'ಸೆಕ್ಸ್ ಸಿಡಿ' ಬಿಜೆಪಿಯ ಕೊಳಕು ರಾಜಕೀಯ : ಕಿಡಿಕಾರಿದ ಹಾರ್ದಿಕ್

Subscribe to Oneindia Kannada

ಅಹಮದಾಬಾದ್, ನವೆಂಬರ್ 13: ಹಾರ್ದಿಕ್ ಪಟೇಲ್ ನುಡಿದ ಭವಿಷ್ಯದಂತೆ ಗುಜರಾತ್ ಚುನಾವಣೆಗೂ ಮುನ್ನ ಸೆಕ್ಸ್ ಸಿಡಿಯೊಂದು ಬಿಡುಗಡೆಯಾಗಿದೆ. ಇದರಲ್ಲಿರುವುದು ಹಾರ್ದಿಕ್ ಪಟೇಲ್ ಎನ್ನಲಾಗಿದೆ.

ಸಿಡಿ ಹೊರ ಬರುತ್ತಿದ್ದಂತೆ ಈ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದ ಹಾರ್ದಿಕ್ ಪಟೇಲ್ ಕಿಡಿಕಿಡಿಯಾಗಿದ್ದು, ಇವೆಲ್ಲಾ ಬಿಜೆಪಿಯ ಕೊಳಕು ರಾಜಕೀಯ ತಂತ್ರಗಳು ಎಂದು ಹರಿಹಾಯ್ದಿದ್ದಾರೆ.

Alleged Hardik Patel sex video surfaces, he says it’s a BJP ploy

ಈ ಸಂಬಂಧ ಟ್ವೀಟ್ ಮಾಡಿರುವ ಹಾರ್ದಿಕ್ ಪಟೇಲ್, "ಕೊಳಕು ರಾಜಕೀಯ ಈಗ ಆರಂಭವಾಗಿದೆ. ನಿಮಗೆ ಇಷ್ಟ ಬಂದ ಹಾಗೆ ತೇಜೋವಧೆ ಮಾಡಿ, ಇದರಿಂದ ನನಗೇನೂ ಆಗುವುದಿಲ್ಲ. ಆದರೆ ಇದು ಗುಜರಾತ್ ನ ಮಹಿಳೆಯರಿಗೆ ಮಾಡಿದ ಅವಮಾನ," ಎಂದಿದ್ದಾರೆ.

ವಿಡಿಯೋ ವೈರಲಾಯ್ತು, ಹಾರ್ದಿಕ್ ಆತಂಕ ನಿಜವಾಯ್ತು

"ನಾನು ಇದನ್ನು ಮೊದಲೇ ಹೇಳಿದ್ದೆ. ಇದೇ ಜನರು ಸಂಜಯ್ ಜೋಷಿ ಬೆಳೆಯುತ್ತಿದ್ದಾನೆ ಎಂದಾಗ ಸಿಡಿ ಬಿಡುಗಡೆ ಮಾಡಿದ್ದರು. ಬಿಜೆಪಿ ಇದನ್ನು ಹಿಂದೆಯೂ ಮಾಡಿದೆ. ಮುಂದೆಯೂ ಇದನ್ನು ಮುಂದುವರಿಸಲಿದೆ. ಅಧಿಕಾರದ ಆಸೆಗೆ ಯಾವ ಮಹಿಳೆಯರನ್ನು ಹೇಗೆ ಬೇಕಾದರೂ ಇವರು ಬಳಸಿಕೊಳ್ಳುತ್ತಾರೆ ಎಂಬುದನ್ನು ಗುಜರಾತಿನ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ," ಎಂದು ಅಭಿಪ್ರಾಯಪಟ್ಟಿದ್ದಾರೆ.

"ಅವರು (ಬಿಜೆಪಿ) ರಾಜಕೀಯವಾಗಿ ಮಾತ್ರ ಹೋರಾಡುತ್ತಿದ್ದರೆ ಒಳ್ಳೆಯದು. ಆದರೆ ಈಗ ಅವರು ಇಂಥಹ ಮಟ್ಟಕ್ಕೆ ಇಳಿದಿದ್ದಾರೆ. ಹೀಗಿದ್ದೂ ನನಗೆ ಏನೂ ವ್ಯತ್ಯಾಸವಾಗುವುದಿಲ್ಲ. ಗುಜರಾತಿನ ಆರು ಕೋಟಿ ಜನರು ನನ್ನ ಜತೆ ಇದ್ದಾರೆ," ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With Hardik Patel and the Congress likely to strike a deal ahead of the Assembly polls, an alleged sex video of 24-year-old Patidar leader Hardik Patel has gone viral on Monday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