Tirupati Laddu row: ಸನಾತನ ಧರ್ಮ; ಪ್ರಕಾಶ್‌ ರಾಜ್‌ vs ಪವನ್‌ ಕಲ್ಯಾಣ್‌ ನಡುವೆ ವಾಕ್ಸಮರ

ತಿರುಪತಿ ಲಡ್ಡು ವಿವಾದ ಹಾಗೂ ಹಿಂದೂ ಧರ್ಮದ ಬಗ್ಗೆ ನಟ, ಜನಸೇನ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಹಾಗೂ ನಟ ಪ್ರಕಾಶ್‌ ರಾಜ್‌ ನಡುವೆ ವಾಕ್ಸಮರ ಮುಂದುವರಿದಿದೆ. ಪವನ್‌ ಕಲ್ಯಾಣ್‌ ಅವರು ಮಾಡಿದ ಟ್ವೀಟ್‌ ಅನ್ನು ಹಂಚಿಕೊಂಡು ಪ್ರಕಾಶ್‌ ರಾಜ್‌ ಅವರು ತಿರುಗೇಟು ನೀಡಿದ್ದರು. ನಿಮ್ಮದೇ ರಾಜ್ಯದಲ್ಲಿ ಇದು ನಡೆಯುತ್ತಿದೆ. ಇದನ್ನು ನೀವು ತನಿಖೆ ನಡೆಸಬಾರದೇಕೆ ಎಂದು ಪ್ರಶ್ನೆ ಮಾಡಿದ್ದರು. ಇದರ ಮುಂದುವರಿದ ಭಾಗವಾಗಿ, ಇದೀಗ ಇಬ್ಬರ ನಡುವೆ ಹಿಂದೂ ಧರ್ಮದ ಬಗ್ಗೆ ಚರ್ಚೆ ಶುರುವಾಗಿದೆ.

ಪ್ರಕಾಶ್‌ರಾಜ್‌ಗೆ ಟಾಂಗ್ ಕೊಟ್ಟು ಮಾತನಾಡಿರುವ ಪವನ್‌ ಕಲ್ಯಾಣ್‌ ಅವರು, ಪ್ರಕಾಶ್‌ ರಾಜ್‌ ಅವರು ತಿಳಿದುಕೊಳ್ಳಬೇಕು. ನಾನು ಪವಿತ್ರ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಹಿಂದೂ ಧರ್ಮದ ಪಾವಿತ್ರ್ಯತೆ ಹಾಗೂ ಆಹಾರದ ಕಲಬೆರಕೆಯಂತಹ ಗಂಭೀರ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದೇನೆ. ಈ ವಿಚಾರಗಳ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಈ ವಿಚಾರಗಳ ಬಗ್ಗೆ ನಾನ್ಯಾಕೆ ಮಾತನಾಡಬಾರದು. ಪ್ರಕಾಶ್‌ ರಾಜ್‌ ನನ್ನನ್ನು ಯಾವ ಕಾರಣಕ್ಕಾಗಿ ಟೀಕಿಸುತ್ತಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ಸನಾತನ ಧರ್ಮದ ಮೇಲಿನ ದಾಳಿಯ ವಿರುದ್ಧ ನಾನು ಮಾತನಾಡಬೇಕಲ್ಲವೇ ಪ್ರಕಾಶ್‌ ರಾಜ್‌ ಅವರೇ ಎಂದು ಪ್ರಶ್ನೆ ಮಾಡಿದ್ದಾರೆ.

An ongoing spat between actor Prakash Raj and Pawan Kalyan

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್‌ ರಾಜ್‌ ಅವರು, ಪವನ್‌ ಕಲ್ಯಾಣ್‌ ಅವರೇ ನಾನು ನಿಮ್ಮ ಪತ್ರಿಕಾಗೋಷ್ಠಿಯನ್ನು ನೋಡಿದ್ದೇನೆ. ನಾನು ಹೇಳಿದ್ದನ್ನು ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದಿರಿ ಅನಿಸುತ್ತೆ. ಈ ರೀತಿ ತಪ್ಪಾಗಿ ಅರ್ಥ ಮಾಡಿಕೊಂಡಿರುವುದು ನನಗೆ ಅಚ್ಚರಿ ಮೂಡಿಸಿದೆ. ನಾನು ಸಿನಿಮಾ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ಇದ್ದೇನೆ. ನಿಮ್ಮ ಪ್ರಶ್ನೆಗಳಿಗೆ ಖಂಡಿತ ಉತ್ತರಿಸುತ್ತೇನೆ. ನೀವು ನನ್ನ ಟ್ವಿಟ್ಟರ್‌ ಖಾತೆಗೆ ಹೋಗಿ ನೋಡಿದರೆ ನನಗೆ ಖಂಡಿತ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಮೊದಲು ನಾನು ಏನು ಹೇಳಿದ್ದೇನೆ ಎನ್ನುವುದನ್ನು ನೋಡಿ ಎಂದು ಟಾಂಗ್‌ ಕೊಟ್ಟಿದ್ದಾರೆ.

ಪ್ರಕಾಶ್‌ ರಾಜ್‌ vs ಪವನ್‌ ಕಲ್ಯಾಣ್‌ ವಿವಾದವೇನು ?

ಸನಾತನ ಧರ್ಮವನ್ನು ರಕ್ಷಿಸಬೇಕು. ಹಿಂದೂ ದೇವಾಲಯದಲ್ಲಿ ಈ ರೀತಿ ಆಗಬಾರದು. ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವ ಅವಶ್ಯಕತೆ ಇದೆ ಎಂಬರ್ಥದಲ್ಲಿ ಪವನ್‌ ಕಲ್ಯಾಣ್‌ ಅವರು ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪವನ್‌ ಕಲ್ಯಾಣ್‌ ಅವರು, ಆತ್ಮೀಯ ಪವನ್‌ ಕಲ್ಯಾಣ್‌ ಅವರೇ. ಈ ವಿಷಯವನ್ನು (ತಿರುಪತಿ ಲಡ್ಡು ವಿವಾದ) ನೀವು ಉಪ ಮುಖ್ಯಮಂತ್ರಿಯಾಗಿದ್ದೀರಲ್ಲ ಅದೇ ರಾಜ್ಯದಲ್ಲಿಯೇ (ಆಂಧ್ರಪ್ರದೇಶದಲ್ಲೇ) ನಡೆದಿದೆ. ಅಪರಾಧಿಗಳನ್ನು ಪತ್ತೆ ಮಾಡಿ ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಿ ಎಂದಿದ್ದರು.

ಅಲ್ಲದೇ ಮುಂದುವರಿದು ಯಾಕೆ ಈ ರೀತಿಯ ಆತಂಕವನ್ನು ಹೆಚ್ಚಿಸುತ್ತಿದ್ದೀರಾ. ರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದರು. ನಮ್ಮ ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮು ಉದ್ವಿಗ್ನತೆ (ಕೋಮು ಸೂಕ್ಷ್ಮ ವಿಚಾರಗಳು) ಇವೆ. ಇನ್ನು ಕೊನೆಯದಾಗಿ ಕೇಂದ್ರದಲ್ಲಿ ಇರುವ ನಿಮ್ಮ ಸ್ನೇಹಿತರಿಗೆ ಥ್ಯಾಂಕ್ಸ್‌ ಹೇಳಿ ಬಿಡಿ ಎಂದೂ ಸಹ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದರು. ಈ ವಿಚಾರದ ಮೂಲಕ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+