Year Ender 2024: ನೀತಾ ಅಂಬಾನಿಯನ್ನೇ ಸೈಡ್‌ಲೈನ್‌ ಮಾಡಿ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್!

ಅದಾನಿ ಸಾಮ್ರಾಜ್ಯದ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿಯನ್ನೇ ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಅವರು ಸೈಡ್‌ಲೈನ್‌ ಮಾಡಿದ್ದಾರೆ. ರಾಧಿಕಾ ಮರ್ಚೆಂಟ್ ಅವರು ಅಂಬಾನಿ ಸಮೂಹಕ್ಕೆ ಸೇರಿದ ಬೆನ್ನಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಗೂಗಲ್‌ನಲ್ಲಿ 2024ರಲ್ಲಿ ಅತಿ ಹೆಚ್ಚು ಜನ ಹುಡುಕಲ್ಪಟ್ಟವರು ಯಾರು ಎನ್ನುವ ಹೆಸರು ಈಗ ಬಹಿರಂಗವಾಗಿದ್ದು, ಇದರಲ್ಲಿ ಯಾರೂ ಅಂದಾಜು ಸಹ ಮಾಡದೆ ಹೆಸರು ಸಹ ಇದೆ. ಹೌದು 2024 ಮುಕ್ತಾಯವಾಗುತ್ತಿದೆ. 2024 ಮುಕ್ತಾಯವಾಗುವುದಕ್ಕೆ ಇನ್ನು ಐದು ದಿನಗಳು ಬಾಕಿ ಉಳಿದಿರುವಾಗಲೇ ಈ ವರ್ಷ ಯಾರು ಸುದ್ದಿಯಲ್ಲಿದ್ದರು ಹಾಗೂ ಯಾರನ್ನು ಜನ ಹೆಚ್ಚುಚ್ಚು ಹುಡುಕಿದರು ಎನ್ನುವ ಕುತೂಹಲಕ್ಕೆ ಉತ್ತರ ಸಿಗುತ್ತಿದೆ. ಮುಖೇಶ್‌ ಅಂಬಾನಿ ಕುಟುಂಬದವರ ಹೊಸ ಸದಸ್ಯೆ ರಾಧಿಕಾ ಮರ್ಚೆಂಟ್ ಅವರ ಹೆಸರು ಗೂಗಲ್‌ನಲ್ಲಿ ಹೆಚ್ಚೆಚ್ಚು ಹುಡುಕಿದ ಪಟ್ಟಿಯಲ್ಲಿ ಇದೆ. ಅದರ ವಿವರ ಇಲ್ಲಿದೆ.

ಮುಖೇಶ್ ಅಂಬಾನಿ ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಅವರು ಈ ಬಾರಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟವರಲ್ಲಿ ಒಬ್ಬರಾಗಿದ್ದಾರೆ. ಹೌದು ಗೂಗಲ್‌ನ 2024 ರ ವರದಿಯ ಪ್ರಕಾರ, ಭಾರತದಲ್ಲಿ ಹೆಚ್ಚು ಜನ ಹುಡುಕಲ್ಪಟ್ಟವರಲ್ಲಿ ರಾಧಿಕಾ ಮರ್ಚೆಂಟ್ ಸಹ ಒಬ್ಬರಾಗಿದ್ದರೆ. ಮುಖೇಶ್ ಅಂಬಾನಿ ಅವರ ಕುಟುಂಬವು ದೇಶದ ಪ್ರಮುಖ ಹಾಗೂ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ.

