Ajit Pawar Death: ಜನಸಾಮಾನ್ಯರ ಪಾಲಿಗೆ ಕಾಯಕ ಯೋಗಿ, ಸರ್ಕಾರಿ ಯಂತ್ರಕ್ಕೆ ಮ್ಯಾನ್ ಆಫ್ ಆಕ್ಷನ್
ಮುಂಬೈ: ಮಹಾರಾಷ್ಟ್ರದ ರಾಜಕೀಯ ಇತಿಹಾಸದಲ್ಲಿ ಅಜಿತ್ ಅನಂತರಾವ್ ಪವಾರ್ ಎಂಬ ಹೆಸರು ಕೇವಲ ಒಬ್ಬ ವ್ಯಕ್ತಿಯದ್ದಲ್ಲ; ಅದು ಅಧಿಕಾರ ಮತ್ತು ಆಡಳಿತದ ಪರ್ಯಾಯ ಪದವಾಗಿತ್ತು. ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಅವರ ಅಕಾಲಿಕ ನಿಧನವು ರಾಜ್ಯದ ರಾಜಕಾರಣದಲ್ಲಿ ತುಂಬಲಾರದ ನೋವನ್ನು ಸೃಷ್ಟಿಸಿದೆ. ಮೊದಲು ಶರದ್ ಪವಾರ್ ಅವರ ನೆರಳಿನಲ್ಲಿ ಬೆಳೆದರೂ, ಕಾಲಕ್ರಮೇಣ ತಮ್ಮದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಂಡ ಅಜಿತ್ ಪವಾರ್, 'ಮಹಾರಾಷ್ಟ್ರದ ರಾಜಕೀಯದಲ್ಲಿ ಅನಿವಾರ್ಯ ನಾಯಕ'ನಾಗಿ ಬೆಳೆದಿದ್ದು ಒಂದು ರೋಚಕ ಇತಿಹಾಸ.
ಮ್ಯಾನ್ ಆಫ್ ಆಕ್ಷನ್
ಅಜಿತ್ ಪವಾರ್ ಅವರನ್ನು ಬೆಂಬಲಿಗರು ಮತ್ತು ವಿರೋಧಿಗಳು ಇಬ್ಬರೂ ಒಪ್ಪಿಕೊಳ್ಳುವ ಒಂದು ವಿಷಯವೆಂದರೆ ಅವರ 'ಆಡಳಿತಾತ್ಮಕ ದಕ್ಷತೆ' ಅಂದರೆ ಆಡಳಿತದ ಮೇಲಿರುವ ಅವರ ಅದ್ಭುತ ಹಿಡಿತ. ಕಡತಗಳನ್ನು ವಿಲೇವಾರಿ ಮಾಡುವುದರಲ್ಲಿ, ಅಧಿಕಾರಿಗಳಿಂದ ಕೆಲಸ ತೆಗೆಸುವುದರಲ್ಲಿ ಅವರು ಎತ್ತಿದ ಕೈ. ಬೆಳಿಗ್ಗೆ 6 ಗಂಟೆಗೆ ಕಚೇರಿಯಲ್ಲಿ ಹಾಜರಿರುತ್ತಿದ್ದ ಅವರ ಶಿಸ್ತು ಇಂದಿನ ರಾಜಕಾರಣಿಗಳಲ್ಲಿ ಅಪರೂಪ. ಅವರು ಜಲಸಂಪನ್ಮೂಲ, ಹಣಕಾಸು ಮತ್ತು ಇಂಧನ ಖಾತೆಗಳನ್ನು ನಿಭಾಯಿಸಿದ ರೀತಿ ರಾಜ್ಯದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ. "ಅಜಿತ್ ದಾದಾ ಇದ್ದರೆ ಕೆಲಸ ಆಗುತ್ತದೆ" ಎಂಬ ಭರವಸೆ ಜನಸಾಮಾನ್ಯರಲ್ಲಿತ್ತು.

