Anant-Radhika wedding; ಮುಂಬೈನತ್ತ ಗಣ್ಯರ ದೌಡು: ಮದುವೆ ಸಮಾರಂಭದಲ್ಲಿ ಭಾಗವಹಿಸುವ ಪ್ರಭಾವಿಗಳ ಪಟ್ಟಿ ಇಲ್ಲಿದೆ

ಜಗತ್ತೀನ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ ಉದ್ಯಮಿ ಮುಕೇಶ್ ಅಂಬಾನಿ ಅವರ ಮಗ ಅನಂತ್‌ ಅಂಬಾನಿ ಮದುವೆ ಇಂದಿನಿಂದ ಆರಂಭವಾಗಲಿದೆ. ಅದ್ಧೂರಿ ಸಮಾರಂಭದಲ್ಲಿ ಭಾರತ ಸೇರಿದಂತೆ, ವಿದೇಶಿ ಗಣ್ಯರು ಭಾಗವಹಿಸಲಿದ್ದಾರೆ. ಹೀಗಾಗಿ ಮುಂಬೈನಲ್ಲಿ ಹೊಟೇಲ್‌ ಬೆಲೆ ಗಗನಕ್ಕೆ ಏರಿವೆ.

ಮದುವೆ ಸಮಾರಂಭಕ್ಕೆ ಮುಖೇಶ್ ಅಂಬಾನಿ ಮನೆ ಆಂಟಿಲಿಯಾವನ್ನು ಅದ್ಧೂರಿಯಾಗಿ ಅಲಂಕರಿಸಲಾಗಿದೆ. ಈ ಮಧ್ಯೆ ಮುಖೇಶ್ ಅಂಬಾನಿ ಆಹ್ವಾನಿಸಿದ್ದ ಅತಿಥಿಗಳ ಪಟ್ಟಿ ಈಗ ಹೊರ ಬಂದಿದೆ. ಬಾಲಿವುಡ್‌, ಹಲವು ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಯಾರೆಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Anant Ambani and Radhika Merchant s Grand Wedding Top Political and Bollywood Stars Attend

ಮಾಜಿ ರಾಷ್ಟ್ರಪತಿ ಭಾಗಿ

ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನೂ ಮದುವೆಗೆ ಆಹ್ವಾನಿಸಲಾಗಿದೆ. ಎಂಕೆ ಸ್ಟಾಲಿನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕೂಡ ಮದುವೆಯಲ್ಲಿ ಭಾಗವಹಿಸಲಿದ್ದಾರೆ.

ಸಿಎಂಗಳಿಗೆ ಆಹ್ವಾನ

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿಯ ಮಮತಾ ಬ್ಯಾನರ್ಜಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನಂತ್ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಾಲಿವುಡ್‌ನಿಂದ ಯಾರೆಲ್ಲಾ ಭಾಗಿ

ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ಅರ್ಜುನ್ ಕಪೂರ್, ಜಾನ್ವಿ ಕಪೂರ್ , ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಶಾಹಿದ್ ಕಪೂರ್, ವಿಕ್ಕಿ ಕೌಶಲ್ ಮದುವೆ ಸಮಾರಂಭದ ಮೆರಗು ಹೆಚ್ಚಿಸಲಿದ್ದಾರೆ.

Anant Ambani and Radhika Merchant s Grand Wedding Top Political and Bollywood Stars Attend

ಬರಿ ದೇಶ ಅಷ್ಟೇ ಅಲ್ಲ ವಿದೇಶಿ ಗಣ್ಯರ ದಂಡೇ ಈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬ್ರಿಟಿಷ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ಇಟಲಿಯ ಮಾಜಿ ಪ್ರಧಾನಿ ಮ್ಯಾಟಿಯೊ ರೆಂಜಿ ವಿವಾಹದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್, ತಾಂಜಾನಿಯಾ ಅಧ್ಯಕ್ಷ ಸಾಮಿಯಾ ಸುಲುಹು ಹಸನ್, ಆಸ್ಟ್ರಿಯಾದ ಮಾಜಿ ಪ್ರಧಾನಿ ಸೆಬಾಸ್ಟಿಯನ್ ಕುರ್ಜ್, ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್ ಮತ್ತು ಸ್ವೀಡನ್ ಮಾಜಿ ಪ್ರಧಾನಿ ಕಾರ್ಲ್ ಬಿಲ್ಡ್ಟ್ ಅವರನ್ನು ಆಹ್ವಾನಿಸಲಾಗಿದೆ.

ಅಂತರ ಕಾಯ್ದುಕೊಂಡ ಗಾಂಧಿ ಕುಟುಂಬ

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಗೆ ಗಾಂಧಿ ಕುಟುಂಬಕ್ಕೂ ಆಹ್ವಾನ ನೀಡಲಾಗಿದೆ. ಆದರೆ ಗಾಂಧಿ ಕುಟುಂಬ ಈ ಮದುವೆಯಿಂದ ಅಂತರ ಕಾಯ್ದುಕೊಂಡಿದೆ. ಈ ಮದುವೆಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಕಾಣಿಸಿಕೊಳ್ಳುವುದಿಲ್ಲ. ತೇಜಸ್ವಿ ಯಾದವ್ ಮತ್ತು ಲಾಲು ಯಾದವ್ ಕೂಡ ಈ ಮದುವೆಗೆ ಹಾಜರಾಗಬಹುದು. ಸದ್ಯ ಅಖಿಲೇಶ್ ಯಾದವ್ ಕೂಡ ಮುಂಬೈನಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಹೊಟೇಲ್‌ ಬೆಲೆ ದುಬಾರಿ

ದೇಶ ಹಾಗೂ ವಿದೇಶದ ಗಣ್ಯರು ಮದುವೆಗೆ ಆಗಮಿಸಲಿದ್ದು, ಮುಂಬೈನ ಟಾಪ್ ಐಷಾರಾಮಿ ಹೋಟೆಲ್‌ಗಳಲ್ಲಿ ಕೊಠಡಿಗಳ ಬೆಲೆ ಗಗನಕ್ಕೇರಿದೆ. ಜುಲೈ 11 ರಿಂದ 17 ರವರೆಗೆ ಕೊಠಡಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಫೋರ್ ಸೀಸನ್ ಮುಂಬೈನಂತಹ ಪ್ರತಿಷ್ಠಿತ ಹೋಟೆಲ್‌ಗಳು ಜುಲೈ 12 ರಂದು ಪ್ರೆಸಿಡೆನ್ಶಿಯಲ್ ಸೂಟ್‌ಗೆ ರಾತ್ರಿಗೆ 5 ಲಕ್ಷ ರೂ. (ತೆರಿಗೆ ಹೊರತುಪಡಿಸಿ ರೂ. 90,000) ವಿಧಿಸುತ್ತಿವೆ.

ಇದಷ್ಟೇ ಅಲ್ಲಾ ಜಿಯೋ ವರ್ಲ್ಡ್‌ ಸುತ್ತಮುತ್ತಲಿನ ಐಶಾರಾಮಿ ಹೊಟೇಲ್‌ಗಳ ಬೆಲೆ ದುಪಟ್ಟಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+