Ambani daughter-in-law Radhika Merchant sidelines Nita Ambani

ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಅಂಬಾನಿ ಕುಟುಂಬ ಹಾಗೂ ಉದ್ಯಮ ಒಂದಿಲ್ಲೊಂದು ವಿಷಯದಿಂದ ಸದಾ ಸುದ್ದಿಯಲ್ಲಿ ಇರುತ್ತದೆ. ಆದರೆ, ಈ ಬಾರಿ ಅಂಬಾನಿ ಅವರಿಗಿಂತ ಅವರ ಸೊಸೆ ರಾಧಿಕಾ ಮರ್ಚೆಂಟ್ ಅವರ ಬಗ್ಗೆ ಹೆಚ್ಚು ಜನ ಹುಡುಕಾಡಿದ್ದಾರೆ. ಭಾರತದಲ್ಲಿ ಹೆಚ್ಚು ಜನ ಹುಡುಕಿದ ಟಾಪ್ 10 ನಲ್ಲಿ ರಾಧಿಕಾ ಮರ್ಚೆಂಟ್ ಅವರು ಸ್ಥಾನ ಪಡೆದುಕೊಂಡಿದೆ.

ಮುಖೇಶ್ ಅಂಬಾನಿ ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಅವರ ಭಾರತದಲ್ಲಿ 2024ರಲ್ಲಿ ಹೆಚ್ಚು ಜನ ಗೂಗಲ್ ಹುಡುಕಿದವರಲ್ಲಿ 8 ನೇ ಸ್ಥಾನದಲ್ಲಿದ್ದಾರೆ. ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹವು ದೇಶ ಹಾಗೂ ವಿದೇಶದಲ್ಲಿ ಸುದ್ದಿ ಮಾಡಿತ್ತು.

ಅಂಬಾನಿ ಉದ್ಯಮ ಸಾಮ್ರಾಜ್ಯದ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಸೊಸೆ ರಾಧಿಕಾ ಮರ್ಚೆಂಟ್ 2024 ರಲ್ಲಿ ಭಾರತದಲ್ಲೇ ಹೆಚ್ಚು ಜನ ಹುಡುಕಿದವರಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.

Ambani daughter-in-law Radhika Merchant sidelines Nita Ambani

ಅದ್ಧೂರಿ ವಿವಾಹ ಕಾರಣ: ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹವು 2024ರಲ್ಲಿ ನಡೆದಿತ್ತು. ವಿವಾಹ ಹಾಗೂ ವಿವಾಹ ಪೂರ್ವ ಕಾರ್ಯಕ್ರಮಗಳು ದೇಶದಾದ್ಯಂತ ಸದ್ದು ಮಾಡಿತ್ತು. ಅಲ್ಲದೆ ಈ ಕಾರ್ಯಕ್ರಮಕ್ಕೆ ವಿದೇಶದಿಂದಲೂ ಸೆಲೆಬ್ರಟಿಗಳು ಬಂದಿದ್ದರು. ಇದೇ ವರ್ಷ ಜುಲೈ 12 ರಂದು ಅನಂತ್ ಅಂಬಾನಿ ಅವರೊಂದಿಗೆ ರಾಧಿಕಾ ಮರ್ಚೆಂಟ್ ಅವರು ವಿವಾಹವಾಗಿದ್ದರು. ಈ ವಿವಾಹವು ರಾಷ್ಟ್ರದಾದ್ಯಂತ ಚರ್ಚೆಗೆ ಕಾರಣವಾಗಿತ್ತು. ವಿವಾಹ ಹಾಗೂ ವಿವಾಹ ಪೂರ್ವ ಕಾರ್ಯಕ್ರಮಗಳು ಹಲವು ತಿಂಗಳುಗಳ ಕಾಲ ನಡೆದಿತ್ತು. ಈ ವರ್ಷ ಅತಿ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಈ ವಿವಾಹವೂ ಒಂದಾಗಿತ್ತು.

ವಿವಾಹಪೂರ್ವ ಉತ್ಸವಗಳಲ್ಲಿ ಮೆಹೆಂದಿ, ಅರಿಶಿಣ ಶಾಸ್ತ್ರ ಸಮಾರಂಭ ಹಾಗೂ ಮೂರು ದಿನಗಳ ಅದ್ಧೂರಿ ಮದುವೆ ಸ್ವರ್ಗಲೋಕವೇ ಧರೆಗೆ ಇಳಿದಂತೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+