ವಿಮಾನ ನಿಲ್ದಾಣದಲ್ಲಿ ಕಡಿಮೆ ಬೆಲೆಗೆ ಸಿಗಲಿದೆ ಕಾಫಿ, ಟೀ

ಬೆಂಗಳೂರು, ಸೆಪ್ಟೆಂಬರ್ 09 : ವಿಮಾನ ನಿಲ್ದಾಣದಲ್ಲಿ ಕಾಫಿ, ಟೀ ಮತ್ತು ಉಪಹಾರದ ಬೆಲೆ ಹೆಚ್ಚು ಎಂಬ ಆರೋಪ ಹಿಂದಿನಿಂದಲೂ ಇದೆ. ಶೀಘ್ರದಲ್ಲೇ ಕಡಿಮೆ ಬೆಲೆಯಲ್ಲಿ ಆಹಾರ ಒದಗಿಸುವ ಕ್ಯಾಂಟೀನ್‌ಗಳು ಆರಂಭವಾಗಲಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕಡಿಮೆ ದರದಲ್ಲಿ ಉಪಹಾರ, ಕಾಫಿ, ಟೀ ಒದಗಿಸುವ ಕ್ಯಾಂಟೀನ್‌ಗಳನ್ನು ನಿಲ್ದಾಣಗಳಲ್ಲಿ ಆರಂಭಿಸಲಿದೆ. ದೇಶದ ಕೆಲವು ಆಯ್ದ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಕ್ಯಾಂಟೀನ್ ಆರಂಭಿಸಲಾಗಿದೆ.

ಕೆಲವೇ ದಿನಗಳಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ತನ್ನದೇ ಆದ ಕ್ಯಾಂಟೀನ್‌ಗಳನ್ನು ಆರಂಭಿಸಿದೆ. ಎಂಆರ್‌ಪಿ ಬೆಲೆಗೆ ಆಯ್ದ ತಂಪು ಪಾನೀಯ ಮತ್ತು ನೀರಿನ ಬಾಟಲಿಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.

Airport Authority Of India to set up canteen in all airport

ಮಾರ್ಚ್ ತಿಂಗಳಿನಲ್ಲಿ ಸಂಸತ್‌ನಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಹಣಕಾಸು ಖಾತೆಯ ಮಾಜಿ ಸಚಿವ ಪಿ.ಚಿದಂಬರಂ ಅವರು ಸಹ ವಿಮಾನ ನಿಲ್ದಾಣದಲ್ಲಿನ ಅಧಿಕ ಬೆಲೆಯ ಕುರಿತು ಟ್ವೀಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+