Get Updates
Get notified of breaking news, exclusive insights, and must-see stories!

Bird flu: ಹಕ್ಕಿ ಜ್ವರದಿಂದ ಮಗು ಸಾವು, ಮೊದಲ ಕೇಸ್‌ ವರದಿಯಾಗಿದ್ದು ಎಲ್ಲಿ?

ಕಳೆದ ಕೆಲವು ತಿಂಗಳ ಹಿಂದೆ ಜನರಲ್ಲಿ ಆತಂಕ ಮೂಡಿಸಿದ್ದ ಹಕ್ಕಿ ಜ್ವರದ ವಿಚಾರವಾಗಿ ಆಘಾತಕಾರಿ ವಿಚಾರ ಹೊರಬಿದ್ದಿದೆ. ಹಕ್ಕಿ ಜ್ವರ ಎಂದು ಕರೆಯಲ್ಪಡುವ ಏವಿಯನ್ ಇನ್‌ಫ್ಲುಯೆನ್ಸ್‌ನಿಂದ ಮಾನವನ ಮೊದಲ ಸಾವು ಪ್ರಕರಣ ವರದಿಯಾಗಿದೆ. ಇಲ್ಲಿವರೆಗೆ ಹಕ್ಕಿ ಜ್ವರವು ಕೋಳಿಗಳಿಗೆ ಹರಡಿ ಅವುಗಳ ಮಾರಣಹೋಮ ನಡೆದಿತ್ತು. ಇದೀಗ ಎರಡು ವರ್ಷದ ಹೆಣ್ಣುಮಗು ಈ ಹಕ್ಕಿ ಜ್ವರದಿಂದ ಸಾವನ್ನಪ್ಪಿದ್ದು, ಇದೇ ಮೊದಲ ಪ್ರಕರಣ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಪ್ರಕರಣ ವರದಿಯಾಗಿರುವುದು ಎಲ್ಲಿ ಎಂಬ ವಿವರ ಇಲ್ಲಿದೆ..

ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಹಕ್ಕಿ ಜ್ವರವು ಹೆಚ್ಚಾಗಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಲಕ್ಷಾಂತಕ ಕೋಳಿಗಳು ಸಾವನ್ನಪ್ಪಿದ್ದಲ್ಲದೆ, ಮಾಂಸ ಸೇವನೆ ಮಾಡದಂತೆಯೂ ಎಚ್ಚರಿಕೆ ಕೊಡಲಾಗಿತ್ತು. ಆದರೆ. ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆಯ ಎರಡು ವರ್ಷದ ಬಾಲಕಿ ಈ H5N1 ವೈರಸ್‌ಗೆ ಬಲಿಯಾಗಿದ್ದಾಳೆ ಎಂದು ವರದಿಗಳು ಹೇಳಿವೆ. ಎರಡು ವರ್ಷದ ಮಗುವೊಂದು ಈ ವೈರಸ್‌ಗೆ ಬಲಿಯಾಗಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಾವನ್ನು ದೃಢಪಡಿಸಿದೆ. ಅಲ್ಲದೆ ಸರ್ಕಾರಕ್ಕೆ ಎಚ್ಚರಿಕೆಯೂ ನೀಡಿದೆ.

Andhra Pradesh Two Year Old Girl Dies Due To Bird Flu In Palnadu

ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಆ ಮಗುವನ್ನು ಮಾರ್ಚ್ 4ರಂದು ಮಂಗಳಗಿರಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿರುವಾಗ ಮಾರ್ಚ್ 16ರಂದು ಮಗು ಸಾವನ್ನಪ್ಪಿತು. ನಂತರ ಮಾದರಿಗಳನ್ನು ಪರೀಕ್ಷೆಗಾಗಿ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಯಿತು. ಏಪ್ರಿಲ್ 1ರಂದು ಇದರ ವರದಿ ಬಂದಿದ್ದು, ಮಗುವಿನ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ದೃಢಪಟ್ಟಿದೆ.

ಹಕ್ಕಿ ಜ್ವರದ ಅನುಮಾನದ ನಂತರ ಏಮ್ಸ್‌ನಲ್ಲಿ ಆ ಮಗುವಿನ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಇದು H5N1 ಸೋಂಕನ್ನು ದೃಢಪಡಿಸಿತು. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ನಂತರದ ಪರೀಕ್ಷೆ ನಡೆಸಿದಾಗ ಹಕ್ಕಿಜ್ವರ ಇರುವುದು ಮತ್ತಷ್ಟು ದೃಢಪಟ್ಟಿದೆ.

