ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ವೋಟ್!

ಗುವಾಹಟಿ, ಏ.3: ವಿದ್ಯುನ್ಮಾನ ಮತಯಂತ್ರದ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಹಾಕುವಂಥ ಘಟನೆ ಇತ್ತೀಚೆಗೆ ನಡೆದಿದೆ. ಇಲ್ಲಿನ ಜೋರ್ಹಟ್ ನಲ್ಲಿ ನಡೆದ ಅಣಕು ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಇವಿಎಂ ನ ಯಾವ ಗುಂಡಿ ಒತ್ತಿದರೂ ಮತ ಮಾತ್ರ ಬಿಜೆಪಿಗೆ ಬೀಳುತ್ತಿದ್ದನ್ನು ಕಂಡು ಅಧಿಕಾರಿಗಳು ಅವಾಕ್ಕಾಗಿದ್ದಾರೆ.

ಅಣಕು ಮತದಾನವನ್ನೇ ಅಣಕು ಮಾಡುವಂತೆ ಇವಿಎಂ ಕಾರ್ಯನಿರ್ವಹಿಸಿದೆ. ಹಲವು ಬಾರಿ ಹಲವು ಸಮಯದ ಅಂತರದಲ್ಲಿ ಮತದಾನ ಮಾಡಿದಾಗಲೂ ಇದೇ ರೀತಿ ಫಲಿತಾಂಶ ಹೊರಬಿದ್ದಿದೆ. ಮೋಡಿಗೆ ಒಳಗಾದಂತೆ ವರ್ತಿಸುತ್ತಿದ್ದ ಇವಿಎಂನನ್ನು ಜೋರ್ಹಟ್ ಸಂಸದೀಯ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿ ಹಾಗೂ ಜಿಲ್ಲಾಧ್ಯಕ್ಷ ವಿಶಾಲ್ ವಸಂತ್ ಸೋಲಾಂಕಿ ಅವರು ಪರೀಕ್ಷೆ ಮಾಡಲು ಕಳಿಸಿದ್ದಾರೆ. ಹೈದರಾಬಾದಿನಲ್ಲಿರುವ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(ಇಸಿಐಎಲ್) ಇಂಜಿನಿಯರ್ ಗಳು ಎರಡನೇ ಬಾರಿಗೆ ಈ ಇವಿಎಂನನ್ನು ಪರೀಕ್ಷಿಸಲಿದ್ದಾರೆ. ಈ ರೀತಿ ಘಟನೆ ನಿಜಕ್ಕೂ ಅಚ್ಚರಿ ತಂದಿದೆ ಎಂದು ಸೋಲಾಂಕಿ ಹೇಳಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

An EVM that 'votes' only for BJP stuns poll staff in Assam

ಅಸ್ಸಾಂನ ಜೋರ್ಹಟ್ ಲೋಕಸಭಾ ಕ್ಷೇತ್ರದಲ್ಲಿ ಘಟಾನುಘಟಿಗಳು ಕಣದಲ್ಲಿದ್ದಾರೆ.ಮಾಜಿ ಕೇಂದ್ರ ಸಚಿವ ಬಿಜೋಯ್ ಕೃಷ್ಣ ಹಂಡಿಕ್ ಅವರು ಬಿಜೆಪಿ ಯುವ ಬುಡಕಟ್ಟು ನಾಯಕ ಕಾಮಾಕ್ಯ ತಾಸಾ ಅವರು ಎದುರಾಳಿಯಾಗಿದ್ದಾರೆ. ಹಂಡಿಕ್ ಅವರು ಏಳನೇ ಬಾರಿಗೆ ಸಂಸತ್ ಪ್ರವೇಶ ಬಯಸಿದ್ದಾರೆ. ಈ ಕ್ಷೇತ್ರದಲ್ಲಿ ಏಪ್ರಿಲ್ 7ರಂದು ಮತದಾನ ನಡೆಯಲಿದೆ.

ಇವಿಎಂನಲ್ಲಿ ಕಂಟ್ರೋಲ್ ಯೂನಿಟ್ ಹಾಗೂ ಬಾಲೆಟ್ ಯೂನಿಟ್ ಇರುತ್ತದೆ ಎರಡನ್ನು ಕೇಬಲ್ ಮೂಲಕ ಬೆಸೆಯಲಾಗಿರುತ್ತದೆ. ನೀಲಿ ಬಣ್ಣದ ಬಟನ್ ಒತ್ತುವ ಮೂಲಕ ಮತದಾನ ಮಾಡಬಹುದು. ಕಂಟ್ರೋಲ್ ಯೂನಿಟ್ ಸೀಲ್ ಆಗಿದ್ದು ಯಾರೂ ಓಪನ್ ಮಾಡಲು ಬರುವುದಿಲ್ಲ. ದೋಷಪೂರಿತ ಯಂತ್ರವನ್ನು ಹಿಂಪಡೆಯಲಾಗಿದ್ದು ಯಾವುದೇ ಬೂತ್ ಗಳಿಗೂ ಕಳಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ವಿಜಯೇಂದ್ರ ಹೇಳಿದ್ದಾರೆ.

ಈ ಹಿಂದೆ 2011ರ ಅಸೆಂಬ್ಲಿ ಚುನಾವಣೆಯಲಿ ಅಸ್ಸಾಂ ಗಣ ಪರಿಷತ್ ಕಾಂಗ್ರೆಸ್ ವಿರುದ್ಧ ಮತಯಂತ್ರ ದುರ್ಬಳಕೆ ಆರೋಪ ಹೊರೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+