ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ, ಇಬ್ಬರ ದುರಂತ ಅಂತ್ಯ

By Mahesh
|
Google Oneindia Kannada News

ಶ್ರೀನಗರ, ಫೆ.11: ಭಾರತೀಯ ಸೇನೆಗೆ ಸೇರಿದ ಹೆಲಿಕಾಪ್ಟರ್ ಬುಧವಾರ ರಾತ್ರಿ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ ನಲ್ಲಿದ್ದ ಲೆಫ್ಟಿನೆಂಟ್ ಕರ್ನಲ್ ಹಾಗೂ ಮೇಜರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ.

ಭಾರತೀಯ ಸೇನೆಗೆ ಸೇರಿದ ಧ್ರುವ್ ಹೆಲಿಕಾಪ್ಟರ್ ಕಾಶ್ಮೀರದ ಬಂಡಿಪೊರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಅಪಘಾತಕ್ಕೀಡಾಗಿ ಪತನಗೊಂಡಿದೆ.

ಸೇನೆಯ ವಿಮಾನನೆಲೆಯಿಂದ ಹೊರಟ ವಿಮಾನ 30 ನಿಮಿಷಗಳ ಹಾರಾಟದ ನಂತರ ಪತನಗೊಂಡಿದ್ದು, ಇಬ್ಬರು ಅಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ರಾಜೇಶ್ ಗುಲಾಟಿ ಹಾಗೂ ಮೇಜರ್ ತಾಹೀರ್ ಖಾನ್ ಎಂದು ಗುರುತಿಸಲಾಗಿದೆ. ಎಎಲ್ ಎಚ್ ಧ್ರುವ್ ಹೆಲಿಕಾಪ್ಟರ್ ನಲ್ಲಿ ತೆರಳಿದ್ದ ಇಬ್ಬರ ದೇಹ ಗುರುತಿಸಲಾರದಷ್ಟು ಸುಟ್ಟು ಕರಕಲಾಗಿದೆ.

Army helicopter crashes in Kashmir, 2 pilots killed

ಲೆಫ್ಟಿನೆಂಟ್ ಕರ್ನಲ್ ರಾಜೇಶ್ ಅವರು ಡೆಡ್ರಾಡೂನ್ ನ ನಿವಾಸಿಯಾಗಿದ್ದು, ಖಾನ್ ಅವರು ಹೈದರಾಬಾದ್ ಮೂಲದವರಾಗಿದ್ದಾರೆ. ಗುಲಾಟಿ ಅವರಿಗೆ ಧ್ರುವ್ ಹೆಲಿಕಾಪ್ಟರ್ ಚಾಲನೆ ಮಾಡುವಲ್ಲಿ ಐದು ವರ್ಷದ ಅನುಭವವಿತ್ತು. ಅದರೆ, ಈ ದುರಂತಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ನಿರ್ಮಿತ ಎರಡು ಇಂಜಿನ್ ವುಳ್ಳ Advanced Light Helicopter ಧ್ರುವ್ ಇತ್ತೀಚೆಗೆ ಈಕ್ವಾಡರ್ ನಲ್ಲಿ ಅಪಘಾತಕ್ಕೀಡಾಗಿತ್ತು. ಉಳಿದಂತೆ ಜುಲೈನಲ್ಲಿ ಭಾರತೀಯ ವಾಯುಸೇನೆಯ ಏಳು ಜನ ಯೋಧರು ಲಕ್ನೋದಲ್ಲಿ ಅಪಘಾತಕ್ಕೀಡಾಗಿದ್ದರು. ಹವಾಮಾನ ವೈಪರೀತ್ಯ, ತಾಂತ್ರಿಕ ತೊಂದರೆ ಹಾಗೂ ಪೈಲಟ್ ಗಳ ದೋಷ ಹೀಗೆ ನಾನಾ ಕಾರಣಗಳು ಹೇಳಬಹುದಾದರೂ ತನಿಖೆ ನಂತರವಷ್ಟೇ ಸತ್ಯ ತಿಳಿದು ಬರಲಿದೆ.(ಪಿಟಿಐ)

English summary
An army helicopter on Wednesday crashed in Bandipora district of central Kashmir, killing a Lieutenant Colonel and a Major who were piloting the chopper, an Army spokesperson said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X