ಅಮೆರಿಕ ಪ್ರವಾಸದ ಜತೆ ಮೋದಿ ಪೋರ್ಚುಗಲ್, ಹಾಲೆಂಡಿಗೂ ಭೇಟಿ
ಈ ಮಾಸಾಂತ್ಯಕ್ಕೆ ಅಮೆರಿಕಕ್ಕೆ ತೆರಳಲಿರುವ ಪ್ರಧಾನಿ ಮೋದಿ ಅದೇ ಪ್ರವಾಸದ ವೇಳೆ ಪೋರ್ಚುಗಲ್ ಹಾಗೂ ಹಾಲೆಂಡ್ ಗೂ ಭೇಟಿ ನೀಡಲಿದ್ದಾರೆ. ಕೇಂದ್ರ ವಿದೇಶಾಂಗ ಇಲಾಖೆ ಈ ವಿಚಾರ ತಿಳಿಸಿದೆ.
ನವದೆಹಲಿ, ಜೂನ್ 16: ಇದೇ ಮಾಸಾಂತ್ಯಕ್ಕೆ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ, ಅದೇ ಸಂದರ್ಭದಲ್ಲಿ ಪೋರ್ಚುಗಲ್ ಹಾಗೂ ಹಾಲೆಂಡ್ ಗೂ ಭೇಟಿ ನೀಡಲಿದ್ದಾರೆಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ.
ಇದೇ ತಿಂಗಳ 25ರಂದು ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ತೆರಳಲಿದ್ದಾರೆ. ಅಮೆರಿಕಕ್ಕೆ ಹೋಗುವ ಮಾರ್ಗದಲ್ಲಿ, ಅಂದರೆ, ಜೂನ್ 24ರಂದು ಪೋರ್ಚುಗಲ್ ಗೆ ತೆರಳಿರುವ ಮೋದಿ, ಅಮೆರಿಕ ಭೇಟಿ ನಂತರ ಜೂನ್ 27ರಂದು ಹಾಲೆಂಡ್ ಗೆ ತೆರಳಲಿದ್ದಾರೆ. ಇದೊಂದು ಅಧಿಕೃತ ಭೇಟಿಯೆಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಈ ಭೇಟಿಯ ವೇಳೆ, ಭಾರತ-ಪೋರ್ಚುಗಲ್, ಭಾರತ- ಅಮೆರಿಕ, ಭಾರತ- ಹಾಲೆಂಡ್ ದೇಶಗಳ ನಡುವೆ ವಾಣಿಜ್ಯ ವ್ಯವಹಾರ, ವೈಜ್ಞಾನಿಕ ಕ್ಷೇತ್ರದಲ್ಲಿನ ಸಹಕಾರ, ಸಾಂಸ್ಕೃತಿಕ ವಿನಿಮಯಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.












Click it and Unblock the Notifications