ಅಜಿತ್ ಪವಾರ್ ಅವರ ರಾಜಕೀಯ ಜೀವನದ ಅಡಿಪಾಯವೇ 'ಬಾರಾಮತಿ'. ಪುಣೆ ಜಿಲ್ಲೆಯ ಈ ಕ್ಷೇತ್ರವನ್ನು ಅವರು ಕೇವಲ ಒಂದು ಮತಕ್ಷೇತ್ರವಾಗಿ ನೋಡದೆ, ಅದನ್ನು ಅಭಿವೃದ್ಧಿಯ ಪ್ರಯೋಗಶಾಲೆಯನ್ನಾಗಿ ಮಾಡಿದರು. ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳು (ವಿದ್ಯಾ ಪ್ರತಿಷ್ಠಾನ), ಅಗಲವಾದ ರಸ್ತೆಗಳು, ಸುಸಜ್ಜಿತ ಆಸ್ಪತ್ರೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಬಾರಾಮತಿಯನ್ನು ದೇಶದ 'ಮಾದರಿ ಕ್ಷೇತ್ರ'ವನ್ನಾಗಿ ರೂಪಿಸಿದರು. 1991 ರಿಂದ ಇಲ್ಲಿಯವರೆಗೆ ಅವರು ಎಂದೂ ಸೋಲನ್ನೇ ಕಂಡಿಲ್ಲ ಎಂಬುದು ಈ ಅಭಿವೃದ್ಧಿಗೆ ಸಾಕ್ಷಿ.
ಪಶ್ಚಿಮ ಮಹಾರಾಷ್ಟ್ರ, ವಿಶೇಷವಾಗಿ ಪುಣೆ ಮತ್ತು ಬಾರಾಮತಿ ಭಾಗದಲ್ಲಿ ಅಜಿತ್ ಪವಾರ್ ಅವರ ಮಾತು ವೇದವಾಕ್ಯವಾಗಿತ್ತು. ಈ ಭಾಗಗಳಲ್ಲಿ ರಾಜಕಾರಣ ನಿಂತಿರುವುದೇ ಸಹಕಾರಿ ರಂಗದ ಮೇಲೆ. ಅಜಿತ್ ಪವಾರ್ ಅವರು ಪುಣೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (PDCC) ಅಧ್ಯಕ್ಷರಾಗಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸಕ್ಕರೆ ಕಾರ್ಖಾನೆಗಳು, ಹಾಲು ಒಕ್ಕೂಟಗಳು ಮತ್ತು ಸ್ಪಿನ್ನಿಂಗ್ ಮಿಲ್‌ಗಳ ಮೇಲೆ ಅವರು ಹೊಂದಿದ್ದ ಹಿಡಿತ ಅಚಲವಾಗಿತ್ತು. ರೈತರ ಆರ್ಥಿಕ ನಾಡಿಮಿಡಿತವನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು. ಇದೇ ಕಾರಣಕ್ಕೆ, ಯಾವುದೇ ಸರ್ಕಾರ ಬಂದರೂ ಅಜಿತ್ ಪವಾರ್ ಅವರನ್ನು ಕಡೆಗಣಿಸಲು ಸಾಧ್ಯವಾಗುತ್ತಿರಲಿಲ್ಲ.
ಶರದ್ ಪವಾರ್ ಅವರು ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾಗ, ತಳಮಟ್ಟದಲ್ಲಿ ಪಕ್ಷವನ್ನು ಮತ್ತು ಸಂಘಟನೆಯನ್ನು ಕಟ್ಟಿದ್ದು ಅಜಿತ್ ಪವಾರ್. ಕಾರ್ಯಕರ್ತರ ಕಷ್ಟಸುಖಗಳಿಗೆ ಸ್ಪಂದಿಸುವ ಗುಣ ಅವರನ್ನು 'ದಾದಾ' ಆಗಿ ಮಾಡಿತ್ತು. ಜನರು ಪವಾರ್ ಅವರನ್ನು ಪ್ರೀತಿಯಿಂದ ಬಾರಾಮತಿಯ ʼದಾದಾʼ ಎಂದೇ ಕರೆಯುತ್ತಿದ್ದರು.
