ಅಲಹಾಬಾದ್ ಅಲ್ರೀ, ಅದು ಪ್ರಯಾಗರಾಜ್!
ಅಲಹಾಬಾದ್, ಮೇ 24: ಉತ್ತರ ಪ್ರದೇಶದ ಅಲಹಾಬಾದ್ ಇದೆಯಲ್ಲ, ಅದು ಅಲಹಾಬಾದ್ ಅಲ್ಲ, ಪ್ರಯಾಗರಾಜ್! ಹೌದು ಅಲಹಾಬಾದಿನ ಹೆಸರನ್ನು ಪ್ರಯಾಗರಾಜ್ ಎಂದು ಬದಲಿಸಲು ಅಥವಾ ಮರುನಾಮಕರಣ ಮಾಡಲು ಚಿಂತನೆ ನಡೆಯುತ್ತಿದ್ದು ಮುಂದಿನ ಕುಂಭಮೇಳದ ಸಮಯದಲ್ಲಿ ಹೆಸರು ಬದಲಾದರೆ ಅಚ್ಚರಿಯಿಲ್ಲ.
ಪುರಾಣ ಪ್ರಸಿದ್ಧ ಪ್ರಯಾಗದ ಹೆಸರು ಮೊಘಲರ ಕಾಲದಲ್ಲಿ ಬದಲಾಗಿದೆ ಎಂದು ಕೆಲವು ಉಲ್ಲೇಖಗಳು ತಿಳಿಸುತ್ತವೆ. ಗಂಗ, -ಯಮುನಾ, ಸರಸ್ವತಿ ನದಿಗಳು ಸಂಧಿಸುವ ಈ ಸ್ಥಳದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ.
ಅಲಹಾಬಾದ್ ಬದಲಿಗೆ ಪ್ರಯಾಗ ಎಂದು ಹೆಸರಿಡುವ ಮೂಲಕ ಗತ ವೈಭವ ಮರುಕಳಿಸುವಂತೆ ಮಾಡಲಾಗುವುದು ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.

2019 ರಲ್ಲಿ ನಡೆಯಲಿರುವ ಕುಂಭಮೇಳದ ಶುಭ ಸಂದರ್ಭದಲ್ಲಿ ನಗರವನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.












Click it and Unblock the Notifications