ಜಮ್ಮುವಿನ 3 ಶಾಲೆ ಮೇಲೆ ಪಾಕ್ ಸೇನೆ ಶೆಲ್ ದಾಳಿ; 250 ಮಕ್ಕಳ ರಕ್ಷಣೆ
ಗಡಿ ನಿಯಂತ್ರಣ ರೇಖೆಯ ಬಳಿಯಿರುವ ಭಾರತೀಯ ಶಾಲೆಯ ಮೇಲೆ ಪಾಕಿಸ್ತಾನ ಸೇನೆಯಿಂದ ದಾಳಿ. ಶಾಲೆಯ ಮೇಲೆ ಶೆಲ್ ದಾಳಿಯಿಂದಾಗಿ ವಿದ್ಯಾರ್ಥಿಗಳು, ಸಿಬ್ಬಂದಿ ಪಾರು. ಶಾಲೆಯಲ್ಲಿನ ಎಲ್ಲಾ 217 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ರಕ್ಷಿಸಿದ ಜಮ್ಮು ಕಾ
ಜಮ್ಮು, ಜುಲೈ 19: ಪಾಕಿಸ್ತಾನದ ಸೇನೆಯ ಗಡಿಯಾಚೆಯಿಂದ ನಡೆಸಿದ ಮಾರಕ ಶೆಲ್ ದಾಳಿಗೆ ಸಿಲುಕಿದ್ದ ನೌಶೇರಾ ಪ್ರಾಂತ್ಯದಲ್ಲಿನ ಸುಮಾರು 3 ಶಾಲೆಗಳಲ್ಲಿದ್ದ ಅಂದಾಜು 250 ವಿದ್ಯಾರ್ಥಿಗಳು ಹಾಗೂ 17 ಶಿಕ್ಷಕರನ್ನು ಜಮ್ಮು-ಕಾಶ್ಮೀರ ಪೊಲೀಸರು ರಕ್ಷಿಸುವಲ್ಲಿ ಸಫಲವಾಗಿದ್ದಾರೆ.
ಇಂದು ಬೆಳಗ್ಗೆಯೇ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನದ ಸೈನ್ಯವು ಶೆಲ್ ದಾಳಿ ನಡೆಸಿತು. ಒಂದರ ಹಿಂದೊಂದರಂತೆ ತೂರಿಬಂದ ಶೆಲ್ ಗಳು ಶಾಲಾ ಕಟ್ಟಡಗಳಿಗೆ ಹಾಗೂ ಸುತ್ತಲಿನ ಗ್ರಾಮಗಳಿಗೆ ಬಂದು ಅಪ್ಪಳಿಸಲು ಆರಂಭಿಸಿದವು.

ತಕ್ಷಣವೇ ಜಾಗೃತರಾದ ಶಿಕ್ಷಕರು ಹಾಗೂ ಮಕ್ಕಳು ಹತ್ತಿರದ ಪೊಲೀಸ್ ಠಾಣೆಗೆ ಫೋನ್ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ. ಆನಂತರ, ಪೊಲೀಸರು, ಜಿಲ್ಲಾಡಳಿತದ ಸಿಬ್ಬಂದಿ ಸಹಾಯದಿಂದ ಐದು ಗುಂಡು ನಿರೋಧಕ ವಾಹನಗಳಲ್ಲಿ ತೆರಳಿ ಶಾಲೆಗಳಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಕರೆತಂದರು ಎಂದು ರಜೌರಿ ಜಿಲ್ಲೆಯ ಕಮೀಷನರ್ ಡಾ. ಶಹೀದ್ ಇಕ್ಬಾಲ್ ಚೌಧರಿ ತಿಳಿಸಿದ್ದಾರೆ.

ಏತನ್ಮಧ್ಯೆ, ಪಾಕಿಸ್ತಾನದ ಈ ಕುಕೃತ್ಯದಿಂದಾಗಿ ಇಬ್ಬರು ಸೇನಾ ಯೋಧರು ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಆದರೆ, ಅದರ ಬಗ್ಗೆ ಸೇನೆ ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲ.
ಇನ್ನು, ಶೆಲ್ ದಾಳಿಯಿಂದಾಗಿ ಸುತ್ತಲಿನ ಗ್ರಾಮಗಳಲ್ಲಿನ ಮನೆಗಳಿಗೆ ಹಾನಿಯಾಗಿದೆ.












Click it and Unblock the Notifications