America and India: ಭಾರತದ ಮೇಲೆ ಗರಂ ಆದ ಅಮೆರಿಕ: ಭಾರತದ ಲೆಕ್ಕಾಚಾರ ತಲೆಕೆಳಗೆ!
ಭಾರತದ ಮೇಲೆ ಅಮೆರಿಕ ಗರಂ ಆಗಿದೆ. ಭಾರತವು ಬೇಕಾ ಬಿಟ್ಟಿ ತೆರಿಗೆ ನೀತಿಯನ್ನು ಅನುಸರಿಸುತ್ತಿದೆ. ಇದನ್ನು ಕೈಬಿಡಬೇಕು ಅಂತ ಆಗ್ರಹಿಸಲಾಗಿದೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಭಾರತದ ತೆರಿಗೆ ನೀತಿಯ ಬಗ್ಗೆ ತಕರಾರು ಶುರುವಾಗಿದೆ. ಈ ಹಿಂದೆ ಅಮೆರಿಕದಲ್ಲಿ ಅಧಿಕಾರ ನಡೆಸುವ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಭಾರತದ ತೆರಿಗೆ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಅಧಿಕಾರ ಸ್ವೀಕರಿಸುವ ಮುನ್ನವೇ ಈ ವಿಚಾರವಾಗಿ ಅವರು ತಕರಾರು ತೆಗೆದಿದ್ದಾರೆ. ಇದೀಗ ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗ್ಯಾರ್‌ಸೆಟಿ ಅವರು ಸಹ ಭಾರತದ ತೆರಿಗೆ ನೀತಿಯ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದಾರೆ. ಭಾರತವು ತೆರಿಗೆ ಮೊತ್ತವನ್ನು ಕಡಿಮೆ ಮಾಡಬೇಕು. ಹೆಚ್ಚು ತೆರಿಗೆ ವಿಧಿಸುತ್ತಿರುವುದರಿಂದಲೇ ಹಲವು ಕಂಪನಿಗಳು ಭಾರತಕ್ಕೆ ಬರುತ್ತಿಲ್ಲ ಅಂತ ಹೇಳಿದ್ದಾರೆ. ಇಂಡಿಯಾ ಟುಡೇಗೆ ಕೊಟ್ಟ ಸಂದರ್ಶನದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
ಭಾರತದ ತೆರಿಗೆ ನೀತಿಯ ಬಗ್ಗೆ ಅಮೆರಿಕ ಆಗಾಗ ಮೂಗು ತೂರಿಸುವುದು ನಡೆಯುತ್ತಲ್ಲೇ ಇದೆ. ಇದೀಗ ಭಾರತವು ತನ್ನ ತೆರಿಗೆ ನೀತಿಯನ್ನು ಬದಲಾಯಿಸಿಕೊಳ್ಳಬೇಕು ಅಂತ ಅಮೆರಿಕೆ ಪರೋಕ್ಷವಾಗಿ ಹೇಳಿದೆ. ನಿಯೋಜಿತ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆರಿಗೆ ನೀತಿಯ ಬಗ್ಗೆ ಹೇಳಿರುವುದು ಸರಿಯಾಗಿಯೇ ಇದೆ ಎಂದು ಅವರು ಟ್ರಂಪ್ ಅವರ ಮಾತುಗಳನ್ನು ಸಮರ್ಥಿಸಿಕೊಂಡಿದ್ದು. ಟ್ರಂಪ್ ಅವರು ಭಾರತದ ತೆರಿಗೆ ನೀತಿಯನ್ನು ವಿರೋಧಿಸಿ ಮಾತನಾಡಿದ್ದು ಕೆಲವೊಂದು ವಿಚಾರದಲ್ಲಿ ಸರಿ ಇದೆ ಅಂತ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾದ ಮೇಲೆ ಭಾರತ ಹಾಗೂ ಅಮೆರಿಕ ಸಂಬಂಧ ಸುಧಾರಿಸಲಿದೆ. ಅಲ್ಲದೆ ಭಾರತಕ್ಕೆ ಲಾಭೇ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಭಾರತದ ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಇದೆ. ಇದೀಗ ಅಮೆರಿಕ ಭಾರತದ ತೆರಿಗೆ ನೀತಿಯ ಬಗ್ಗೆ ಹೊಂದಿರುವ ಅಸಮಾಧಾನದ ಬಗ್ಗೆ ಎರಿಕ್ ಮಾತನಾಡಿದ್ದಾರೆ. ಅವರು ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಟ್ರಂಪ್ ಟೀಕೆಯ ಬಗ್ಗೆ ಮಾತನಾಡಿರುವ ಅವರು, ಕೆಲವು ವಿಚಾರದಲ್ಲಿ ಟ್ರಂಪ್ ಅವರು ಹೇಳಿರುವುದು ಸರಿಯಾಗಿದಯೇ ಇದೆ. ನಾವು ದೊಡ್ಡ ಮಟ್ಟದ ಹಾಗೂ ಪ್ರಮುಖ ಸಂಭಾಷಣೆಗಳನ್ನು ನಡೆಸುತ್ತಿದ್ದೇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.
ಭಾರತಕ್ಕೆ ಬರುತ್ತಿಲ್ಲ ಕಂಪನಿಗಳು
ಚೀನಾದಿಂದ ಹಲವು ಕಂಪನಿಗಳು ಹೊರಗೆ ಬರುತ್ತಿವೆ. ಆದರೆ, ಈ ರೀತಿ ಚೀನಾದಿಂದ ಹೊರಗೆ ಬರುತ್ತಿರುವ ಕಂಪನಿಗಳು ಭಾರತಕ್ಕೂ ಬರುತ್ತಿಲ್ಲ ಎಂದು ಎರಿಕ್ ಅವರು ಹೇಳಿದ್ದಾರೆ. ಇದಕ್ಕೆ ಭಾರತದ ತೆರಿಗೆ ನೀತಿಯೇ ಕಾರಣ ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತವು ತನ್ನ ತೆರಿಗೆ ನೀತಿಯನ್ನು ಬದಲಾಯಿಸಿಕೊಳ್ಳಬೇಕು. ಭಾರತಕ್ಕೆ ಕಂಪನಿಗಳು ಬರುತ್ತಿಲ್ಲ. ಏಕೆಂದರೆ ತೆರಿಗೆ ಕಡಿಮೆ ಆಗದೆ ಇದುವುದು ಸಹ ಇದಕ್ಕೊಂದು ಕಾರಣವಾಗಿದೆ. ನಾವು ಚೀನಾದ ಮೇಲೆ ಅವಲಂಬನೆ ಕಡಿಮೆ ಮಾಡಬೇಕು ಅಂತ ನಿರ್ಧರಿಸಿದ್ದೇವೆ. ಈ ರೀತಿ ಇರುವಾಗ ಭಾರತವನ್ನು ಆ ಸ್ಥಾನವನ್ನು ತುಂಬುವಂತಹ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು ಎಂಬರ್ಥದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಅಮೆರಿಕ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಸಂಭವನೀಯ ಸುಂಕವನ್ನು ವಿಧಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಚೀನಾದ ಮೇಲೆ ತೆರಿಗೆ ಹಾಕಿದರೆ ಅದು ಭಾರತಕ್ಕೆ ಮಾತ್ರ ಸಹಾಯ ಮಾಡುತ್ತದೆ. ಆದರೆ ಎಲ್ಲರ ಮೇಲೂ ತೆರಿಗೆ ಹಾಕಿದರೆ ನಾವೆಲ್ಲಾ ಒಂದೇ ದೋಣಿಯಲ್ಲಿ ಇರುವಂತೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications