ಆಂಧ್ರದ ಅಧಿಕಾರಿ ಆಸ್ತಿ ನೋಡಿ ದಂಗಾದ ಪೊಲೀಸರು!

Posted By:
Subscribe to Oneindia Kannada

ಹೈದರಾಬಾದ್, ಏಪ್ರಿಲ್ 30 : ಆಂಧ್ರಪ್ರದೇಶದ ಸರ್ಕಾರಿ ಅಧಿಕಾರಿಯೊಬ್ಬರ ಆಸ್ತಿ ನೋಡಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಸಾರಿಗೆ ಇಲಾಖೆಯ ಅಧಿಕಾರಿಯ ಅಕ್ರಮ ಆಸ್ತಿ 100 ಕೋಟಿ ಗಡಿ ದಾಟಿದ್ದು, ಆಸ್ತಿಯ ನಿಖರ ಮೌಲ್ಯವನ್ನು ಇನ್ನೂ ಲೆಕ್ಕಹಾಕಲಾಗುತ್ತಿದೆ.

ಕಾಕಿನಾಡದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಸ್‌ಪಿ ರಮಾದೇವಿ ಅವರ ನೇತೃತ್ವದಲ್ಲಿ ಸಾರಿಗೆ ಇಲಾಖೆ ಉಪ ಆಯುಕ್ತ ಮೋಹನ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಮನೆಯಲ್ಲಿ ಸಿಕ್ಕ ಚಿನ್ನಾಭರಣಗಳನ್ನು ನೋಡಿ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ. [ಲೋಕಾಯುಕ್ತರಿಗೆ ಚಳ್ಳೆಹಣ್ಣು ತಿನ್ನಿಸಿದ ಚಿತ್ರದುರ್ಗ ಎಸಿ]

corruption

ಕರ್ನಾಟಕದ ಬಳ್ಳಾರಿ ಸೇರಿದಂತೆ 9 ಕಡೆ ಮೋಹನ್‌ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಅಕ್ರಮ ಆಸ್ತಿಯ ಮೌಲ್ಯ ಈಗಾಗಲೇ 100 ಕೋಟಿ ಮೀರಿದ್ದು, ಅಕ್ರಮವಾಗಿ ಎಷ್ಟು ಸಂಪಾದನೆ ಮಾಡಿದ್ದಾರೆ? ಎಂಬ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕಿಲ್ಲ. [51 ಮನೆಯ ಒಡೆಯನ ತಿಂಗಳ ಸಂಬಳ 21 ಸಾವಿರ!]

ಮೋಹನ್‌ನನ್ನು ಬಂಧಿಸಿರುವ ಎಸಿಬಿ ಪೊಲೀಸರು ವಿಜಯವಾಡ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮೋಹನ್‌ಗೆ ಸಂಬಂಧಿಸಿದ ಹಲವು ಲಾಕರ್‌ಗಳನ್ನು ಇನ್ನೂ ಪೊಲೀಸರು ತೆರದಿಲ್ಲ.

ಮೋಹನ್ ಬಳ್ಳಾರಿಯಲ್ಲಿಯೂ ಆಸ್ತಿ ಮಾಡಿದ್ದಾನೆ. ಮಗಳ ಹೆಸರಿನಲ್ಲಿ ಒಂದು ಮತ್ತು ಅಳಿಯನ ಹೆಸರಿನಲ್ಲಿ ಎರಡು ಮನೆಗಳನ್ನು ಬಳ್ಳಾರಿಯಲ್ಲಿ ಹೊಂದಿದ್ದಾನೆ. ಹೈದರಾಬಾದ್ ಮತ್ತು ಪ್ರಕಾಶಂಗಳಲ್ಲಿ 54 ಎಕರೆ ಭೂಮಿಯನ್ನು ಹೊಂದಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ACB officials led by Deputy Superindent of Police Rama Devi, conducted raids in the residence of Deputy Transport Officer Mohan, at Kakinada in East Godavari district and were shocked to find nearly Rs. 350 crores worth of gold and silver.
Please Wait while comments are loading...