Covid Data Leak: ಇದು ಇಡೀ ಭಾರತವೇ ಬೆಚ್ಚಿ ಬೀಳುವ ಸುದ್ದಿ!
ನವದೆಹಲಿ: ಸೈಬರ್ ಕಳ್ಳರು ಏನೆಲ್ಲಾ ಮಾಡ್ತಾರೆ ಅನ್ನೋದು ಬಹುತೇಕರಿಗೆ ಗೊತ್ತಿರುತ್ತೆ. ಅದರಲ್ಲೂ ಕಣ್ಣು ಮುಚ್ಚಿ ಬಿಡುವುದರ ಒಳಗೆ ಕೋಟ್ಯಂತರ ರೂಪಾಯಿ ಹಣವನ್ನೂ ಈ ಆನ್‌ಲೈನ್ ಖದೀಮರು ಮಾಯ ಮಾಡುತ್ತಾರೆ. ಆದರೆ ಈಗ ಅದಕ್ಕಿಂತಲೂ ಭೀಕರ ಸುದ್ದಿ ಹೊರಬಿದ್ದಿದೆ. 81 ಕೋಟಿಗೂ ಹೆಚ್ಚು ಭಾರತೀಯರ ಕೊರೊನಾ ಪರೀಕ್ಷಾ ಮಾಹಿತಿಯೇ, ಇದೀಗ ಮಾರಾಟ ಆಗಿದೆ ಎಂಬ ಆಘಾತಕಾರಿ ಮಾಹಿತಿ ಹಾಗೂ ಆರೋಪ ಹೊರಬಿದ್ದಿದೆ.
Where Is Data Protection Bill ❓
— তন্ময় l T͞anmoy l (@tanmoyofc) October 30, 2023
𝐂𝐨𝐮𝐧𝐭𝐫𝐲' 𝐁𝐢𝐠𝐠𝐞𝐬𝐭 𝐃𝐚𝐭𝐚 𝐋𝐞𝐚𝐤𝐞𝐝
COVID-19 test details, including names, Aadhaar and passport information, phone numbers and addresses, of 81.5 crore Indians with the Indian Council of Medical Research (ICMR) have been… pic.twitter.com/UNbCUx0N3m
Where Is Data Protection Bill ❓
𝐂𝐨𝐮𝐧𝐭𝐫𝐲' 𝐁𝐢𝐠𝐠𝐞𝐬𝐭 𝐃𝐚𝐭𝐚 𝐋𝐞𝐚𝐤𝐞𝐝
COVID-19 test details, including names, Aadhaar and passport information, phone numbers and addresses, of 81.5 crore Indians with the Indian Council of Medical Research (ICMR) have been… pic.twitter.com/UNbCUx0N3m
ಅಷ್ಟಕ್ಕೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಬಳಿ ಸುಮಾರು 81.5 ಕೋಟಿ ಭಾರತೀಯರ ಕೊರೊನಾ ಪರೀಕ್ಷೆ ಮಾಹಿತಿ ಇತ್ತು ಎನ್ನಲಾಗಿದೆ. ಆದ್ರೆ ಈ ಮಾಹಿತಿ ಇದೀಗ ಮಾರಾಟವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ದೂರು ನೀಡಿದರೆ ಸಿಬಿಐ ತನಿಖೆ ನಡೆಸುವ ಸಾಧ್ಯತೆ ಇದೆ. ಹಾಗೇ, ಭಾರತದಲ್ಲಿ ನಡೆದಿರಬಹುದು ಎನ್ನಲಾಗಿರುವ ಅತ್ಯಂತ ದೊಡ್ಡ ಮಾಹಿತಿ ಸೋರಿಕೆ ಪ್ರಕರಣ ಕೂಡ ಇದಾಗಲಿದೆ. ಹೀಗೆ ಈ ವಿಚಾರ ಎಲ್ಲೆಲ್ಲೂ ಸಂಚಲನ ಸೃಷ್ಟಿಸಿದ್ದು, ತನಿಖೆ ನಂತರ ಎಲ್ಲವೂ ಬಯಲಾಗಲಿದೆ.

ಮಾಹಿತಿ ಮಾರಾಟವಾಗಿದ್ದು ಎಲ್ಲಿ?
ಒಟ್ಟಾರೆ 81.5 ಕೋಟಿ ಭಾರತೀಯರ ಮಹತ್ವದ ದಾಖಲೆ ಮತ್ತು ವೈಯುಕ್ತಿಕ ಮಾಹಿತಿಯನ್ನ ಒಳಗೊಂಡಿದ್ದ ಡೇಟಾ ಸೋರಿಕೆಯನ್ನು ಅಮೆರಿಕ ಸೈಬರ್ ಸೆಕ್ಯೂರಿಟಿ ಮತ್ತು ಗುಪ್ತಚರ ಸಂಸ್ಥೆ ಗಮನಿಸಿ ಎಚ್ಚರಿಸಿದೆ ಎನ್ನಲಾಗಿದೆ. ಅಕ್ಟೋಬರ್ 9 ರಂದು ಅಮೆರಿಕ ಸಂಸ್ಥೆ ಎಚ್ಚರಿಕೆಯನ್ನು ನೀಡಿದೆ. ಡಾರ್ಕ್‌ವೆಬ್ ಮೂಲಕ ಭಾರತೀಯರ ಡೇಟಾ ಮಾರಾಟಕ್ಕಿಟ್ಟಿರುವ ಮಾಹಿತಿಯನ್ನು ಪತ್ತೆ ಹಚ್ಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸೂಕ್ತ ತನಿಖೆಗೆ ಆಗ್ರಹ ಕೂಡ ಇದೀಗ ಕೇಳಿಬಂದಿದೆ.












Click it and Unblock the Notifications