ಮಹಾತ್ಮ ಎಂಬ ಬೆಳಕಿನಿಂದ ನಾವು ಶ್ರೀಮಂತರಾಗಿದ್ದೇವೆ: ಆನಂದ್ ಮಹೀಂದ್ರಾ

ನವದೆಹಲಿ, ಮೇ 17: ಮಹಾತ್ಮಾ ಗಾಂಧಿ ಅವರ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಮೊದಲ ಹಿಂದೂ ಭಯೋತ್ಪಾದಕ ಎಂಬ ನಟ, ರಾಜಕಾರಣಿ ಕಮಲ ಹಾಸನ್ ಅವರ ಹೇಳಿಕೆ ಅನೇಕ ವಿವಾದಾತ್ಮಕ ಹೇಳಿಕೆಗಳಿಗೆ ಎಡೆಮಾಡಿಕೊಟ್ಟಿದೆ. ಇದರಿಂದ ಗಾಂಧೀಜಿ ಮತ್ತು ಗೋಡ್ಸೆ ಅವರ ಕುರಿತಾಗಿ ತೀವ್ರ ಚರ್ಚೆಗಳು ನಡೆಯುತ್ತಿವೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮಹಾತ್ಮ ಗಾಂಧಿ ಅವರ ಕೊಡುಗೆಯ ಕುರಿತು ಟ್ವಿಟ್ಟರ್‌ನಲ್ಲಿ ಕೊಂಡಾಡಿರುವ ಉದ್ಯಮಿ ಆನಂದ್ ಮಹೀಂದ್ರಾ, ಅವರನ್ನು ಟೀಕಿಸುವ ಮತ್ತು ಅವರ ಹತ್ಯೆಯನ್ನು ಸಮರ್ಥಿಸಿಕೊಳ್ಳುವವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

Anand mahindra we were always rich since mahatma gandhi inspired billion globally

ಮಹಾತ್ಮ ಗಾಂಧಿ ಅವರು ಜಾಗತಿಕವಾಗಿ ಕೋಟ್ಯಂತರವಾಗಿ ಪ್ರಭಾವಿಸಿದಾಗಿನಿಂದ ನಾವೆಲ್ಲರೂ ಸದಾ ಶ್ರೀಮಂತರಾಗಿದ್ದೇವೆ ಎಂದಿರುವ ಅವರು, ನಾವು ತಾಲಿಬಾಲಿಗಳಾಗಿ ಬದಲಾಗಿದ್ದೇವೆಯೇ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

'ಭಾರತವು 75 ವರ್ಷಗಳಿಂದ ಜಗತ್ತು ತನ್ನ ನೈತಿಕತೆಯನ್ನು ಕಳೆದುಕೊಂಡ ಸಂದರ್ಭದಲ್ಲಿ ಮೂಡಿದ ಮಹಾತ್ಮ ಎಂಬ ಬೆಳಕಿನ ನಾಡಾಗಿದೆ. ನಾವು ಬಡವರಾಗಿದ್ದಕ್ಕೆ ದುಃಖಪಡುತ್ತೇವೆ, ಆದರೆ ಜಾಗತಿಕವಾಗಿ ಬಾಬು ಕೋಟ್ಯಂತರ ಮಂದಿಯನ್ನು ಪ್ರಭಾವಿದಾಗಿನಿಂದಲೂ ನಾವು ಶ್ರೀಮಂತರಾಗಿದ್ದೇವೆ. ಇದು ಪವಿತ್ರವಾಗಿಯೇ ಉಳಿಯಬೇಕಿದೆ. ನಾವು ನಮ್ಮನ್ನು ಉಳಿಸಿದ ಪ್ರತಿಮೆಗಳನ್ನು ನಾಶಪಡಿಸುವ ತಾಲಿಬಾನಿಗಳಾಗಿದ್ದೇವೆಯೇ?' ಎಂದು ಅವರು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+