Andhra Pradesh Two Year Old Girl Dies Due To Bird Flu In Palnadu

ಮನೆಯಲ್ಲಿ ಆಹಾರ ತಯಾರಿಸುವ ವೇಳೆ ಆ ಮಗು ಹಸಿ ಕೋಳಿ ಮಾಂಸದ ತುಂಡನ್ನು ಸೇವಿಸಿತ್ತು ಎಂದು ಕುಟುಂಬದವರು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕವೇ ಮಗುವಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿದೆ. ಈ ಹಿನ್ನೆಲೆ ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ಅಧಿಕಾರಿಗಳು ಫೀಲ್ಡಿಗಿಳಿದಿದ್ದಾರೆ.

ಮಗು ಹಸಿ ಮಾಂಸ ಸೇವಿಸಿದೆ ಎಂದು ವರದಿಯಾಗಿದೆ. ಆದರೆ, ಆಕೆಯ ಪೋಷಕರು ಬೇಯಿಸಿದ ಮಾಂಸವನ್ನು ಮಾತ್ರ ಸೇವಿಸಿದ್ದಾರೆ. ಪೋಷಕರಿಗೆ ಯಾವುದೇ ಪರಿಣಾಮ ಬೀರದಿದ್ದರೂ ಮಗುವಿಗೆ ಜ್ವರ ಬಂದು, ಉಸಿರಾಟದ ತೊಂದರೆ ಅನುಭವಿಸಿದೆ. ಬೇಯಿಸಿದ ಮಾಂಸ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಆದರೆ ಹಸಿ ಮಾಂಸವನ್ನು ಯಾರೂ ಸೇವಿಸಬಾರದು ಎಂದು ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಡಾ.ಟಿ.ದಾಮೋದರ್ ನಾಯ್ಡು ಹೇಳಿದ್ದಾರೆ.

Take a Poll

ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಕೋಳಿ ಸಾಕಣೆ ಕೇಂದ್ರಗಳು ಮತ್ತು ಕೋಳಿಗಳಲ್ಲಿ ಎಂಟು ಬಾರಿ ಹೆಚ್ಚು ರೋಗಕಾರಕ H5N1 ಹಕ್ಕಿಜ್ವರ ಹರಡಿದೆ. ಆಂಧ್ರಪ್ರದೇಶದ ಪೂರ್ವಭಾಗದಲ್ಲಿ ಹೆಚ್ಚು ಪತ್ತೆಯಾಗಿದ್ದು, ಆರು ಲಕ್ಷಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ.ಹಕ್ಕಿ ಜ್ವರದಿಂದ ಮಗು ಸಾವನ್ನಪ್ಪಿದ ಘಟನೆ ನಂತರ ಗುಂಟೂರು, ಪಲ್ನಾಡು ಮತ್ತು ನರಸರಾವ್‌ಪೇಟೆ ಪಟ್ಟಣ ಹಾಗೂ ಪ್ರಕಾಶಂ ಜಿಲ್ಲೆಯ ಕೆಲವು ಭಾಗಗಳಲ್ಲಿರುವ ಎಲ್ಲ ಕೋಳಿ ಸಾಕಣೆ ಕೇಂದ್ರಗಳಲ್ಲಿ ಇಲಾಖೆಯು ಪರಿಶೀಲನೆ ನಡೆಸಿದೆ. ಆದರೆ ಈ ಭಾಗದಲ್ಲಿ ಕೋಳಿಗಳಲ್ಲಿ ಹಕ್ಕಿ ಜ್ವರದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ಪಶುಸಂಗೋಪನಾ ನಿರ್ದೇಶಕ ದಾಮೋದರ್ ನಾಯ್ಡು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆಯು ಜನರು ಆತಂಕಗಳೊಳ್ಳದಂತೆ ಧೈರ್ಯ ತುಂಬಿದ್ದಾರೆ.

ಈ ಮಗುವಿನ ಸಾವು ಹಸಿ ಕೋಳಿ ಮಾಂಸ ಸೇವನೆಯಿಂದ ಸಂಭವಿಸಿದೆ. ಆದರೆ ಬೇಯಿಸಿದ ಮಾಂಸವನ್ನು ಸೇವಿಸಿದ ಮಗುವಿನ ಪೋಷಕರು ಆರೋಗ್ಯವಾಗಿಯೇ ಇದ್ದಾರೆ. 60ರಿಂದ 70 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಹಕ್ಕಿ ಜ್ವರ ಹರಡುವ ವೈರಸ್ ಬದುಕಲು ಸಾಧ್ಯವಿಲ್ಲ. ಹಾಗಾಗಿ ಸಂಪೂರ್ಣವಾಗಿ ಬೇಯಿಸಿದ ನಂತರವೇ ಕೋಳಿ ಮತ್ತು ಮೊಟ್ಟೆಗಳನ್ನು ಸೇವಿಸಿ ಎಂದು ಸಲಹೆ ನೀಡಲಾಗಿದೆ.

ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕಳೆದ ತಿಂಗಳಿನಿಂದಲೂ ಹಕ್ಕಿ ಜ್ವರ ಹೆಚ್ಚಾಗಿತ್ತು. ಹಕ್ಕಿ ಜ್ವರ ತಗುಗಿದ ಕಾರಣ ಅಲ್ಲಿ ಲಕ್ಷಾಂತರ ಕೋಳಿಗಳ ಮಾರಣಹೋಮ ನಡೆದಿತ್ತು. ಈ ವೇಳೆ ರಾಜ್ಯದಲ್ಲೂ ಚಿಕನ್‌ ಹಾಗೂ ಕೋಳಿ ಮೊಟ್ಟೆ ಸೇವನೆಗೆ ಜನ ಹಿಂದೇಟು ಹಾಕಿದ್ದರು. ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮಹತ್ವದ ಮಾಹಿತಿ ನೀಡಿದ್ದರು.

ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗಿತ್ತು. ಹಕ್ಕಿಜ್ವರ ಸಾಂಕ್ರಾಮಿಕ ರೋಗವಾದರೂ, ಅದು ಹಕ್ಕಿಗಳಿಂದ ಮನುಷ್ಯರಿಗೆ ಹರಡುವುದು ಅಪರೂಪ ಎಂದಿದ್ದರು.‌ ಹಾಗಾಗಿ ಅನಗತ್ಯ ಆತಂಕ ಪಡಬೇಡಿ. ಮೊಟ್ಟೆ ಮತ್ತು ಮಾಂಸವನ್ನು ಸೇವಿಸುವಾಗ ಕೆಲ ಎಚ್ಚರಿಕೆಗಳನ್ನು ಪಾಲಿಸಿ. ಮೊಟ್ಟೆ ಮತ್ತು ಮಾಂಸವನ್ನು 70 ಡಿಗ್ರಿ ಉಷ್ಣಾಂಶದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಬೇಯಿಸಿ, ತಿನ್ನಿ. ಸೋಂಕು ಪೀಡಿತ ಕೋಳಿ ಫಾರಂ, ಮೃತ ಹಕ್ಕಿ ಅಥವಾ ಕೋಳಿಗಳ ಸಮೀಪಕ್ಕೆ ಹೋಗದೆ ಎಚ್ಚರಿಕೆ ವಹಿಸಿ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದರು.

ಹಕ್ಕಿ ಜ್ವರದ ಲಕ್ಷಣಗಳೇನು?: ಹಕ್ಕಿ ಜ್ವರವು ಪಕ್ಷಿಗಳಿಗೆ ಮಾತ್ರವಲ್ಲದೆ ಮನುಷ್ಯರಿಗೂ ಹರಡುತ್ತದೆ. ಆದರೆ ಇದು ವಿರಳ ಎನ್ನಲಾಗಿದೆ. ಇದರ ಲಕ್ಷಣಗಳೆಂದರೆ ತೀವ್ರ ಜ್ವರ, ಕೆಮ್ಮು, ಉಸಿರಾಟದಲ್ಲಿ ತೊಂದರೆ, ಮೂಗಿನಲ್ಲಿ ಸೋರುವಿಕೆ, ತಲೆನೋವು, ಸ್ನಾಯುಗಳ ನೋವು, ಗಂಟಲಿನ ಊತ ಮುಂತಾದವು. ಅಲ್ಲದೆ ವಾಕರಿಕೆ ಬರುವುದು ವಾಂತಿ, ಬೇಧಿ ಕೂಡ ಇದರಿಂದ ಆಗುತ್ತದೆ. ವೈದ್ಯರ ಪ್ರಕಾರ ಈ ಸೋಂಕು ತಗುಲಿದ ಎರಡರಿಂದ ಐದು ದಿನಗಳಲ್ಲಿ ಈ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಅಗತ್ಯ ಚಿಕಿತ್ಸೆ ಪಡೆದರೆ, ಇದರಿಂದ ಗುಣಮುಖರಾಗಬಹುದು. ಹಾಗಾಗಿ ಈ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ. ಈ ಹಕ್ಕಿ ಜ್ವರವು ಸೋಂಕಿತ ಪಕ್ಷಿಗಳಿಗೆ ನೇರವಾಗಿ ಹರಡುತ್ತವೆ. ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಈ ಪ್ರಕರಣಗಳು ಹೆಚ್ಚಾಗಿದ್ದರಿಂದ ಹಲವು ಕೋಳಿ ಫಾರಂಗಳನ್ನು ಮುಚ್ಚಿಸಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+