ರಾಹುಲ್ ಗಾಂಧಿಯನ್ನು ಪಪ್ಪುಎಂದ ಅಮಿತ್ ಶಾ
ಲಕ್ನೋ, ಅ.10 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರು ಆರೋಪಗಳು ಹೆಚ್ಚಾಗುತ್ತಿವೆ. ನರೇಂದ್ರ ಮೋದಿ ಅವರ ಬಲಗೈ ಬಂಟ ಅಮಿತ್ ಶಾ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪಪ್ಪು ಎಂದು ಕರೆದು ಕಿಚಾಯಿಸಿದ್ದಾರೆ.
ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂಬ ಮಾತುಗಳು ಎಲ್ಲೆಡೆ ಹಬ್ಬಿವೆ. ಇದನ್ನೇ ಆಧಾರವಾಗಿಟ್ಟುಕೊಂಡ ಅಮಿತ್ ಶಾ ಗುರುವಾರ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಅವರು ಪಪ್ಪು ಎಂದು ಕರೆಯುವ ಮೂಲಕ ಅವರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಕಾಂಗ್ರೆಸ್ ನಾಯಕರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸುತ್ತಾರೆ. ಇದನ್ನು ಸಹಿಸಿದ ಅಮಿತ್ ಶಾ ರಾಹುಲ್ ಗಾಂಧಿ ಟೀಕಿಸುತ್ತಾ, ಕಾಂಗ್ರೆಸಿಗರಿಗೆ ಟಾಂಗ್ ನೀಡುವ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದವರ ಪ್ರಕಾರ ಪ್ರಧಾನಿ ಹುದ್ದೆ ಎಂಬುದು ಪಪ್ಪು' ಜನ್ಮಸಿದ್ಧ ಹಕ್ಕು. ಆದರೆ, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರಧಾನಿ ಹುದ್ದೆಗೆ ಏರಲು ಜನರ ಆಶೀರ್ವಾದವೂ ಅಗತ್ಯವಿದೆ ಎಂದು ಅವಿತ್ ಶಾ ರಾಹುಲ್ ಗಾಂಧಿಯನ್ನು ಕಿಚಾಯಿಸಿದ್ದಾರೆ.
ನರೇಂದ್ರ ಮೋದಿಗೆ ಜನರ ಆಶೀರ್ವಾದವಿದೆ ಎಂದಿರುವ ಅಮಿತ್ ಶಾ, ತಮ್ಮ ಮಾತಿನುದ್ದಕ್ಕೂ ರಾಹುಲ್ ಗಾಂಧಿಯನ್ನ ಪಪ್ಪು ಎಂದು ಹೇಳಿ ಲೇವಡಿ ಮಾಡಿದರು. ಶಾ ಹೇಳಿಗೆ ಸದ್ಯ ಕಾಂಗ್ರೆಸಿಗರ ಕಣ್ಣನ್ನು ಕೆಂಪಾಗಿಸಿದೆ.
ನಾವು ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿದ್ದೇವೆ, ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿ ಯಾರು..? ಪಪ್ಪುವಿನ ಕಥೆ ಏನು..? ಪಪ್ಪುವನ್ನು ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಏಕೆ ಘೋಷಿಸಿಲ್ಲ? ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.
ಪಪ್ಪುವನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ, ಚುನಾವಣೆಯಲ್ಲಿ ಸೋಲನುಭವಿಸುವ ಭಯ ಕಾಂಗ್ರೆಸ್ ಪಕ್ಷಕ್ಕಿದೆ. ಆದ್ದರಿಂದ ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಲು ಅವರು ಹಿಂದೇಟು ಹಾಕಿತ್ತಿದ್ದಾರೆ ಎಂದು ಅಮಿತ್ ಶಾ ಕುಟುಕಿದ್ದಾರೆ.
ಬಿಜೆಪಿ ಉತ್ತರಪ್ರದೇಶದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಕನಸು ಕಾಣುತ್ತಿದೆ. ಆದರೆ, ಕೇವಲ 20 ಸ್ಥಾನಗಳನ್ನು ಗೆಲ್ಲಲೂ ಬಿಜೆಪಿಗೆ ಸಾಧ್ಯವಾಗುವುದಿಲ್ಲ, ಕೋಮುವಾದವನ್ನು ಬಿಟ್ಟರೆ ದೇಶಾದ್ಯಂತ ಬಿಜೆಪಿ 110 ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಉತ್ತರ ಪ್ರದೇಶ ರಾಜ್ಯದ ಉಸ್ತುವಾರಿ ಅಮಿತ್ ಶಾ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಕರೆದಿದ್ದಾರೆ. ಇದಕ್ಕೆ ಕಾಂಗ್ರೆಸಿಗರ ಪ್ರತಿಕ್ರಿಯೆ ಏನೆಂದು? ಕಾದು ನೋಡಬೇಕು.












Click it and Unblock the Notifications