ಏಪ್ರಿಲ್ 1 ರಿಂದ ದುಬಾರಿಯಾಗಲಿದೆ ವಿಮಾನಯಾನ ಟಿಕೆಟ್ ದರ
ನವದೆಹಲಿ, ಮಾರ್ಚ್ 30: ಏಪ್ರಿಲ್ 1 ರಿಂದ ವಿಮಾನಯಾನ ಟಿಕೆಟ್ ದರಗಳು ಏರಿಕೆಯಾಗಲಿವೆ.
ದೇಶದೊಳಗೆ ಸಂಚರಿಸುವ ಪ್ರತಿ ಪ್ರಯಾಣಿಕರಿಗೆ ವಿಮಾನಯಾನ ಭದ್ರತಾ ಶುಲ್ಕ 200 ರೂ., ಅಂತಾಷ್ಟ್ರೀಯ ಪ್ರಯಾಣಿಕರಿಗೆ 12 ಅಮೆರಿಕನ್ ಡಾಲರ್ ಅಥವಾ ಅಷ್ಟೇ ಬೆಲೆಯ ಭಾರತೀಯ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇದುವರೆಗೆ 160 ಮತ್ತು 5.20 ಡಾಲರ್ ಶುಲ್ಕ ಇತ್ತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
ಹೊಸ ವಿಮಾನಯಾನ ಭದ್ರತಾ ಶುಲ್ಕ ಏಪ್ರಿಲ್ 1 ರಿಂದ ಖರೀದಿಸುವ ಟಿಕೆಟ್‌ಗಳಿಗೆ ಅನ್ವಯವಾಗಲಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಮಾನಯಾನ ಭದ್ರತಾ ಶುಲ್ಕವನ್ನು ಹೆಚ್ಚಳ ಮಾಡಲಾಗಿತ್ತು.

ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಳ, ಪ್ರಯಾಣಿಕರು ಹಾಗೂ ಅವರ ಲಗೇಜ್‌ಗಳ ತಪಾಸಣೆ ಸೇರಿದಂತೆ ವಿವಿಧ ಭದ್ರತಾ ಸೇವೆಗಳಿಗೆ ನೀಡುವ ವಿಮಾನಯಾನ ಭದ್ರತಾ ಶುಲ್ಕ ನಾಗರಿಕ ವಿಮಾನಯಾನ ನಿಯಂತ್ರಕರು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ವಿಮಾನಯಾನದ ಟಿಕೆಟ್‌ಗಳು ದುಬಾರಿಯಾಗಲಿವೆ.












Click it and Unblock the Notifications