ಪ್ರತಿಕಾಯಗಳು ಕೊವಿಡ್ 19 ರೋಗದಿಂದ ರಕ್ಷಣೆ ನೀಡುವುದು ಖಾತ್ರಿ ಇಲ್ಲ
ನವದೆಹಲಿ, ಸೆಪ್ಟೆಂಬರ್ 07: ದೇಹದಲ್ಲಿ ಪ್ರತಿಕಾಯಗಳು ವೃದ್ಧಿಯಾಗಿವೆ ಅಂದ ಮಾತ್ರಕ್ಕೆ ಅದು ಕೊರೊನಾವೈರಸ್‌ನಿಂದ ರಕ್ಷಣೆ ನೀಡುತ್ತದೆ ಎಂದು ಅರ್ಥವಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Recommended Video
ಯಾವ ರೀತಿಯ ಪ್ರತಿಕಾಯಗಳು ದೇಹದಲ್ಲಿ ಎಷ್ಟು ದಿನ ಉಳಿಯುತ್ತವೆ ಎಂಬುದು ಕೂಡ ಮುಖ್ಯವಾಗಿರುತ್ತದೆ.
ಭಾರತದಲ್ಲಿ ಸೋಮವಾರ ಒಟ್ಟು 90,062ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 42 ಲಕ್ಷ ದಾಟಿದೆ. ಈ ಸಂದರ್ಭದಲ್ಲಿ ಈ ಪ್ರತಿಕಾಯಗಳು ರೋಗದ ವಿರುದ್ಧ ಯಾವ ರೀತಿ ಹೋರಾಡುತ್ತಿವೆ ಎಂಬುದರ ಬಗ್ಗೆ ಗಮನ ಹರಿಸಲಾಗುತ್ತಿದೆ.

ತೀರ್ಪುಗಾರರು ಹಲವು ಅಧ್ಯಯನಗಳನ್ನು ಮಾಡಿದ್ದಾರೆ ಆದರೆ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಈ ಪ್ರತಿಕಾಯಗಳು ವ್ಯಕ್ತಿ ಈ ಮೊದಲೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಎಂಬುದನ್ನು ತಿಳಿಸುತ್ತದೆ.
ತಟಸ್ಥಗೊಳಿಸುವ ಪ್ರತಿಕಾಯಗಳು ಹಾಗೂ ಸರಳ ಪ್ರತಿಕಾಯಗಳಿರುತ್ತವೆ. ತಟಸ್ಥ ಪ್ರತಿಕಾಯಗಳು ಕೊರೊನಾ ಸೋಂಕು ಶ್ವಾಸಕೋಶಕ್ಕೆ ಹೋಗುವುದನ್ನು ತಡೆಯುತ್ತದೆ. ಹಾಗೆಯೇ ದೇಹದೆ ಇತರೆ ಭಾಗಗಳಿಗೂ ವ್ಯಾಪಿಸದಂತೆ ನೋಡಿಕೊಳ್ಳುತ್ತದೆ.
ಸರಳ ಪ್ರತಿಕಾಯಗಳು ಸೋಂಕು ಇರುವಿಕೆಯನ್ನು ಸೂಚಿಸುತ್ತವೆ. ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ಇದರಿಂದ ಸಾಧ್ಯವಾಗುವುದಿಲ್ಲ.
ಹೀಗಾಗಿ ಒಂದೊಮ್ಮೆ ದೇಹದಲ್ಲಿರುವುದು ಸರಳ ಪ್ರತಿಕಾಯಗಳಾಗಿದ್ದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅದೇ ತಟಸ್ಥ ಪ್ರತಿಕಾಯಗಳಿದ್ದರೆ ಸಾಕಷ್ಟು ದಿನಗಳ ಕಾಲ ದೇಹದಲ್ಲಿಯೇ ಇರುತ್ತದೆ. ಕೊರೊನಾ ಸೋಂಕು ದೇಹದ ವಿವಿಧ ಭಾಗಕ್ಕೆ ಹರಡುವುದನ್ನು ತಡೆಯುತ್ತದೆ.












Click it and Unblock the Notifications