ಕಳ್ಳತನ ತಪ್ಪಿಸಲು ಗೂಡ್ಸ್‌ ರೈಲುಗಳಿಗೆ ಇನ್ನು ಸಶಸ್ತ್ರ ಪಡೆ ಕಾವಲು

ನವದೆಹಲಿ, ಜನವರಿ 31 : ರೈಲ್ವೆ ಸಚಿವಾಲಯ ಗೂಡ್ಸ್ ರೈಲುಗಳ ಸುರಕ್ಷತೆಗಾಗಿ ಸಶಸ್ತ್ರ ಕಾವಲು ಆಳವಡಿಕೆ ಮಾಡಲು ಒಪ್ಪಿಗೆ ನೀಡಿದೆ. ರೈಲ್ವೆ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾವಲು ನೀಡಲು ಅನುಮತಿ ನೀಡಲಾಗಿದೆ.

ಗೂಡ್ಸ್‌ ರೈಲುಗಳಲ್ಲಿ ಸಾಗಣೆಯಾಗುವ ವಸ್ತುಗಳ ಸುರಕ್ಷತೆಗಾಗಿ ಈ ಕ್ರಮವನ್ನು ಇಲಾಖೆ ಕೈಗೊಂಡಿದೆ. ಪೂರ್ವ ರೈಲ್ವೆ ವಲಯದಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ. ಬಳಿಕ ಉಳಿದ ರೈಲ್ವೆ ವಲಯಕ್ಕೆ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ.

ರೈಲುಗಳಿಗೆ ಭದ್ರತೆ ಕೊಡಲು ಇಲಾಖೆ ಯಾರನ್ನು ನೇಮಕಾತಿ ಮಾಡಿಕೊಳ್ಳುವುದಿಲ್ಲ. ಖಾಸಗಿ ಭದ್ರತಾ ಸಿಬ್ಬಂದಿಗಳ ಮೂಲಕ ಭದ್ರತೆ ಒದಗಿಸಲು ತೀರ್ಮಾನಿಸಲಾಗಿದೆ. ಪ್ರಾಯೋಗಿಕವಾಗಿ ಆರು ತಿಂಗಳ ಕಾಲ ಭದ್ರತೆ ಒದಗಿಸಲಾಗುತ್ತದೆ.

Armed Force To Escort Goods Train

ಸರಕುಗಳನ್ನು ಸಾಗಣೆ ಮಾಡುವ ರೈಲಿನಲ್ಲಿ ಬ್ರೇಕ್ ವ್ಯಾನ್‌ನಲ್ಲಿ ಸಶಸ್ತ್ರ ಕಾವಲುಗಾರರು ಇರುವುದಕ್ಕೆ ಅವಕಾಶ ನೀಡಿದೆ. ಗೂಡ್ಸ್‌ ರೈಲಿನಲ್ಲಿ ಸರಕುಗಳ ಕಳವು ತಡೆಯುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಭದ್ರತೆ ಒದಗಿಸುವ ಕುರಿತು ಜನವರಿ 29ರಂದು ಆದೇಶ ಹೊರಡಿಸಲಾಗಿದೆ. ಪ್ರಾಯೋಗಿಕವಾದ ಆರು ತಿಂಗಳ ಅವಧಿ ಮುಗಿದ ಬಳಿಕ ಇದನ್ನು ಮುಂದುವರೆಸುವ ಬಗ್ಗೆ ಪರಾಮರ್ಶೆ ನಡೆಸಿ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+