ಹಣಕಾಸು ಮತ್ತು ನೀರಾವರಿ ಖಾತೆಗಳ ಸರದಾರ
ಅಜಿತ್ ಪವಾರ್ ಅವರು ಅತಿ ಹೆಚ್ಚು ಬಾರಿ (6 ಬಾರಿ) ಉಪಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದಾರೆ. ಅದರಲ್ಲೂ ಹಣಕಾಸು ಮತ್ತು ಯೋಜನಾ ಖಾತೆಯನ್ನು ನಿಭಾಯಿಸುವುದರಲ್ಲಿ ಅವರು ನಿಸ್ಸೀಮರು. ರಾಜ್ಯದ ಬಜೆಟ್ ಮಂಡಿಸುವಾಗ ತಮ್ಮ ಬೆಂಬಲಿಗ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡುವಲ್ಲಿ ತೋರುತ್ತಿದ್ದ ಚಾಣಾಕ್ಷತನ, ಶಾಸಕರ ಮೇಲೆ ಅವರು ಹಿಡಿತ ಸಾಧಿಸಲು ಕಾರಣವಾಗಿತ್ತು. ಜಲಸಂಪನ್ಮೂಲ ಸಚಿವರಾಗಿದ್ದಾಗ ಹಲವು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದರೂ, 70,000 ಕೋಟಿ ರೂ. ನೀರಾವರಿ ಹಗರಣದ ಆರೋಪ ಅವರ ರಾಜಕೀಯ ಜೀವನದ ಕಪ್ಪು ಚುಕ್ಕೆಯಾಗಿ ಉಳಿದಿತ್ತು. ಆದರೂ, ಆ ಎಲ್ಲಾ ಆರೋಪಗಳನ್ನು ಮೆಟ್ಟಿನಿಂತು ಮತ್ತೆ ಅಧಿಕಾರಕ್ಕೇರುವ ಛಲ ಅವರಲ್ಲಿತ್ತು.
ರಾಜಕೀಯದ ಗೇಮ್ ಚೇಂಜರ್
ಅಜಿತ್ ಪವಾರ್ ಅವರ ರಾಜಕೀಯ ನಡೆಗಳು ಊಹಿಸಲಸಾಧ್ಯವಾಗಿದ್ದವು. 2019 ರಲ್ಲಿ ಮುಂಜಾನೆ ದೇವೇಂದ್ರ ಫಡ್ನವೀಸ್ ಜೊತೆ ಕೈಜೋಡಿಸಿ ಸರ್ಕಾರ ರಚಿಸಿದ್ದು, ನಂತರ ಉಲ್ಟಾ ಹೊಡೆದು ಮಹಾ ವಿಕಾಸ್ ಅಘಾಡಿ (MVA) ಸರ್ಕಾರ ಸೇರಿದ್ದು, ಮತ್ತು 2023 ರಲ್ಲಿ ಎನ್‌ಸಿಪಿ ಪಕ್ಷವನ್ನೇ ಇಬ್ಬಾಗ ಮಾಡಿ ಶಿಂಧೆ-ಫಡಣವೀಸ್ ಸರ್ಕಾರ ಸೇರಿದ್ದು ಅವರ ರಾಜಕೀಯ ತಂತ್ರಗಾರಿಕೆಗೆ ಸಾಕ್ಷಿ. "ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶತ್ರುಗಳೂ ಇಲ್ಲ" ಎಂಬ ಮಾತನ್ನು ಅವರು ಅಕ್ಷರಶಃ ಪಾಲಿಸಿದ್ದರು.
ಇಂದು ಅಜಿತ್ ಪವಾರ್ ಭೌತಿಕವಾಗಿ ಇಲ್ಲದಿರಬಹುದು. ಆದರೆ, ಬಾರಾಮತಿಯ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಯಲ್ಲೂ, ಮಹಾರಾಷ್ಟ್ರದ ಸಹಕಾರಿ ರಂಗದ ಯಶಸ್ಸಿನಲ್ಲೂ ಅವರ ಹೆಸರು ಶಾಶ್ವತವಾಗಿ ಉಳಿಯಲಿದೆ. ಒಬ್ಬ ಆಡಳಿತಗಾರನಾಗಿ, ಸಂಘಟಕರಾಗಿ ಮತ್ತು ನಿರ್ಧಾರ ತೆಗೆದುಕೊಳ್ಳುವ ನಾಯಕನಾಗಿ ಅಜಿತ್ ಪವಾರ್ ಅವರ ಸ್ಥಾನವನ್ನು ತುಂಬುವುದು ಯಾರಿಗೂ ಸಾಧ್ಯವಿಲ್ಲ.
VIDEO | Maharashtra Deputy Chief Minister Ajit Pawar and five other persons were killed after an aircraft carrying them crashed in Pune district. Visuals from spot.
— Press Trust of India (@PTI_News) January 28, 2026
(Source: Third Party) pic.twitter.com/6UnMLKwqtp
-
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ತಮಿಳುನಾಡು ಚುನಾವಣೆ 2026: ಟಿವಿಎಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಎರಡು ಕ್ಷೇತ್ರಗಳಿಂದ ನಟ ದಳಪತಿ ವಿಜಯ್ ಸ್ಪರ್ಧೆ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications