಿಖೆ ನಡೆಸಿ ನಂತರ ಆರೋಪ ಪಟ್ಟಿ ತಯಾರಿಸಿ ಕೋರ್ಟಿಗೆ ಸಲ್ಲಿಸಲು ಕಾಲಾವಕಾಶ ಹಿಡಿದಿದೆ.

ಜಿಲ್ಲಾ ಕೋರ್ಟಿನ ನ್ಯಾಯಾಧೀಶ ಮನೋಜ್ ಕುಮಾರ್ ಅವರು ಇವರೆಲ್ಲರ ನ್ಯಾಯಾಂಗ ಬಂಧನದ ಅವಧಿಯನ್ನು ನ.16ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಜೋಧ್ ಪುರದಲ್ಲಿರುವ ಅಸಾರಾಮ್ ನ ಆಶ್ರಮದ ನಿವಾಸಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಸೆ.1ರಂದು ಪೊಲೀಸರು ಅಸಾರಾಮ್ ಬಾಪುವನ್ನು ಬಂಧಿಸಿದ್ದರು. ಬಾಪು ಕಡೆ ಭಕ್ತರು ಸಂತಸ್ತ ಬಾಲಕಿಯ ಕುಟುಂಬಕ್ಕೆ ಬೆದರಿಕೆ ಕರೆಗಳನ್ನು ಮಾಡಿದ್ದರು. ಈ ಬಗ್ಗೆ ಬಾಲಕಿಯ ಅಪ್ಪ ಪೊಲೀಸರಿಗೆ ದೂರು ನೀಡಿದ್ದರು.

ನಂತರ ಸೂರತ್ ನ ಸಹೋದರಿಯರಿಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿತ್ತು. ದೇವಮಾನವನ ಆಪ್ತ ಸಹಾಯಕ ಶಿವ ಮತ್ತು ಶಿಲ್ಪಿ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು. ದೇವಮಾನವನ ಅತ್ಯಾಚಾರ ಪುರಾಣದಲ್ಲಿ ಅವನ ಮಗ, ಪತ್ನಿ ಹಾಗೂ ಪುತ್ರಿಯರೂ ಸೇರಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+